ಲಕ್ಷ ಲಕ್ಷ ಹಣ ಖರ್ಚು ಮಾಡಿಕೊಂಡು ಅಮೆರಿಕಾದಿಂದ ಬಂದರೂ ಮತ ಹಾಕಲಾಗಲಿಲ್ಲ, ದಾವಣೆಗೆರೆಯಲ್ಲಿ ವ್ಯಕ್ತಿ ಬೇಸರ

|

Updated on: May 11, 2023 | 8:08 AM

ಸಾಫ್ಟ್ವೇರ್ ಇಂಜಿನಿಯರ್ ರಾಘವೇಂದ್ರ ಕಮಲಾಕರ ಶೇಟ್ ಎಂಬುವವರು ಮತದಾನ ಮಾಡಲೆಂದು ಅಮೆರಿಕಾದಿಂದ ದಾವಣಗೆರೆಗೆ ಬಂದಿದ್ದರು. ಆದ್ರೆ ರಾಘವೇಂದ್ರ ಅವರಿಗೆ ಮತದಾರರ ಮಾಡುವ ಅವಕಾಶ ಸಿಕ್ಕಿಲ್ಲ.

ಲಕ್ಷ ಲಕ್ಷ ಹಣ ಖರ್ಚು ಮಾಡಿಕೊಂಡು ಅಮೆರಿಕಾದಿಂದ ಬಂದರೂ ಮತ ಹಾಕಲಾಗಲಿಲ್ಲ, ದಾವಣೆಗೆರೆಯಲ್ಲಿ ವ್ಯಕ್ತಿ ಬೇಸರ
ರಾಘವೇಂದ್ರ ಕಮಲಾಕರ ಶೇಟ್
Follow us on

ದಾವಣಗೆರೆ: ಮೇ 10ರಂದು ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ(Karnataka Assembly Elections 2023) ಮತ ಹಾಕಬೇಕು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಬೇಕು ಎಂದು ಉತ್ಸಾಹಕರಾಗಿದ್ದ ವ್ಯಕ್ತಿಯೊಬ್ಬರು ಅಮೆರಿಕಾದಿಂದ(America) ಕರ್ನಾಟಕಕ್ಕೆ ಬಂದಿದ್ದರು. ಆದ್ರೆ ಅವರಿಗೆ ಮತ ಹಾಕಲು ಅವಕಾಶವೇ ಸಿಕ್ಕಿಲ್ಲ. ಲಕ್ಷ ಲಕ್ಷ ಹಣ ಖರ್ಚು ಮಾಡಿಕೊಂಡು ಮತದಾನಕ್ಕೆ ಬಂದರೂ ಮತಹಾಕಲು ಆಗದಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವ್ಯವಸ್ಥೆಯನ್ನ ದೂರಿದ್ದಾರೆ. ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಎಂಸಿಸಿ ಎ ಬ್ಲಾಕ್ ನ ಬಕ್ಕೇಶ್ವರ ಶಾಲೆಯ ಬೂತ್ ನಂಬರ್ 78ರ ಮತಗಟ್ಟೆಯಲ್ಲಿ ಮತದಾನ ಮಾಡಲಾಗದೆ ಅಮೆರಿಕಾದಿಂದ ಬಂದಿದ್ದ ವ್ಯಕ್ತಿ ವಾಪಸ್ ಮನೆಯತ್ತ ನೆರಳಿದ್ದಾರೆ.

ಸಾಫ್ಟ್ವೇರ್ ಇಂಜಿನಿಯರ್ ರಾಘವೇಂದ್ರ ಕಮಲಾಕರ ಶೇಟ್ ಎಂಬುವವರು ಮತದಾನ ಮಾಡಲೆಂದು ಅಮೆರಿಕಾದಿಂದ ದಾವಣಗೆರೆಗೆ ಬಂದಿದ್ದರು. ಆದ್ರೆ ರಾಘವೇಂದ್ರ ಅವರಿಗೆ ಮತದಾರರ ಮಾಡುವ ಅವಕಾಶ ಸಿಕ್ಕಿಲ್ಲ. ಏಕೆಂದರೆ ಮತದಾರರ ಪಟ್ಟಿಯಲ್ಲಿ ಅವರ ಹೆಸರೇ ನಾಪತ್ತೆಯಾಗಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿಕೊಂಡು ಮತದಾನಕ್ಕೆ ‌ಬಂದರೂ ಮತದಾನದಿಂದ ವಂಚಿತರಾದ ಇಂಜಿನಿಯರ್ ಬೇಸರಗೊಂಡಿದ್ದಾರೆ. ಕಳೆದ 15 ವರ್ಷಗಳಿಂದ ಅಮೆರಿಕಾದಲ್ಲಿ ಇರುವ ರಾಘವೇಂದ್ರ. 14 ಸಾವಿರ ಕಿಲೋ‌ಮೀಟರ್ ದೂರದಿಂದ ಸುಮಾರು 1.50 ಲಕ್ಷ ರೂ. ಖರ್ಚು ಮಾಡಿಕೊಂಡು ತಾಯ್ನಾಡಿಗೆ ಬಂದಿದ್ದರು.

ಇದನ್ನೂ ಓದಿ: ಮತಗಟ್ಟೆ ಬಳಿ ಕೇಸರಿ ಶಾಲು ಹಾಕಿ ಬಿಜೆಪಿ ಪರ ಪ್ರಚಾರ ಆರೋಪ; ಕಾಂಗ್ರೆಸ್​ ಅಭ್ಯರ್ಥಿ ಬಿಜೆಪಿ ಕಾರ್ಯಕರ್ತರ ಮಧ್ಯೆ ವಾಗ್ಯುದ್ಧ

ಒಂದು ಪಕ್ಷದ ‌ಜೊತೆ ನಾನು ಗುರ್ತಿಸಿಕೊಂಡಿದ್ದೆ. ಅದೇ ಕಾರಣಕ್ಕೆ ನನ್ನ ಹೆಸರು ಡಿಲಿಟ್ ಆಗಿರುವ ಶಂಕೆ ಇದೆ. ಅಮೆರಿಕಾದಲ್ಲಿ ಐಡಿ ಕಾಡ್೯ ಇದ್ದರೆ ಸಾಕು ಮತದಾನಕ್ಕೆ ಅವಕಾಶ ಇದೆ. ಆದರೆ ಭಾರತದಲ್ಲಿ ನನಗೆ ಐಡಿ ಕಾಡ್೯ ಇದ್ದರೂ ಮತಪಟ್ಟಿಯಲ್ಲಿ ಹೆಸರಿಲ್ಲ ಎಂಬ ಕಾರಣಕ್ಕೆ ನಾನು ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ. ಈವರೆಗೂ ನಡೆದ ಎಲ್ಲಾ ಚುನಾವಣೆಯಲ್ಲಿ ಮತದಾನ ಮಾಡಿದ್ದೇನೆ. ಆದರೆ ಈ ಬಾರಿ ಮತದಾನದಿಂದ ವಂಚಿತನಾಗಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ