ದಾವಣಗೆರೆ: ರಸ್ತೆಯಲ್ಲಿ ಸಿಕ್ಕ ಸುಮಾರು ಮೂರು ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಮಾಂಗಲ್ಯ ಸರ (Gold chain) ವನ್ನು ಪೊಲೀಸರಿಗೆ ಒಪ್ಪಿಸುವ ಮೂಲಕ ಶಿಕ್ಷಕ ದಂಪತಿ ಪ್ರಾಣಿಕತೆ ಮೆರೆದಿದ್ದಾರೆ. ಹಿರೇಕೊಗಲೂರು ಗ್ರಾಮದ ನಿವಾಸಿಗಳಾದ ಶ್ರೀನಿವಾಸ ಮತ್ತು ಪೂರ್ಣಿಮಾ ಶಿಕ್ಷಕ ದಂಪತಿಗಳು. ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರಿನಲ್ಲಿ ದಿನಸಿ ತೆಗೆದುಕೊಳ್ಳಲು ಹೋದಾಗ ರಸ್ತೆಯಲ್ಲಿ ಚಿನ್ನದ ಮಾಂಗಲ್ಯ ಸರ ಸಿಕ್ಕಿದೆ. ಗೊಲ್ಲರಹಳ್ಳಿ ಪ್ರಾಧ್ಯಾಪಕ ಕುಮಾರ ಪತ್ನಿ ಲತಾ ಎಂಬುವರುಗೆ ಚಿನ್ನದ ಸರ ಸೇರಿದ್ದಾಗಿದೆ. ಸರ ಕಳೆದುಕೊಂಡ ಬಗ್ಗೆ ಬೆಳಿಗ್ಗೆಯೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಶಿಕ್ಷಕ ದಂಪತಿಗಳು ತಂದು ಕೊಟ್ಟ ಸರವನ್ನು ವಾರಸುದಸರರಿಗೆ ಸಂತೆಬೆನ್ನೂರು ಠಾಣೆ ಪೊಲೀಸರು ಒಪ್ಪಿಸಿದ್ದು, ಕಳೆದ ಸರ ಸಿಕ್ಕಿದ್ದರಿಂದ ಲತಾ ಅವರು ಖುಷಿ ಪಟ್ಟಿದ್ದಾರೆ.
ಚಿಕ್ಕಮಗಳೂರು: ವಿಳಾಸ ಕೇಳುವ ನೆಪದಲ್ಲಿ ಸರಗಳ್ಳರು ವೃದ್ಧೆಯ ಸರ ಎಗರಿಸಿ ಪರಾರಿ ಆಗಿರುವಂತಹ ಘಟನೆ ನಗರದ ಕೋಟೆ ಬಡಾವಣೆಯ ಸುಗ್ಗಿಕಲ್ ರಸ್ತೆಯಲ್ಲಿ ನಡೆದಿದೆ. ವೇಗವಾಗಿ ಬೈಕಿನಲ್ಲಿ ಬಂದ ಸರಗಳ್ಳರು ಕೊರಳಲ್ಲಿದ್ದ ಸರ ಎಗರಿಸಿದ್ದಾರೆ. ಲೀಲಾವತಿ ಚಿನ್ನದ ಸರ ಕಳೆದುಕೊಂಡ ವೃದ್ಧೆ.
ಇದನ್ನೂ ಓದಿ: Haveri News: ಬಸ್ ರಶ್‌ಗೆ ಬಾಲಕಿ ಬಲಿ: ಶಾಲೆಗೆ ಹೋಗುತ್ತಿದ್ದ ವಿದ್ಯಾರ್ಥಿನಿ ದುರಂತ ಅಂತ್ಯ
ಸುಗ್ಗಿಕಲ್ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಸರಗಳ್ಳತನ ಮಾಡಿದ್ದು, ಸಿಸಿಟಿವಿಯಲ್ಲಿ ಸೆರೆ ಆಗಿದೆ. ಹಾಡಹಗಲೇ ಚಿನ್ನದ ಸರ ಕಳ್ಳತನ ಹಿನ್ನೆಲೆ ಮಹಿಳೆಯರಿಗೆ ಆತಂಕ ಶುರುವಾಗಿದೆ. ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಇದನ್ನೂ ಓದಿ: Shakti Scheme: ಮಹಿಳೆಯರ ಉಚಿತ ಪ್ರಯಾಣಕ್ಕೆ ಇನ್ಮುಂದೆ ಒರಿಜಿನಲ್ ಐಡಿ ಬೇಕಿಲ್ಲ, ಝರಾಕ್ಸ್ ಇದ್ರೆ ಸಾಕು
ಚಿಕ್ಕಬಳ್ಳಾಪುರ: ಜನನಿಬಿಡ ಪ್ರದೇಶದಲ್ಲಿರುವಜ್ಯೂವೆಲರ್ಸ್ ಶಾಪ್ಗೆ ನುಗ್ಗಿದ ಒಬ್ಬನೇ ಕಳ್ಳ ಏಕಾಂಗಿಯಾಗಿ ಹಾಡಹಗಲೆ ಅಂಗಡಿಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ನಗರದ ಗಂಗಮ್ಮ ಗುಡಿ ರಸ್ತೆಯಲ್ಲಿರುವ ಗಣೇಶ್ ಜ್ಯೂವೆಲರ್ಸ್ ಅಂಬಗಡಿಯಲ್ಲಿ ಇತ್ತೀಚೆಗೆ ಘಟನೆ ನಡೆದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:12 pm, Mon, 12 June 23