AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐತಿಹಾಸಿಕ ನಗರದ ಅಂಗಳದಲ್ಲಿ ಬೋಟಿಂಗ್ ಶುರು; ಪಾಳು ಬಿದ್ದ ಊರ ಮುಂದಲ ಕೆರೆಗೆ ಹೊಸ ರೂಪ

25 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸುಂದರವಾದ ಬೋಟಿಂಗ್ ವ್ಯವಸ್ಥೆ, ಕೆರೆಯ ಸುತ್ತಾ ವಾಕಿಂಗ್ ಪಾತ್, ರಾತ್ರಿ ವೇಳೆ ಜಗಮಗಿಸುವ ಲೈಟಿಂಗ್ ವ್ಯವಸ್ಥೆ ಜೊತೆಗೆ ಕಾಂರಂಜಿ ವ್ಯವಸ್ಥೆಯನ್ನು ಮಾಡಿದ್ದು, ಜನರು ಕುಟುಂಬದ ಜೊತೆ ಕಾಲ ಕಳೆಯಲು ಇಂದೊಂದು ಫೇವರೇಟ್ ಸ್ಥಳ ಆಗಿದೆ.

ಐತಿಹಾಸಿಕ ನಗರದ ಅಂಗಳದಲ್ಲಿ ಬೋಟಿಂಗ್ ಶುರು; ಪಾಳು ಬಿದ್ದ ಊರ ಮುಂದಲ ಕೆರೆಗೆ ಹೊಸ ರೂಪ
ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆ
TV9 Web
| Edited By: |

Updated on:Oct 27, 2021 | 9:09 AM

Share

ದಾವಣಗೆರೆ: ಅದೊಂದು ಪಾಳು ಬಿದ್ದ ಕೆರೆ, ಅಲ್ಲಿ ಕೇವಲ ಕೊಳೆಚೆ ನೀರು ಶೇಖರಣೆಯಾಗಿ ಕೆಟ್ಟ ವಾಸನೆ ಬರುತ್ತಿತ್ತು. ಅಲ್ಲಿಗೆ ಜನರು ಹೋಗುವುದಕ್ಕೂ ಇಷ್ಟ ಪಡುತ್ತಿರಲಿಲ್ಲ. ಆದರೆ ಈಗ ಅದು ಸುಂದರ ಪ್ರವಾಸಿ ತಾಣವಾಗಿದೆ. ಮನುಷ್ಯ ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು. ಕಾಡುಗಲ್ಲನ್ನು ಸುಂದರವಾದ ಶಿಲೆಯನ್ನಾಗಿ ಮಾಡಬಹುದು ಎನ್ನುವುದಕ್ಕೆ ಈ‌ ಕೆರೆ ಪ್ರಮುಖ ಉದಾಹರಣೆಯಾಗಿದೆ. ಅದರಂತೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿನ ಊರ ಮುಂದಲ ಕೆರೆ ಈಗ ಪ್ರವಾಸಿಗರ ನೆಚ್ಚಿನ ಸ್ಥಳವಾಗಿದೆ.

ರಾಣಿ ಕೆಳದಿ ಚನ್ನಮ್ಮ ಆಳ್ವಿಕೆ ಕಾಲದಲ್ಲಿ ಚನ್ನಗಿರಿಯ ಊರ ಮುಂದಲ ಕೆರೆ ಹಾಗೂ ಗಣಪತಿ ಹೊಂಡವನ್ನು ನಿರ್ಮಾಣ ಮಾಡಿದ್ದರು. ಇದೇ ಕೆರೆಯನ್ನು ಅವಲಂಬಿಸಿ ಇಡೀ ತಾಲ್ಲೂಕಿನ ಜನರು ಜೀವನ ನಡೆಸುತ್ತಿದ್ದರಂತೆ. ಆದರೆ ಕಾಲಕ್ರಮೇಣ ಈ ಕೆರೆಯಲ್ಲಿ ಕೊಳೆಚೆ ನೀರು ಶೇಕರಣೆಯಾಗಿ ಕೆಟ್ಟ ವಾಸನೆಯಿಂದ‌ ಕೂಡಿದ್ದು, ಚನ್ನಗಿರಿಯ ಜನರು ಇಲ್ಲಿಗೆ ಬರುವುದಕ್ಕೂ ಹಿಂದೆ‌ಮುಂದೆ ನೋಡುತ್ತಿದ್ದರು. ಆದರೆ ಇದಕ್ಕೆ ಈಗ ಜೀವ ಕೊಟ್ಟಿದ್ದು, ಪಾಳು ಬಿದ್ದಿದ್ದ ಕೆರೆಗೆ ಹೊಸ ರೂಪವನ್ನೇ ನೀಡಿದ್ದಾರೆ.

ಈ ಕೆರೆಯಲ್ಲಿ ಶೇಕರಣೆಯಾಗುತ್ತಿದ್ದ ಕೊಳಚೆ ನೀರನ್ನು ಎರಡು ಕಿಲೋಮೀಟರ್ ದೂರ ಅಂಡರ್ ಗ್ರೌಂಡ್​ನಲ್ಲಿ ಚನ್ನಗಿರಿ ಹೊರ ಬಾಗದಲ್ಲಿರುವ ಹರಿದ್ರಾವತಿ ಹಳ್ಳಕ್ಕೆ ಕಲೆಕ್ಷನ್ ನೀಡಿದ್ದಾರೆ. ಕೆರೆಯ ಸುತ್ತಾ ಏರಿಯನ್ನು ನಿರ್ಮಾಣ ಮಾಡಿ ಎರಡು ಬೋರ್ ವೆಲ್ ಹಾಗೂ ಸೂಳೆ‌ಕೆರೆಯಿಂದ ನೀರು ತಂದು ಕೆರೆ ತುಂಬಿಸಿದ್ದು, ನಾಲ್ಕು ಕೋಟಿ ವೆಚ್ಚದಲ್ಲಿ ಸುಂದರವಾದ ಕೆರೆ ನಿರ್ಮಾಣ ಮಾಡುವುದರ ಜೊತೆಗೆ ಕೆರೆಯಲ್ಲಿ ಬೋಟಿಂಗ್ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

ಇದಕ್ಕೆ ನಿನ್ನೆ (ಅಕ್ಟೋಬರ್ 26) ಕುಂಭಗಳನ್ನು ಹೊತ್ತಿ ಮಹಿಳೆಯರಿಂದ ಅದ್ದೂರಿಯಾಗಿ ಉದ್ಘಾಟಿಸಲಾಯಿತು ಹಾಗೂ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ದಂಪತಿ ಈ ಕೆರೆಗೆ ಭಾಗೀನ ಅರ್ಪಿಸಿದರು. ಪ್ರವಾಸಿಗರು ಇಲ್ಲಿಗೆ ಕುಟುಂಬದ ಜೊತೆ ಕಾಲ ಕಳೆಯಲು ಸುಂದರ ತಾಣವನ್ನಾಗಿ ಮಾಡಲಾಗಿದೆ. ಕೊಳೆಚೆ ನೀರಿನಿಂದ ತುಂಬಿದ್ದ ಕೆರೆ ಈಗ ಸುಂದರ ಪ್ರವಾಸಿ ತಾಣವಾಗಿದೆ.

25 ಎಕರೆ ವಿಸ್ತೀರ್ಣದಲ್ಲಿರುವ ಈ ಕೆರೆಯಲ್ಲಿ ಸುಂದರವಾದ ಬೋಟಿಂಗ್ ವ್ಯವಸ್ಥೆ, ಕೆರೆಯ ಸುತ್ತಾ ವಾಕಿಂಗ್ ಪಾತ್, ರಾತ್ರಿ ವೇಳೆ ಜಗಮಗಿಸುವ ಲೈಟಿಂಗ್ ವ್ಯವಸ್ಥೆ ಜೊತೆಗೆ ಕಾಂರಂಜಿ ವ್ಯವಸ್ಥೆಯನ್ನು ಮಾಡಿದ್ದು, ಜನರು ಕುಟುಂಬದ ಜೊತೆ ಕಾಲ ಕಳೆಯಲು ಇಂದೊಂದು ಫೇವರೇಟ್ ಸ್ಥಳ ಆಗಿದೆ. ಜನರು ಕೂಡ ಬೋಟಿಂಗ್ ಮಾಡಿ‌ ಫುಲ್ ಖುಷಿ ಪಡುತ್ತಿದ್ದಾರೆ.

ಈ ಕೆರೆಯಲ್ಲಿ ಬೋಟಿಂಗ್ ಹಾಗೂ ಇದರ ನಿರ್ವಹಣೆಗೆ ಶಿವಮೊಗ್ಗದ ಮೂಲದ ಒಂದು ಏಜೆನ್ಸಿಗೆ ವಹಿಸಿದ್ದು, ಕೆರೆಯ ನಿರ್ವಹಣೆ ಜೊತೆಗೆ ವಾಟರ್ ಗೇಮ್ಸ್, ಬೋಟಿಂಗ್ ಟ್ರೈನಿಂಗ್ ಕೂಡ ಇದ್ದು, ಇತ್ತ ಜನರಿಗೂ ಹೊರೆಯಾಗದ ಹಾಗೇ ಶುಲ್ಕವನ್ನು ತೆಗೆದುಕೊಳ್ಳಲಾಗುವುದು ಎನ್ನುತ್ತಾರೆ ನಿರ್ವಹಣೆ ಮಾಡುವವರು.

ಒಟ್ಟಾರೆಯಾಗಿ ಪಾಳು ಬಿದ್ದಿದ್ದ ಐತಿಹಾಸಿಕ ಕೆರೆಗೆ ಸರ್ಕಾರದ ಅನುದಾನದಿಂದ ಸುಂದರವಾದ ರೂಪ ಸಿಕ್ಕಿದ್ದು, ದಾವಣಗೆರೆಯಲ್ಲಿ ಮತ್ತೊಂದು ಪ್ರವಾಸಿತಾಣವಾಗಿ ಗುರುತಿಸಿಕೊಂಡಿದೆ. ಏನೇ‌ ಆಗಲಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಸುಂದರ ಕೆರೆ ನಿರ್ಮಾಣದ ಜೊತೆ ನಿರ್ವಹಣೆ ಕೂಡ ಇದ್ದಾಗ ಮಾತ್ರ ಇದಕ್ಕೊಂದು ಬೆಲೆ ಸಿಗುತ್ತದೆ ಎನ್ನುವುದಕ್ಕೆ ಈ ಸ್ಥಳ ಸಾಕ್ಷಿಯಾಗಿದೆ.

ವರದಿ: ಬಸವರಾಜ್ ದೊಡ್ಮನಿ

ಇದನ್ನೂ ಓದಿ: ಆನೇಕಲ್: ಮುತ್ಯಾಲಮಡುವು ಜಲಪಾತದ ಕಲ್ಲು ಬೀಳುವ ಅಪಾಯ; ಪ್ರವಾಸಿಗರು ಎಚ್ಚರ

ದಾವಣಗೆರೆ: ಸೂಳೆಕೆರೆ ಕೋಡಿ ಬಿದ್ದ ಹಿನ್ನೆಲೆ ಕೆಂಗಾಪುರ ಕಣಿವೆ ಬಿಳಚಿ ಮಧ್ಯೆ ಇರುವ ಸೇತುವೆ​ ಜಲಾವೃತ

Published On - 9:05 am, Wed, 27 October 21

Follow Us
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ತೀವ್ರ ವಿರೋಧದ ನಡುವೆಯೂ ಮೈಸೂರಿನಲ್ಲಿ ಕಂಬಳಕ್ಕೆ ಟ್ರ್ಯಾಕ್ ನಿರ್ಮಾಣ ಶುರು
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ
ಹುಮನಾಬಾದ್ ಪುರಭವನಕ್ಕಿಲ್ಲ ಉದ್ಘಾಟನೆ ಭಾಗ್ಯ: ಪಾಳುಬಿದ್ದ ಕಟ್ಟಡ