- Kannada News Photo gallery Cricket photos 2026 T20 World Cup: India, Sri Lanka Hosts; First 6 Teams Announced
T20 World Cup 2026: ಟಿ20 ವಿಶ್ವಕಪ್‌ಗೆ 6 ತಂಡಗಳು ಪ್ರಕಟ
T20 World Cup 2026: 2026ರ ಟಿ20 ವಿಶ್ವಕಪ್‌ಗೆ ಭಾರತ ಮತ್ತು ಶ್ರೀಲಂಕಾ ಆತಿಥ್ಯ ವಹಿಸಲಿವೆ. ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ 20 ತಂಡಗಳು ಸ್ಪರ್ಧಿಸಲಿವೆ. ಇದುವರೆಗೆ 6 ತಂಡಗಳ ವಿವರಗಳನ್ನು ಪ್ರಕಟಿಸಲಾಗಿದೆ. ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಓಮನ್, ಇಂಗ್ಲೆಂಡ್, ಅಫ್ಘಾನಿಸ್ತಾನ ತಂಡಗಳು ಸೇರಿವೆ. ಸೂರ್ಯಕುಮಾರ್ ಯಾದವ್, ಮಿಚೆಲ್ ಮಾರ್ಷ್, ರಶೀದ್ ಖಾನ್ ಸೇರಿದಂತೆ ಪ್ರಮುಖ ಆಟಗಾರರು ಈ ತಂಡಗಳ ಭಾಗವಾಗಿದ್ದಾರೆ.
Updated on: Jan 01, 2026 | 5:56 PM

2026 ರ ಟಿ20 ವಿಶ್ವಕಪ್‌ಗೆ ಭಾರತ ಹಾಗೂ ಶ್ರೀಲಂಕಾ ಆತಿಥ್ಯ ನೀಡುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೆ. 20 ತಂಡಗಳ ನಡುವೆ ನಡೆಯಲಿರುವ ಈ ಮಿನಿ ವಿಶ್ವ ಸಮರ ಫೆಬ್ರವರಿ 7 ರಿಂದ ಆರಂಭವಾಗಿ, ಮಾರ್ಚ್ 8 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಪಂದ್ಯಾವಳಿಗಾಗಿ ಇದುವರೆಗೆ 6 ತಂಡಗಳು ಪ್ರಕಟವಾಗಿದ್ದು, ಆ 6 ತಂಡಗಳ ವಿವರ ಇಲ್ಲಿದೆ.

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರಿಂಕು ಸಿಂಗ್.

ಆಸ್ಟ್ರೇಲಿಯಾ: ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕಾನೊಲಿ, ಪ್ಯಾಟ್ ಕಮ್ಮಿನ್ಸ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ನಾಥನ್ ಎಲ್ಲಿಸ್, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಥ್ಯೂ ಶಾರ್ಟ್, ಮಾರ್ಕಸ್ ಸ್ಟೊಯಿನಿಸ್, ಆಡಮ್ ಜಂಪಾ.

ಶ್ರೀಲಂಕಾ ತಾತ್ಕಾಲಿಕ ತಂಡ: ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್, ಕಮಿಲ್ ಮಿಶ್ರಾ, ಕುಸಲ್ ಪೆರೇರಾ, ಧನಂಜಯ ಡಿ ಸಿಲ್ವ, ನಿರೋಶನ್ ಡಿಕ್ವೆಲ್ಲಾ, ಜನಿತ್ ಲಿಯಾನಗೆ, ಚರಿತ್ ಅಸಲಂಕ, ಕಮಿಂದು ಮೆಂಡಿಸ್, ಪವನ್ ರಥನಾಯಕ, ಸಹನ್ ಅರ್ಚಿಗೆ, ವನಿಂದು ಹಸರಂಗ, ದುನಿತ್ ವೆಲ್ಲಲಗೆ, ಮಿಲನ್ ರಥನಾಯಕ, ನುವಾನ್ ತುಷಾರ, ಈಶಾನ್ ಮಾಲಿಂಗ, ದುಷ್ಮಂತ ಚಮೀರ, ಪ್ರಮೋದ್ ಮದುಶನ್, ಮಥೀಶ ಪತಿರಾನ, ದಿಲ್ಶನ್ ಮಧುಶಂಕ, ಮಹೇಶ್ ತೀಕ್ಷಣ, ದುಶನ್ ಹೇಮಂತ, ವಿಜಯಕಾಂತ್ ವ್ಯಾಸಕಾಂತ್, ತ್ರವೀಣ್ ಮ್ಯಾಥ್ಯೂ.

ಒಮಾನ್ ತಂಡ: ಜತೀಂದರ್ ಸಿಂಗ್ (ನಾಯಕ), ವಿನಾಯಕ್ ಶುಕ್ಲಾ, ಮೊಹಮ್ಮದ್ ನದೀಮ್, ಶಕೀಲ್ ಅಹ್ಮದ್, ಹಮ್ಮದ್ ಮಿರ್ಜಾ, ವಾಸಿಂ ಅಲಿ, ಕರಣ್ ಸೋನಾವಾಲೆ, ಶಾ ಫೈಸಲ್, ನದೀಮ್ ಖಾನ್, ಸುಫ್ಯಾನ್ ಮೆಹಮೂದ್, ಜೇ ಒಡೆದ್ರಾ, ಶಫೀಕ್ ಜಾನ್, ಆಶಿಶ್ ಒಡೆದಾರ, ಜಿತೇನ್ ರಾಮನಂದಿ, ಹಸ್ನೈನ್ ಅಲಿ.

ಇಂಗ್ಲೆಂಡ್ ತಾತ್ಕಾಲಿಕ ತಂಡ: ಹ್ಯಾರಿ ಬ್ರೂಕ್ (ನಾಯಕ), ರೆಹಾನ್ ಅಹ್ಮದ್, ಜೋಫ್ರಾ ಆರ್ಚರ್, ಟಾಮ್ ಬ್ಯಾಂಟನ್, ಜಾಕೋಬ್ ಬೆಥೆಲ್, ಜೋಸ್ ಬಟ್ಲರ್, ಸ್ಯಾಮ್ ಕರನ್, ಲಿಯಾಮ್ ಡಾಸನ್, ಬೆನ್ ಡಕೆಟ್, ವಿಲ್ ಜ್ಯಾಕ್ಸ್, ಜೇಮೀ ಓವರ್ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಜೋಶ್ ಟಂಗ್, ಲ್ಯೂಕ್ ವುಡ್.

ಅಫ್ಘಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ನೂರ್ ಅಹ್ಮದ್, ಅಬ್ದುಲ್ಲಾ ಅಹ್ಮದ್ಝಾಯ್, ಸೇದಿಕುಲ್ಲಾ ಅಟಲ್, ಫಝಲ್ಹಕ್ ಫಾರೂಕಿ, ರಹಮಾನುಲ್ಲಾ ಗುರ್ಬಾಜ್, ನವೀನ್ ಉಲ್ ಹಕ್, ಮೊಹಮ್ಮದ್ ಇಶಾಕ್, ಶಾಹಿದುಲ್ಲಾ ಕಮಾಲ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ದರ್ವಿಶ್ ರಸೂಲಿ, ಇಬ್ರಾಹಿಂ ಜದ್ರಾನ್. ಮೀಸಲು ಆಟಗಾರರು: AM ಗಜನ್ಫರ್, ಇಜಾಜ್ ಅಹ್ಮದ್ಝೈ ಮತ್ತು ಜಿಯಾ ಉರ್ ರೆಹಮಾನ್ ಷರೀಫಿ.
