TV9 Impact: ಗ್ರಾಮಕ್ಕೆ ರಸ್ತೆಯಿಲ್ಲವೆಂದು ಯುವತಿ ಮದುವೆಗೆ ಹಿಂದೇಟು, ಬೇಡಿಕೆ ಈಡೇರಿಸಲು ಗ್ರಾಮಕ್ಕೆ ಬಂದ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ

| Updated By: ಆಯೇಷಾ ಬಾನು

Updated on: Sep 16, 2021 | 1:25 PM

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ತಮ್ಮ ಕಾರ್ ನಿಲ್ಲಿಸಿ ನಡೆದುಕೊಂಡು ಹೋಗಿ ಗ್ರಾಮ ತಲುಪಿದ್ದಾರೆ. ಬಳಿಕ ಯುವತಿ ಬಿಂದು ಜೊತೆ ಮಾತನಾಡಿ ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

TV9 Impact: ಗ್ರಾಮಕ್ಕೆ ರಸ್ತೆಯಿಲ್ಲವೆಂದು ಯುವತಿ ಮದುವೆಗೆ ಹಿಂದೇಟು, ಬೇಡಿಕೆ ಈಡೇರಿಸಲು ಗ್ರಾಮಕ್ಕೆ ಬಂದ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ
ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ಮತ್ತು ಅಧಿಕಾರಿಗಳು ನಡೆದುಕೊಂಡು ಗ್ರಾಮಕ್ಕೆ ಹೋಗುತ್ತಿರುವುದು
Follow us on

ದಾವಣಗೆರೆ: ಗ್ರಾಮಕ್ಕೆ ರಸ್ತೆಯಿಲ್ಲವೆಂದು ಮದುವೆ ಮಾಡಿಕೊಳ್ಳಲು ಹಿಂದೇಟು ಹಾಕುತ್ತಿದ್ದ ಹಿನ್ನೆಲೆಯಲ್ಲಿ ಯುವತಿ ಬಿಂದು ಮನವಿಗೆ ದಾವಣಗೆರೆ ಡಿಸಿ ಮಹಾಂತೇಶ ಬೀಳಗಿ ಸ್ಪಂದಿಸಿದ್ದಾರೆ. ದಾವಣಗೆರೆಯ ಗಡಿ ಗ್ರಾಮವಾದ H.ರಾಂಪುರಕ್ಕೆ ತೆರಳಿ ಯುವತಿ ಬಿಂದುಗೆ ಡಿಸಿ ರಸ್ತೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ತಮ್ಮ ಕಾರ್ ನಿಲ್ಲಿಸಿ ನಡೆದುಕೊಂಡು ಹೋಗಿ ಗ್ರಾಮ ತಲುಪಿದ್ದಾರೆ. ಬಳಿಕ ಯುವತಿ ಬಿಂದು ಜೊತೆ ಮಾತನಾಡಿ ಗ್ರಾಮದ ಸಮಸ್ಯೆ ಬಗೆಹರಿಸುವಂತೆ ಭರವಸೆ ನೀಡಿದ್ದಾರೆ.

ಈ ವೇಳೆ ಅವರು ನಿಮ್ಮೂರಿಗೆ ರಸ್ತೆ ಮಾಡಿಸುತ್ತೇನೆ, ಬಸ್ ವ್ಯವಸ್ಥೆ ಮಾಡುತ್ತೇನೆ. ಜೊತೆಗೆ ನಿನಗೆ ಮದ್ವೆ ಕೂಡಾ ಮಾಡಿಸುತ್ತೇನೆ. ಒಳ್ಳೆ ಗಂಡು ಹುಡುಕಿ ಮದ್ವೆ ಮಾಡಿಸುವೆ. ನಿನ್ನ ಬಗ್ಗೆ ಗೊತ್ತಾಗಿದೆ. ನಿಮ್ಮೂರಲ್ಲಿಯೇ ಬಂದಿವೆ. ಆದಷ್ಟು ಬೇಗ ಮದ್ವೆ ಕೂಡಾ ಮಾಡಿಸುವೆ ಎಂದು ಬಿಂದುಗೆ ಮಹಾಂತೇಶ ಬೀಳಗಿ ಭರವಸೆ ನೀಡಿದರು. ರಾಂಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಬಿಂದು ಜೊತೆ ಪೋನ್ ನಲ್ಲಿ ಮಾತಾಡಿದ ಜಿಲ್ಲಾಧಿಕಾರಿ ಗ್ರಾಮಕ್ಕೆ ಬೇಕಾದ ಎಲ್ಲ ವ್ಯವಸ್ಥೆ ಮಾಡುವೆ. ನಾಳೆಯಿಂದಲೇ ರಸ್ತೆ ಕಾಮಗಾರಿ ಆರಂಭ ಮಾಡಲಾಗುವುದು ಎಂದಿದ್ದಾರೆ. ಖಾಸಗಿ ಶಾಲೆಯಲ್ಲಿ ಶಿಕ್ಷಕಿ ಆಗಿರುವ ಬಿಂದು ಸದ್ಯ ಬಾಗಲಕೋಟೆ ಜಿಲ್ಲೆಯ ಕೂಡಲ ಸಂಗಮದಲ್ಲಿ ಇದ್ದಾರೆ.

ಘಟನೆ ಹಿನ್ನೆಲೆ:
ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿ‌ ಇರುವ ರಾಂಪುರ ಗ್ರಾಮದ ಯುವತಿ ಬಿಂದು ನಮ್ಮೂರು ಕಾಡು, ಗುಡ್ಡಗಾಡಿನ ಮಧ್ಯೆ ಇರುವ ಕುಗ್ರಾಮ. ಕೆಟ್ಟ ರಸ್ತೆಗಳು ದಶಕಗಳಿಂದ ಸುಧಾರಣೆ ಆಗಿಲ್ಲ, ಗ್ರಾಮದಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮೂರಿಗೆ ಯಾರು ಹೆಣ್ಣು ಕೊಡಲ್ಲ. ಹೀಗಾಗಿ ರಸ್ತೆಯಾಗೋವರೆಗೂ ನಾನು ಮದ್ವೆ ಆಗಲ್ಲ ಎಂದು ಪತ್ರ ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಸಿಎಂ, ಪಿಎಂವರೆಗೂ ಪತ್ರ ಬರೆದರೂ ಪ್ರಯೋಜನವಾಗಿರಲಿಲ್ಲ. ಸದ್ಯ ಡಿಸಿ ಮಹಾಂತೇಶ ಬೀಳಗಿ ನಡುರಸ್ತೆಯಲ್ಲಿ ಕಾರು ನಿಲ್ಲಿಸಿ ಕಾಲ್ನಡಿಗೆಯಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಪರಿಶೀಲಿಸಿ ಗ್ರಾಮದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಸೂಕ್ತ ವ್ಯವಸ್ಥೆ ಇಲ್ಲದಕ್ಕೇ ಈ ಗ್ರಾಮದವರಿಗಿಲ್ಲ ಮದುವೆ ಭಾಗ್ಯ, ನಮ್ಮೂರಿಗೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಯುವತಿ ಪಟ್ಟು

Published On - 1:14 pm, Thu, 16 September 21