ಪ್ರತಿಭಟನೆ ವೇಳೆ ಪಿಎಸ್‌ಐಗೆ ಸ್ವಾಮೀಜಿಯಿಂದ ಕಪಾಳಮೋಕ್ಷ: ಅಷ್ಟಕ್ಕೂ ಆಗಿದ್ದೇನು?
ವಿಜಯಪುರದಲ್ಲಿ ಖಾಸಗಿ ಮೆಡಿಕಲ್ ಕಾಲೇಜು ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಅನಿರೀಕ್ಷಿತ ಘಟನೆ ನಡೆದಿದೆ. ಮೊಬೈಲ್ ಕಸಿದಿದ್ದಕ್ಕೆ, ಸಿಟ್ಟಿಗೆದ್ದ ಸ್ವಾಮೀಜಿ ಮಫ್ತಿಯಲ್ಲಿದ್ದ ಪಿಎಸ್‌ಐಗೆ ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ಎಲ್ಲ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ನಿವಾಸಕ್ಕೆ ಮುತ್ತಿಗೆ ಯತ್ನ ವೇಳೆ ಈ ಎಲ್ಲ ಘಟನೆಗಳು ನಡೆದಿವೆ.

ವಿಜಯಪುರ, ಜನವರಿ 01: ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜ್ ಸ್ಥಾಪನೆಗೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮಫ್ತಿಯಲ್ಲಿದ್ದ ಪಿಎಸ್‌ಐಗೆ ಸ್ವಾಮೀಜಿ ಕಪಾಳಮೋಕ್ಷ ಮಾಡಿರುವ ಘಟನೆ ವಿಜಯಪುರ- ಸೊಲ್ಲಾಪುರ ರಸ್ತೆಯಲ್ಲಿ ನಡೆದಿದೆ. ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ್ ನಿವಾಸಕ್ಕೆ ಮುತ್ತಿಗೆ ಯತ್ನ ನಡೆಸಿದ್ದು, ಈ ವೇಳೆ ಪೊಲೀಸರು ಸ್ವಾಮೀಜಿ ಬೊಬೈಲ್ ಕಸಿದುಕೊಂಡಿದ್ದಾರೆ. ಇದರಿಂದ ಸಿಟ್ಟಾದ ಅವರು ಪೊಲೀಸ್ ಅಧಿಕಾರಿ ಕೆನ್ನೆಗೆ ಬಾರಿಸಿದ್ದಾರೆ ಎನ್ನಲಾಗಿದೆ.
ಘಟನೆ ಏನು?
ಖಾಸಗಿ ಸಹಭಾಗಿತ್ವದ ಮೆಡಿಕಲ್ ಕಾಲೇಜು ಸ್ಥಾಪನೆಗೆ ವಿರೋಧಿಸಿ ಕಳೆದ ನೂರಾರು ದಿನಗಳಿಂದ ಹೋರಾಟ ನಡೆದುಕೊಂಡುಬಂದಿದೆ. ಇದರ ಭಾಗವಾಗಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಹೋರಾಟ ಸಮಿತಿ ಮತ್ತು ಇತರ ಸಂಘಟನೆಗಳು ಇಂದು ಉಸ್ತುವಾರಿ ಸಚಿವರ ಮನೆ ಮುತ್ತಿಗೆ ಯತ್ನ ನಡೆಸಿವೆ. ಈ ವೇಳೆ ಹೋರಾಟಗಾರರನ್ನು ವಿಜಯಪುರ-ಸೊಲ್ಲಾಪುರ ರಸ್ತೆಯಲ್ಲಿಯೇ ಪೊಲೀಸರು ತಡೆದಿದ್ದು, ರಸ್ತೆ ಮಧ್ಯ ಹೋರಾಟ ಮಾಡದಂತೆ ಮನವಿ ಮಾಡಿದ್ದಾರೆ. ಜೊತೆಗೆ ಹೋರಾಟದಲ್ಲಿ ಭಾಗಿಯಾಗಿದ್ದ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಸಂಗನಬಸವ ಸ್ವಾಮೀಜಿ ಮೊಬೈಲ್ ಕಸಿದಿದ್ದಾರೆ. ಇದರಿಂದ ಕೋಪಗೊಂಡ ಸ್ವಾಮೀಜಿ ಪೊಲೀಸ್ ಯೂನಿಫಾರ್ಮ್ ಧರಿಸಿರದ ಪಿಎಸ್ಐ ಸೀತಾರಾಮ್ ಲಮಾಣಿಗೆ ಕಪಾಳ ಮೋಕ್ಷ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ನಾನು ತಪ್ಪು ಮಾಡಿಲ್ಲ, ಕರೆ ಮಾಡುತ್ತೇನೆಂದರೂ ಮೊಬೈಲ್ ಕಸಿದರು ಎಂದು ಸಂಗನಬಸವ ಸ್ವಾಮೀಜಿ ಹೇಳಿದ್ದಾರೆ. ಆದರೆ ಶ್ರೀಗಳನ್ನು ಎಳೆದು ತಮ್ಮ ವಾಹನದಲ್ಲಿ ಪೊಲೀಸರು ಕೂರಿಸಿದ್ದಾರೆ. ಕರ್ತವ್ಯ ನಿರತ ಅಧಿಕಾರಿ ಮೇಲೆ ಸ್ವಾಮೀಜಿ ಹಲ್ಲೆ ಮಾಡಿದ್ದಾರೆ ಎಂದು ತಿಳಿಸಿದ್ದು, ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬಳಿಕ ಎಲ್ಲ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.



