ಚಿಕ್ಕಬಳ್ಳಾಪುರದಲ್ಲಿ ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳನೊಬ್ಬ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದು ಹೇಗೆ?

Chikkaballapur: ಬೆಳಿಗ್ಗೆಯಿಂದ ವ್ಯಾಪಾರ ಮಾಡಿದ್ದ ಅಂಗಡಿಯ ಮಾಲಿಕರೊಬ್ಬರು ಊಟಕ್ಕೆ ಅಂತಾ ಮನೆಗೆ ಹೋಗಿ ವಾಪಸ್ ಬರುವುದರೊಳಗೆ, ಹಾಡಹಗಲೆ ಚಿನ್ನಾಭರಣಗಳ ಕಳ್ಳತನ ಮಾಡಿರುವುದರ ಹಿಂದೆ ಅಂಗಡಿಯ ಕಾರ್ಮಿಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.

ಚಿಕ್ಕಬಳ್ಳಾಪುರದಲ್ಲಿ ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳನೊಬ್ಬ 20 ಲಕ್ಷ ರೂ ಮೌಲ್ಯದ ಚಿನ್ನಾಭರಣ ದೋಚಿದ್ದು ಹೇಗೆ?
ಹಾಡಹಗಲೆ ಜ್ಯೂವೆಲರಿ ಅಂಗಡಿಗೆ ನುಗ್ಗಿದ ಕಳ್ಳ ಚಿನ್ನಾಭರಣ ದೋಚಿದ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 10, 2023 | 1:24 PM

ಜನನಿಬಿಡ ಪ್ರದೇಶದಲ್ಲಿರುವ ಜ್ಯೂವೆಲರ್ಸ್ ಶಾಪ್ (Jewellery shop) ಗೆ ನುಗ್ಗಿದ ಒಬ್ಬನೇ ಕಳ್ಳ ಏಕಾಂಗಿಯಾಗಿ ಹಾಡಹಗಲೆ ಅಂಗಡಿಯಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಎಸ್ಕೇಪ್ ಆಗಿದ್ದು, ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ (Burglary). ಅಷ್ಟಕ್ಕೂ ಅದೆಲ್ಲಿ ಅಂತೀರಾ, ಈ ವರದಿ ನೋಡಿ! ಬಾಗಿಲು ಮುಚ್ಚಿದ್ದ ಜ್ಯೂವೆಲರ್ಸ್ ಶಾಪ್ ನ ಶೆಟರ್ ಎತ್ತಿ ಒಳಬಂದ ಅಸಾಮಿಯೊಬ್ಬ… ಹಾಡಹಗಲೆ ಜ್ಯೂವೆಲರಿ ಅಂಗಡಿಯ ಡ್ರಾಯರ್ ಗೆ ಕೈ ಹಾಕಿ ಅದರಲ್ಲಿದ್ದ 20 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು (Gold Ornaments) ಕದ್ದು ಪರಾರಿಯಾಗಿರುವುದು ಚಿಕ್ಕಬಳ್ಳಾಪುರ ನಗರದ (Chikkaballapur) ಗಂಗಮ್ಮ ಗುಡಿ ರಸ್ತೆಯಲ್ಲಿರುವ ಗಣೇಶ್ ಜ್ಯೂವೆಲರ್ಸ್ ಅಂಬಗಡಿಯಲ್ಲಿ. ಹೌದು ಅಂಗಡಿಯ ಮಾಲಿಕ ಕೆ.ಆರ್. ಶ್ರೀಧರ್, ಮಧ್ಯಾಹ್ನ ಮೂರು ಗಂಟೆ ಸಮಯದಲ್ಲಿ ಊಟಕ್ಕೆ ಹೋಗಲು ಅಂಗಡಿಯ ಬೀಗ ಹಾಕಿಸಿ, ಬೀಗ ತೆಗೆದುಕೊಂಡು ಮನೆಗೆ ಹೋಗಿದ್ದಾನೆ. ವಾಪಸ್ ಬಂದು ನೋಡುವಷ್ಟರಲ್ಲಿ ಮಾಯದ ಹಾಗೆ ಅಂಗಡಿಯಲ್ಲಿದ್ದ ಚಿನ್ನಾಭರಣಗಳು ಕಳ್ಳತನ ಆಗಿರುವುದು ಗೊತ್ತಾಗಿದೆ.

ಇನ್ನು ಅಂಗಡಿಯ ಸ್ಟಾಕ್ ಬಾಕ್ಸ್ ಗಳ ಡ್ರಾಯರ್ ನಲ್ಲಿದ್ದ 4 ಬಂಗಾರದ ಐಟಂ ಬಾಕ್ಸ್ ಕಳುವಾಗಿವೆ. ಅದರಲ್ಲಿ ಸುಮಾರು 9,79,700 ರೂಪಾಯಿ ಮೌಲ್ಯದ 202 ಗ್ರಾಂ ತೂಕದ ಬಂಗಾರದ ಫ್ಯಾನ್ಸಿ ವಾಲೆಗಳು, 5,33,500 ರೂಪಾಯಿ ಮೌಲ್ಯದ 110 ಗ್ರಾಂ ತೂಕದ ಬಂಗಾರದ ಉಂಗುರಗಳು, 2,81,300 ರೂಪಾಯಿ ಮೌಲ್ಯದ 58 ಗ್ರಾಂ ತೂಕದ ಮಕ್ಕಳ ಬಂಗಾರದ ಕೈ ಚೈನುಗಳು, 2,52,200 ರೂಪಾಯಿ ಮೌಲ್ಯದ 52 ಗ್ರಾಂ ತೂಕದ ಬಂಗಾರದ ಸಾದಾ ಓಲೆಗಳು, 2,52,200 ರೂಪಾಯಿ ಮೌಲ್ಯದ ಚಿನ್ನಾಭರಣಗಳು ಸೇರಿದಂತೆ 20,46,700 ಮೌಲ್ಯದ ಚಿನ್ನಾಭರಣಗಳ ಕಳ್ಳತನ ಮಾಡಲಾಗಿದೆ. ಇನ್ನು, ಕಳ್ಳ ಅಂಗಡಿಯ ಒಳ ನುಗ್ಗುವ ದೃಶ್ಯವನ್ನು ಅಂಗಡಿಯ ಗ್ರಾಹಕರೊಬ್ಬರು ನೋಡಿದ್ದಾರೆ.

ಬೆಳಿಗ್ಗೆಯಿಂದ ವ್ಯಾಪಾರ ಮಾಡಿದ್ದ ಅಂಗಡಿಯ ಮಾಲಿಕರೊಬ್ಬರು ಊಟಕ್ಕೆ ಅಂತಾ ಮನೆಗೆ ಹೋಗಿ ವಾಪಸ್ ಬರುವುದರೊಳಗೆ, ಹಾಡಹಗಲೆ ಚಿನ್ನಾಭರಣಗಳ ಕಳ್ಳತನ ಮಾಡಿರುವುದರ ಹಿಂದೆ ಅಂಗಡಿಯ ಕಾರ್ಮಿಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ವರದಿ: ಭೀಮಪ್ಪ ಪಾಟೀಲ, ಟಿವಿ9, ಚಿಕ್ಕಬಳ್ಳಾಪುರ

ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ