ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಶಂಕೆ; ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಗಲ್ ಪೇಟೆ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಿಂದ ಲಾಟರಿ ವಸ್ತುಗಳು, ಓಮ್ನಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಿಸಲು ಯತ್ನಿಸಿದ ಶಂಕೆ; ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು
ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಸ್ಥಳೀಯರು

ಕೋಲಾರ: ಲಾಟರಿ ಆಸೆ ತೋರಿಸಿ ಮಕ್ಕಳನ್ನು ಅಪಹರಣ ಮಾಡುವ  ಶಂಕೆ ಕೋಲಾರ ಜಿಲ್ಲೆಯಲ್ಲಿ ವ್ಯಾಪಿಸಿದೆ. ಹೀಗಾಗಿ ಮಕ್ಕಳನ್ನು ಅಪಹರಣ ಮಾಡುತ್ತಿದ್ದಾರೆ ಎಂಬ ಆರೋಪದಡಿ ಮೂವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಲ್ ಪೇಟೆ ಪೊಲೀಸರು ಸದ್ಯ ಮೂವರನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತರಿಂದ ಲಾಟರಿ ವಸ್ತುಗಳು, ಓಮ್ನಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. 

ಓಮ್ನಿಯಲ್ಲಿದ್ದ ಇಬ್ಬರು ಅರೋಪಿಗಳು ಪರಾರಿಯಾಗಿದ್ದು, 5 ಜನ ಮಕ್ಕಳ ರಕ್ಷಣೆ ಮಾಡಲಾಗಿದೆ. ಲೈಟ್, ಫ್ಯಾನ್​ , ಪ್ಲಾಸ್ಕ್ , ಕುಕ್ಕರ್, ಹಾಟ್ ಬಾಕ್ಸ್, ಲಾಟರಿ ಆಸೆ ತೋರಿಸಿ ಮಕ್ಕಳನ್ನು ಪುಸಲಾಯಿಸಿರುವ ಆರೋಪಿಗಳು‌, ಮಕ್ಕಳಿಗೆ ಲಾಟರಿ ಬಂದಿದೆ ಎಂದು ಹೇಳಿ ಓಮ್ನಿ ಕಾರ್ ಬಳಿ ಬರುವಂತೆ ಹೇಳಿದ್ದಾರೆ. ಕಾರ್ ಬಳಿ ಹೋಗುತ್ತಿದ್ದಾಗ ಸ್ಥಳೀಯರ ಸಮಯ ಪ್ರಜ್ಞೆಯಿಂದ ಮಕ್ಕಳ ರಕ್ಷಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮುಳಬಾಗಲು ಮೂಲದ 5 ಜನರು ಓಮ್ನಿ ಕಾರಿನಲ್ಲಿ ಕೆಲವು ಎಲೆಕ್ಟ್ರಾನಿಕ್ ಗೂಡ್ಸ್ ಹಾಗೂ ಹೋಂ ಆಪ್ಲೈನ್ಸ್​ನೊಂದಿಗೆ ಕೋಲಾರದ ಅರಹಳ್ಳಿ ಗೇಟ್ ಸೇರಿದಂತೆ ಸಂಗೊಂಡಹಳ್ಳಿ ಬಳಿ ಬಂದಿದ್ದಾರೆ. 5 ಜನರು ತಮ್ಮ ಬಳಿ ಇದ್ದ ಲೈಟ್, ಪ್ಯಾನ್, ಪ್ಲಾಸ್ಕ್, ಕುಕ್ಕರ್, ಹಾಟ್ ಬಾಕ್ಸ್ ಇಂತಹ ಲಕ್ಕಿ ಡಿಪ್ ಲಾಟರಿ ಆಸೆ ತೋರಿಸಿ ಮಕ್ಕಳನ್ನು ಪುಸಲಾಯಿಸಿದ್ದಾರೆ. ನಂತರ ತಮ್ಮ ಕಾರ್ ಬಳಿ ಮಕ್ಕಳು ಬರುವಂತೆ ಮಾಡಿದ್ದು, ಮಕ್ಕಳನ್ನು ಸುತ್ತಾಡಿಸಿದ್ದಾರೆ. ಸ್ಥಳೀಯರು ಈ ವಿಷಯ ತಿಳಿದು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಆರೋಪಿಗಳಿಂದ 4 ಜನ ಹೆಣ್ಣು ಮಕ್ಕಳು ಸೇರಿ ಇಬ್ಬರು ಬಾಲಕರು ಒಟ್ಟು 6 ಜನರನ್ನು ರಕ್ಷಣೆ ಮಾಡಿದ್ದು, ಕೋಲಾರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಕ್ಕಳ ವಿಚಾರಣೆ ನಡೆಯುತ್ತಿದೆ. ಇನ್ನೂ ಸತತ ಮೂರ್‍ನಾಲ್ಕು ಗಂಟೆಗಳ ಕಾಲ ಮಕ್ಕಳ ಸುಳಿವೆ ಇಲ್ಲದೇ ಮಕ್ಕಳಿಗಾಗಿ ಪೋಷಕರು ಹುಡುಕಾಟ ಆರಂಭಿಸಿದ್ದು, ಸ್ಥಳೀಯರು ಗಮನಿಸಿಲ್ಲವಾಗಿದ್ದರೆ ಮಕ್ಕಳ ಅಪಹರಣವಾಗುತ್ತಿತ್ತು ಎನ್ನುವುದು ಪ್ರತ್ಯಕ್ಷದರ್ಶಿಗಳ ಮಾತು.

ಚಿತ್ರದುರ್ಗ: ಲಂಚ ಸ್ವೀಕರಿಸಿದ ಮೂವರು ಎಸಿಬಿ ಅಧಿಕಾರಿಗಳ ಬಲೆಗೆ
ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆ ಭೂಸ್ವಾಧೀನ ಪರಿಹಾರದ ಹಣ‌ ನೀಡಲು ಲಂಚಕ್ಕೆ ಬೇಡಿಕೆಯಿಟ್ಟ ಮೂವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಪರಿಹಾರ ಹಣ ನೀಡಲು 6 ಲಕ್ಷ ರೂಪಾಯಿ ಲಂಚ ಪಡೆದ ಆರೋಪದ ಮೇಲೆ ಚಿತ್ರದುರ್ಗದ ಭೂಸ್ವಾಧೀನ ವಿಶೇಷಾಧಿಕಾರಿ ವಿರೇಶಕುಮಾರ್, ಮ್ಯಾನೇಜರ್ ಮೋಹನ್, ಚಾಲಕ ಮನ್ಸೂರ್ ಅನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ.

ಭೂಸ್ವಾಧೀನ ಪರಿಹಾರದ ಹಣ ನೀಡಲು ಹಿರಿಯೂರಿನ ನೇತ್ರಾ ಕರಿಯಪ್ಪರಿಂದ ಲಂಚ ಪಡೆದ ಆರೋಪ
ಕೇಳಿ ಬಂದಿದೆ. ಈ ಸಂಬಂಧ ಎಸಿಬಿ ಡಿವೈಎಎಸ್​ಪಿ ಬಸವರಾಜ, ಪಿಐ ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಸದ್ಯ ಮೂವರನ್ನು ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು: ಫುಟ್ಬಾಲ್ ಗ್ರೌಂಡ್‌ನಲ್ಲಿ ರೌಡಿಶೀಟರ್ ಕೊಲೆ ಪ್ರಕರಣ; ನಾಲ್ವರು ಕೊಲೆ ಆರೋಪಿಗಳನ್ನು ಬಂಧಿಸಿದ ಪೊಲೀಸರು
ಅಶೋಕ್ ನಗರದ ಫುಟ್ಬಾಲ್ ಗ್ರೌಂಡ್​ನಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅರೋಪಿಗಳನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ. ರೌಡಿ ಶೀಟರ್ ಅರವಿಂದನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ಸ್ಟಾಲಿನ್, ವಿಜಯ್, ಅರುಣ್ ಮತ್ತು ಜಾಕ್ ರನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ತಲೆಮರಿಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ.

ಸ್ಟಾಲಿನ್ ಪೂರ್ವ ವಿಭಾಗದ ರೌಡಿ ಶೀಟರ್, ಪದೇ ಪದೇ ನಮ್ಮನ್ನು ಅಟ್ಯಾಕ್ ಮಾಡಿದ್ದಕ್ಕೆ ಕೊಲೆ ಮಾಡಲಾಗಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಹಿಂದೆ ಹಲವು ಬಾರಿ ಸ್ಟಾಲಿನ್, ವಿಜಯ್ ಸೇರಿದಂತೆ ಹಲವರ ಮೇಲೆ ಹಲ್ಲೆ ಮಾಡಿದ್ದ ಅರವಿಂದ್ ಕುರಿತು ಭಾರತಿನಗರ ಪುಲಕೇಶಿ ನಗರ ಠಾಣೆಗೆ ದೂರು ಸಹ ನೀಡಲಾಗಿತ್ತು ಎಂದು ಆರೋಪಿಗಳು ತಿಳಿಸಿದ್ದಾರೆ.

ಪ್ರಕರಣದಲ್ಲಿ ಪೊಲೀಸರು ಅರವಿಂದನನ್ನು ಬಂಧಿಸಿದ್ದರು. ಆದರೆ ಜೈಲಿನಿಂದ ಹೊರಬಂದ ನಂತರ ಮತ್ತೆ ಹಲ್ಲೆ ಮಾಡುತ್ತಿದ್ದ. ಹೀಗಾಗಿ ಅರವಿಂದ್ ಜೈಲಿನಿಂದ ಬಂದಾಗಿನಿಂದ ಕೊಲೆಗೆ ಸ್ಕೆಚ್ ಹಾಕಿದ್ದೇವು. ಅರವಿಂದನನ್ನು ಹಾಗೆ ಬಿಟ್ಟರೆ ನಮ್ಮನ್ನು ಬಿಡಲ್ಲಾ ಎಂದು ಕೊಲೆ ಮಾಡಲಾಗಿದೆ ಎಂದು ಆರೋಪಿಗಳು ತನಿಖೆ ವೇಳೆ ತಿಳಿಸಿದ್ದಾರೆ.
ಇದನ್ನೂ ಓದಿ:
ದಾವಣಗೆರೆ : ಉದ್ದೇಶಪೂರ್ವಕ ಅಪಹರಣ, ಕೊಲೆ ಶಂಕೆ: ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ

Crime News: ಅಕ್ರಮ ಸಂಬಂಧದ ಶಂಕೆ; ಹೆಂಡತಿಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿ ಮುಚ್ಚಿದ ಪತಿರಾಯ!

 

Click on your DTH Provider to Add TV9 Kannada