ದಾವಣಗೆರೆ: ಯಶಸ್ವಿ ಚಿಕಿತ್ಸೆ ನಂತರ ಮಠಕ್ಕೆ ಮರಳಿದ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು

| Updated By: ganapathi bhat

Updated on: Oct 26, 2021 | 10:41 PM

ಭೀಮಾಶಂಕರಲಿಂಗ ಸ್ವಾಮೀಜಿ ಹೃದಯಕ್ಕೆ ಸ್ಟಂಟ್​ ಅಳವಡಿಕೆ ಮಾಡಲಾಗಿದ್ದು ಇದೀಗ ಗುಣಮುಖರಾಗಿ ಮೂಲಮಠಕ್ಕೆ ಮರಳಿದ್ದಾರೆ. ಮಹಾರಾಷ್ಟ್ರದ ನಾಂದೇಡ್​ನ ದೇಶಮುಖ ಮಠಕ್ಕೆ ಶ್ರೀಗಳು ಮರಳಿದ್ದಾರೆ.

ದಾವಣಗೆರೆ: ಯಶಸ್ವಿ ಚಿಕಿತ್ಸೆ ನಂತರ ಮಠಕ್ಕೆ ಮರಳಿದ ಕೇದಾರ ಭೀಮಾಶಂಕರಲಿಂಗ ಜಗದ್ಗುರುಗಳು
ಕೇದಾರ ಜಗದ್ಗುರುಗಳು
Follow us on

ದಾವಣಗೆರೆ: ಯಶಸ್ವಿ ಚಿಕಿತ್ಸೆಯ ನಂತರ ಕೇದಾರ ಜಗದ್ಗುರುಗಳು ಮಠಕ್ಕೆ ಮರಳಿದ್ದಾರೆ. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳು, ಮುಂಬೈನ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿ ಮಠಕ್ಕೆ ಮರಳಿ ಬಂದಿದ್ದಾರೆ. ಉತ್ತರಾಖಂಡ್​ನ ಕೇದಾರ ಪೀಠದ ಭೀಮಾಶಂಕರಲಿಂಗ ಸ್ವಾಮೀಜಿ 4 ದಿನಗಳ ಹಿಂದೆ ಮುಂಬೈಗೆ ಪೂಜೆಗೆ ತೆರಳಿದ್ದಾಗ ಎದೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಶ್ರೀಗಳಿಗೆ ರಕ್ತನಾಳದಲ್ಲಿ ಬ್ಲಾಕೇಜ್ ಇರುವುದು ತಿಳಿದುಬಂದಿತ್ತು. ಆ​ ಹಿನ್ನೆಲೆ ಹೃದಯಕ್ಕೆ ಸ್ಟಂಟ್​ ಅಳವಡಿಕೆ ಮಾಡಲಾಗಿತ್ತು. ಭೀಮಾಶಂಕರಲಿಂಗ ಸ್ವಾಮೀಜಿ ಹೃದಯಕ್ಕೆ ಸ್ಟಂಟ್​ ಅಳವಡಿಕೆ ಮಾಡಲಾಗಿದ್ದು ಇದೀಗ ಗುಣಮುಖರಾಗಿ ಮೂಲಮಠಕ್ಕೆ ಮರಳಿದ್ದಾರೆ. ಮಹಾರಾಷ್ಟ್ರದ ನಾಂದೇಡ್​ನ ದೇಶಮುಖ ಮಠಕ್ಕೆ ಶ್ರೀಗಳು ಮರಳಿದ್ದಾರೆ. ಯಾವುದೇ ಆತಂಕ ಬೇಡವೆಂದು ಭಕ್ತರಿಗೆ ಜಗದ್ಗುರುಗಳು ಸಂದೇಶ ನೀಡಿದ್ದಾರೆ.

ಇದನ್ನೂ ಓದಿ: ಉಡುಪಿ ಮಠಕ್ಕೆ ಸಿದ್ದರಾಮಯ್ಯ ಭೇಟಿ ನೀಡದಿರುವ ಕಾರಣ ಅವರನ್ನು ಮಠದ ವಿರೋಧಿ ಅನ್ನಲಾಗದು: ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಇದನ್ನೂ ಓದಿ: ಹಿಂದುಳಿದ ವರ್ಗಗಳಿಗೆ ಸೌಲಭ್ಯ ತಲುಪಿಸಬೇಕು: ಸ್ವಾಮೀಜಿಗಳ ಜೊತೆ ಸಭೆ ಬಳಿಕ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ