ದಾವಣಗೆರೆ, (ಜೂನ್ 07): ಜಿಲ್ಲೆಯ ಹರಿಹರದಲ್ಲಿ ನೈತಿಕ ಪೊಲೀಸ್ ಗಿರಿ (Moral policing) ನಡೆದಿದ್ದು, ಐದಾರು ಜನರು ಸೇರಿಕೊಂಡು ಯುವಕನೊಬ್ಬನನ್ನು ರೂಮ್‌ನಲ್ಲಿ ಹಾಕಿ ಮನಸೋ ಇಚ್ಛೆ ಹಲ್ಲೆ (Assault Case) ಮಾಡಲಾಗಿದೆ. ದಾವಣಗೆರೆಯ (Davanagere) ಹರಿಹರನಗರದ ಬೆಂಕಿ ನಗರದಲ್ಲಿ ಘಟನೆ ನಡೆದ ಎನ್ನುವ ಅನುಮಾನ ವ್ಯಕ್ತವಾಗಿದೆ. ಇನ್ನು ಯುವಕ ಪರಿ ಪರಿಯಾಗಿ ಬೇಡಿಕೊಂಡರೂ ಬಿಡದೇ ಥಳಿಸಿದ್ದು, ಇದೀಗ ಹಲ್ಲೆ ನಡೆಸಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಓರ್ವ ಹಿಡಿದು ಇನ್ನೊಬ್ಬ ಕಟ್ಟಿಗೆಯಿಂದ ಹೊಡೆಯುತ್ತಿರುವುದು ವಿಡಿಯೋನಲ್ಲಿ ಕಂಡುಬಂದಿದೆ. ಇನ್ನು ಹಲ್ಲೆ ಮಾಡಿದವರು ಹಾಗೂ ಹಲ್ಲೆಗೊಳಗಾದ ಯುವಕ ಒಂದೇ ಕೋಮಿಗೆ ಸೇರಿದವರು ಎಂದು ತಿಳಿದುಬಂದಿದೆ. ಆದ್ರೆ, ಹಲ್ಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದ್ರೆ, ಹಲ್ಲೆಗೊಳಗಾದ ಯುವಕ ಈವರೆಗೂ ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ. ಆದರೆ, ಹಲ್ಲೆ ನಡೆಸಿರುವ ವಿಡಿಯೋ ಮಾತ್ರ ಸಾಮಾಜಿಕ ಜಲತಾಣಗಳಲ್ಲಿ ಸಿಕ್ಕಾಟಟೆ ವೈರಲ್ ಆಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹುಬ್ಬಳ್ಳಿ: ನಗರದ ಹೊರವಲಯದ ಗಬ್ಬೂರು ಗ್ರಾಮದಲ್ಲಿ 2 ಕುಟುಂಬಗಳ ನಡುವೆ ಮಾರಾಮಾರಿಯಾಗಿದೆ. ಗಲಾಟೆಯಲ್ಲಿ ಹಲವರಿಗೆ ಗಾಯಗಳಾಗಿದ್ದು, ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿ ವಿಚಾರಕ್ಕೆ ಗಲಾಟೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಬಡಿದಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಪೇದೆಗೆ ಗಂಭೀರ ಗಾಯ
ಯಾದಗಿರಿ: ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಪೊಲೀಸ್ ಕಾನ್‌ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶಹಾಪುರ-ಯಾದಗಿರಿ ಮಾರ್ಗ ಮಧ್ಯೆ ನಡೆದಿದೆ. ಯಾದಗಿರಿ ಸಂಚಾರ ಪೊಲೀಸ್ ಠಾಣೆಯ ಪೇದೆ ಹಜರತ್ ಅಲಿ ಗಾಯಾಳು. ದೋರನಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದಿರುವ ಅಪಘಾತ ನಡೆದಿದ್ದು, ಗಂಭೀರ ಗಾಯಗೊಂಡಿರುವ ಪೇದೆಯನ್ನು ಕಲಬುರಗಿ ಯುನೈಟೆಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:19 pm, Fri, 7 June 24