ಸೂಕ್ತ ವ್ಯವಸ್ಥೆ ಇಲ್ಲದಕ್ಕೇ ಈ ಗ್ರಾಮದವರಿಗಿಲ್ಲ ಮದುವೆ ಭಾಗ್ಯ, ನಮ್ಮೂರಿಗೆ ರಸ್ತೆ ಆಗುವವರೆಗೂ ಮದುವೆ ಆಗಲ್ಲ ಎಂದು ಯುವತಿ ಪಟ್ಟು
ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಗ್ರಾಮದ ಯುವತಿ- ಯುವಕರಿಗೆ ಮದುವೆ ಭಾಗ್ಯವಿಲ್ಲದಂತಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಇಲ್ಲಿ ರಸ್ತೆ ಕಾಮಗಾರಿ ಮಾಡಿಲ್ಲ ಆದ್ರೆ ಇದರಿಂದ ಈ ಗ್ರಾಮದ ಯುವಕ-ಯುವತಿಯರು ಮದುವೆಯಾಗದೆ ಕಷ್ಟ ಪಡುವಂತಾಗಿದೆ.
ದಾವಣಗೆರೆ: ಈ ಗ್ರಾಮದಲ್ಲಿ ಸೂಕ್ತ ರಸ್ತೆ ವ್ಯವಸ್ಥೆ ಇಲ್ಲ. ಸುಮಾರು ಒಂದೂವರೆ ಕಿಲೋಮೀಟರ್ ವರೆಗೆ ರಸ್ತೆ ಹಾಳಾಗಿದೆ. ಸರಿಯಾಗಿ ಮೊಬೈಲ್ ನೆಟ್ವರ್ಕ್ ಕೂಡ ಸಿಗಲ್ಲ. ಬಸ್ ವ್ಯವಸ್ಥೆ ಇಲ್ಲ. ಕಾಡು, ಗುಡ್ಡ ಗಾಡಿನ ಮಧ್ಯೆ ಈ ಗ್ರಾಮವಿದೆ. ಹೀಗಾಗಿ ಸೂಕ್ತ ವ್ಯವಸ್ಥೆ ಇಲ್ಲ ಎಂದು ಈ ಗ್ರಾಮದ ಯುವಕ-ಯುವತಿಯರನ್ನು ಮದುವೆಯಾಗಲು ಹಿಂದೇಟು ಹಾಕಿತ್ತಿದ್ದಾರೆ.
ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ಗ್ರಾಮದ ಯುವತಿ- ಯುವಕರಿಗೆ ಮದುವೆ ಭಾಗ್ಯವಿಲ್ಲದಂತಾಗಿದೆ. ಸರ್ಕಾರದ ನಿರ್ಲಕ್ಷ್ಯದಿಂದ ಇಲ್ಲಿ ರಸ್ತೆ ಕಾಮಗಾರಿ ಮಾಡಿಲ್ಲ ಆದ್ರೆ ಇದರಿಂದ ಈ ಗ್ರಾಮದ ಯುವಕ-ಯುವತಿಯರು ಮದುವೆಯಾಗದೆ ಕಷ್ಟ ಪಡುವಂತಾಗಿದೆ.
ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಹೆಚ್.ರಾಂಪುರ ಗ್ರಾಮದ ರಸ್ತೆ ಹಾಳಾಗಿದೆ. ಹೆದ್ನೆ ಮತ್ತು ಹೆಚ್.ರಾಂಪುರದ ಮಧ್ಯೆ ಒಂದುವರೆ ಕಿಲೋ ಮೀಟರ್ ರಸ್ತೆ ಹಾಳಾಗಿದ್ದು ಗ್ರಾಮಕ್ಕೆ ಸರಿಯಾದ ರಸ್ತೆಯಿಲ್ಲ, ರಸ್ತೆಯಿಲ್ಲದೆ ಬಸ್ ಬರಲ್ಲ ಕುಗ್ರಾಮದ ಸಂಬಂಧ ಬೇಡ ಎಂದು ಜನ ಹಿಂದೇಟು ಹಾಕುತ್ತಿದ್ದಾರೆ. ಹೆಚ್ ರಾಂಪುರಕ್ಕೆ ರಸ್ತೆಯಾಗುವವರೆಗೂ ನಾನು ಮದುವೆ ಆಗಲ್ಲ ಎಂದು ಈ ಗ್ರಾಮದ ಯುವತಿ ಬಿಂದು ಪಟ್ಟು ಹಿಡಿದಿದ್ದಾಳೆ. ಸಿಎಂ, ಪಿಎಂ ವರೆಗೂ ಪತ್ರ ಬರೆದರೂ ಕೂಡ ನಮ್ಮೂರಿನ ಒಂದೂವರೆ ಕಿಲೋ ಮೀಟರ್ ರಸ್ತೆಯಾಗ್ತಿಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಯುವತಿ ಪತ್ರಕ್ಕೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರತಿಕ್ರಿಯೆ ನೀಡಿದ್ದು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ. ಆದ್ರೆ ರಸ್ತೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ.
ಇದನ್ನೂ ಓದಿ: ಕೋಲಾರ: ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಶಂಕೆ; ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು