10ಕೋಟಿ ರೂ. ಪಡೆದ ಬಗ್ಗೆ ಯತ್ನಾಳ್​ ಆರೋಪ: ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ ಎಂದ ವಚನಾನಂದ ಶ್ರೀ

ಹತ್ತು ಕೋಟಿ ರೂಪಾಯಿ ಪಡೆದ ಬಗ್ಗೆ ಯತ್ನಾಳ್ ಅವರು ಆರೋಪ ಮಾಡಿದ್ದಾರೆ. ಆ ಆರೋಪದ ಬಗ್ಗೆ ತನಿಖೆ ಆಗಲಿ. ಸತ್ಯಾಂಶ ಹೊರಬರಲಿ ಎಂದು ವಚನಾನಂದ ಶ್ರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.

10ಕೋಟಿ ರೂ. ಪಡೆದ ಬಗ್ಗೆ ಯತ್ನಾಳ್​ ಆರೋಪ: ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ ಎಂದ ವಚನಾನಂದ ಶ್ರೀ
ವಚನಾನಂದ ಶ್ರೀ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 14, 2022 | 3:01 PM

ದಾವಣಗೆರೆ: ಸುಖಾ ಸುಮ್ಮನೇ ಆರೋಪ ಮಾಡುವರ ವಿರುದ್ಧ ತನಿಖೆ ಆಗಲಿ. ಸತ್ಯ ಹೊರ ಬರಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ವಚನಾನಂದ ಶ್ರೀ (vachananand swamiji) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದಲ್ಲಿ ಅವರು ಮಾತನಾಡಿದರು. ಹತ್ತು ಕೋಟಿ ರೂಪಾಯಿ ಪಡೆದ ಬಗ್ಗೆ ಯತ್ನಾಳ್ ಅವರು ಆರೋಪ ಮಾಡಿದ್ದಾರೆ. ಆ ಆರೋಪದ ಬಗ್ಗೆ ತನಿಖೆ ಆಗಲಿ. ಸತ್ಯಾಂಶ ಹೊರಬರಲಿ. ಇಂತವರ ಬಗ್ಗೆ ಮೌನ ವಹಿಸಿದ್ರೆ ನಮ್ಮ ವ್ಯಕ್ತಿತ್ವಕ್ಕೆ ದಕ್ಕೆ ಬರುತ್ತದೆ. ಯಾವುದಕ್ಕೂ ತನಿಖೆ ಆದರೆ ಸತ್ಯ ಹೊರ ಬರಲಿದೆ. ಗಾಳಿಯಲ್ಲಿ ಗುಂಡು ಹೊಡೆಯುವುದು ಸರಿಯಲ್ಲ ಎಂದು ವಚನಾನಂದ ಶ್ರೀ ಹೇಳಿದರು.

ಸಣ್ಣ ತನ ಇಟ್ಟುಕೊಂಡವನು ಯಾವತ್ತು ದೊಡ್ಡವನಾಗುವುದಿಲ್ಲ. ದೊಡ್ಡತನ ಪ್ರದರ್ಶನ ಮಾಡಿದರೆ ಮಾತ್ರ ದೊಡ್ಡವರು ಆಗಲು ಸಾಧ್ಯ. ಕಾಮಿಡಿ ಮಾಡುವವರನ್ನು ಕಾಮಿಡಿ ಮಾಡಲು ಬಿಡಬೇಕು ಎಂದು ಪರೋಕ್ಷವಾಗಿ ಟಾಂಗ್ ನೀಡಿದರು. ಈ ಹೋರಾಟ ಶುರುವಾದಾಗ ಈಗ ಹೋರಾಟ ಮಾಡುವವರು ಎಲ್ಲಿ ಇದ್ದರು. ಆಗ ಹೋರಾಟ ಮಾಡುವ ಬದಲು ಧರ್ಮ ಹೊಡೆಯುವ ಕೆಲಸ ಮಾಡುತ್ತಿದ್ದರು. ಈಗ ನಾವು ಹೋರಾಟ ಶುರು ಮಾಡಿದ ಮೇಲೆ ಅವರು ಈಗ ಬರ್ತಾ ಇದಾರೆ. ನಮ್ಮ ಪ್ರಯತ್ನವನ್ನು ಅವರು ಲಾಭ (ಎನ್ಕ್ಯಾಚ್) ಮಾಡಿಕೊಂಡ್ರು ಎಂದರು.

ಇದನ್ನೂ ಓದಿ: ಯಡಿಯೂರಪ್ಪರಿಂದ 10 ಕೋಟಿ ರೂ ವಸೂಲಿ: ಅಧಿವೇಶನದಲ್ಲಿ ವಚನಾನಂದ ಸ್ವಾಮಿ ಬಣ್ಣ ಬಯಲು ಮಾಡುತ್ತೇನೆ ಎಂದ ಯತ್ನಾಳ್

ಪಾದಯಾತ್ರೆಯನ್ನು ಕೂಡ ಕೆಲವೊಬ್ಬರು ಸ್ವಾರ್ಥಕ್ಕೆ ಬಳಕೆ ಮಾಡಿಕೊಂಡರು‌. 2 A ಮೀಸಲಾತಿ ಬಗ್ಗೆ ಸಿಎಂ ಜೊತೆ ಸುಧೀರ್ಘ ಮೀಟಿಂಗ್ ಆಗಿದೆ. ಆ ಸಭೆಯಲ್ಲಿ ಸಮಾಜದ ಮುಖಂಡರು ಕೂಡ ಭಾಗವಹಿಸಿದ್ದರು‌. ವರದಿಯನ್ನು ತರಿಸಿಕೊಂಡು ಆದಷ್ಟು ಬೇಗ ಮೀಸಲಾತಿ ನೀಡುವಂತೆ ಮನವಿ ಮಾಡುತ್ತೇವೆ. ವರದಿಯ ಸಿದ್ಧತೆಯನ್ನು ಈಗಾಗಲೇ ಜಯಪ್ರಕಾಶ್ ಹೆಗ್ಡೆಯವರು ಮಾಡುತ್ತಿದ್ದಾರೆ. ವರದಿ ಬಂದ ನಂತರ ಸರ್ವ ಪಕ್ಷ ಸಭೆ ಕರೆದು ನಿರ್ಣಯ ಮಾಡುತ್ತಾರೆ. ಈ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಘೋಷಣೆ ಮಾಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ: ಕೂಡಲ ಸಂಗಮ ಶ್ರೀ ಬಿಟ್ಟರೆ ಪಂಚಮಸಾಲಿ ಸಮಾಜದ ಇತರೆ ಸ್ವಾಮೀಜಿ ಬುಕ್ಕಿಂಗ್ ಸ್ವಾಮಿಗಳು: ಶಾಸಕ ಯತ್ನಾಳ್ ಆರೋಪ

ಮಾಜಿ ಸಿಎಂ ಸಿದ್ದರಾಮಯ್ಯ, ಕುಮಾರಸ್ವಾಮಿ ಹಾಗೂ ಕೆಕೆಪಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಸೇರಿದಂತೆ ಹಲವರನ್ನು ಭೇಟಿ ಮಾಡಿದ್ದೇವೆ. ಅವರು ಕೂಡ ನಿಮ್ಮ ಪರವಾಗಿ ನಾವು ಇರ್ತಿವಿ ಎಂದು ಹೇಳಿದ್ದಾರೆ. ವರದಿ ಆಧಾರದ ಮೇಲೆ ಕಾನೂನಾತ್ಮಕ ತೊಡಕು ಆಗದ ರೀತಿ ಘೋಷಣೆ ಮಾಡುತ್ತಾರೆ. ಅನೇಕ ರಾಜ್ಯಗಳಲ್ಲಿ ವರದಿ ಇಲ್ಲದೆ ಘೋಷಣೆ ಮಾಡಿ ಅದು ಕಾನೂನು ತೊಡಕಾಗಿದೆ. ಆದ್ದರಿಂದ ಮೀಸಲಾತಿ ಘೋಷಣೆಯಲ್ಲಿ ಅತ್ಯಂತ ಮುಖ್ಯ ಎಂದರೆ ವರದಿ. 28 ವರ್ಷಗಳ ಹೋರಾಟ ಇದು ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ. ಮೀಸಲಾತಿ ಸಿಗುವ ಎಲ್ಲಾ ವಿಶ್ವಾಸ ಇದೆ ಎಂದು ವಚನಾನಂದ ಸ್ವಾಮೀಜಿ ಹೇಳಿದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.