ಬಿಜೆಪಿಯ ದಲಿತ ಮುಖಂಡನ ‌ಮನೆಗೆ ಪಾದ ಪೂಜೆಗೆ ಬಂದ ಉಡುಪಿ ಪೇಜಾವರ ಮಠದ ಶ್ರೀ

| Updated By: Rakesh Nayak Manchi

Updated on: Dec 13, 2022 | 4:02 PM

ಪಾದ ಪೂಜೆ ಹಿನ್ನೆಲೆ ಬಿಜೆಪಿ ದಲಿತ ಮುಖಂಡನ ಮನೆಗೆ ಉಡುಪು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬಿಜೆಪಿಯ ದಲಿತ ಮುಖಂಡನ ‌ಮನೆಗೆ ಹೋಗಿದ್ದಾರೆ.

ಬಿಜೆಪಿಯ ದಲಿತ ಮುಖಂಡನ ‌ಮನೆಗೆ ಪಾದ ಪೂಜೆಗೆ ಬಂದ ಉಡುಪಿ ಪೇಜಾವರ ಮಠದ ಶ್ರೀ
ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
Follow us on

ದಾವಣಗೆರೆ: ಉಡುಪಿ ಪೇಜಾವರ ಮಠ (Udupi Pejavara Mutt)ದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ದಲಿತರ ಮನೆಗಳಿಗೆ ಭೇಟಿ ನೀಡಿ ನಾವೆಲ್ಲರೂ ಒಂದೇ, ಜಾತಿ ಭೇದ ಭಾವ ಇಲ್ಲ ಎಂಬ ಸಂದೇಶವನ್ನು ಸಾರುತ್ತಿದ್ದರು. ಇದೀಗ ಇವರದ್ದೇ ಮಾರ್ಗದಲ್ಲಿ ನಡೆಯುತ್ತಿರುವ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwaprasanna Tirtha Swamiji)  ಅವರು ಬಿಜೆಪಿ ದಲಿತ ಮುಖಂಡರೊಬ್ಬರ ಮನೆಗೆ ಭೇಟಿ ನೀಡಿದ್ದಾರೆ. ಪಾದ ಪೂಜೆ ಹಿನ್ನೆಲೆ ದಾವಣಗೆರೆ ನಗರದ ಜಯ ನಗರದಲ್ಲಿ ಇರುವ ಬಿಜೆಪಿ ಮುಖಂಡ ಆಲೂರು ಲಿಂಗರಾಜ್ ಅವರ ಮನೆಗೆ ಶ್ರೀಗಳು ಭೇಟಿ ನೀಡಿದರು.

ಈ ವೇಳೆ ಮಾತನಾಡಿದ ಶ್ರೀಗಳು, ರಾಮಮಂದಿರ ಆಯಿತು, ಇನ್ನೂ ರಾಮರಾಜ್ಯ ಆಗಬೇಕಿದೆ. ಈಗಾಗಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ತುರ್ತಾಗಿ ನಡೆದಿದೆ. ಬರುವ 2024 ಜನವರಿಯ ಮಕರ ಸಂಕ್ರಾಂತಿ ವೇಳೆ ನಿರ್ಮಾಣ ಪೂರ್ಣವಾಗಲಿದೆ. ರಾಮಮಂದಿರ ಮುಕ್ತಾಯದ ನಂತರ ಮುಂದೇನು ಎಂಬ ಚಿಂತನೆ ನಡೆದಿದೆ. ದೇಶವನ್ನು ‌ರಾಮರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ನಾವೆಲ್ಲ ಕಾರ್ಯ ಪ್ರವೃತ್ತರಾಗಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ: ಬೆಂಗಳೂರು, ಕಲಬುರಗಿಯಲ್ಲೂ ಪ್ರತಿಧ್ವನಿಸಿತು ಗುಂಬಜ್ ವಿವಾದ: ಕೆಪಿಟಿಸಿಎಲ್ ಕಟ್ಟಡದ ಮೇಲೆ ಗುಂಬಜ್ ಕಟ್ಟಲಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಕಿಡಿ

ದಲಿತರ ಮನೆಗಳಿಗೆ ಹೋಗುವುದು ಹಿರಿಯ ಗುರುಗಳ ಚಿಂತನೆಯಾಗಿದೆ. ಸಮಾಜದಲ್ಲಿ ಸಮಾನತೆ ಸಹೋದರತೆ ಹಾಗೂ ಪರಸ್ಪರ ಪ್ರೀತಿಯಿಂದ ಬದುಕುವಂತಾಗಬೇಕು. ಎಲ್ಲ ವರ್ಗದವರ ಮನೆಗೆ ಹೋಗುವುದು ಹಿರಿಯ ಗುರುಗಳ ಗುಣ. ಅದನ್ನ ನಾವೂ ಕೂಡಾ ಮುಂದುವರೆಸಿಕೊಂಡು ಬರುತ್ತಿದ್ದೇವೆ ಎಂದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:05 pm, Tue, 13 December 22