ಬೆಳಗಾವಿಯಲ್ಲಿ ಪ್ರತಿ ವರ್ಷ 370 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗುತ್ತಿವೆ: ಡಿಸಿಎಂ ಗೋವಿಂದ ಕಾರಜೋಳ

|

Updated on: May 31, 2021 | 9:57 PM

Belagavi Floods: ಈ ವರ್ಷದ ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಬೆಳಗಾವಿಯಲ್ಲಿ ಪ್ರತಿ ವರ್ಷ 370 ಹಳ್ಳಿಗಳು ಪ್ರವಾಹಕ್ಕೆ ತುತ್ತಾಗುತ್ತಿವೆ: ಡಿಸಿಎಂ ಗೋವಿಂದ ಕಾರಜೋಳ
ಗೋವಿಂದ ಕಾರಜೋಳ
Follow us on

ಬೆಳಗಾವಿ: ಜಿಲ್ಲೆಯ 370 ಹಳ್ಳಿಗಳು ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುತ್ತವೆ. ಮುಂಜಾಗ್ರತಾ ಕ್ರಮವಾಗಿ ಸದ್ಯ 20 ಬೋಟ್​ಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದೇವೆ.ಮರಾಠ ರೆಜಿಮೆಂಟ್​ನ ಯೋಧರ ಎರಡು ತಂಡ ರಚಿಸಲಾಗಿದೆ. ಈ ವರ್ಷದ ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದರು.

ಮುಂಗಾರು ಹಂಗಾಮಿಗೆ 7 ಲಕ್ಷ 15 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಇಟ್ಟುಕೊಳ್ಳಲಾಗಿದ್ದು, 1 ಲಕ್ಷ 87 ಸಾವಿರ ಕ್ವಿಂಟಲ್ ಬಿತ್ತನೆ ಬೀಜದ ಅವಶ್ಯಕತೆ ಇದೆ. 189 ಕೇಂದ್ರಗಳಲ್ಲಿ ಬೀಜ ವಿತರಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ. 2 ಲಕ್ಷ 56 ಸಾವಿರ ಮೆಟ್ರಿಕ್ ಟನ್ ರಸಗೊಬ್ಬರ ಅವಶ್ಯಕತೆ ಇದ್ದು, ಈ ಪ್ರಮಾಣದ ಬೀಜ, ರಸಗೊಬ್ಬರವನ್ನು ಬೆಳಗಾವಿ ಜಿಲ್ಲೆಯಲ್ಲಿ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಿಎಂ ಲಾಕ್ ಡೌನ್ ಪರಿಹಾರ ಪ್ಯಾಕೇಜ್ ವಿಚಾರವಾಗಿಯೂ ಮಾತನಾಡಿದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಬೆಳಗಾವಿ ಜಿಲ್ಲೆಯಲ್ಲಿ 45 ಸಾವಿರ ರೈತರಿಗೆ ಗುರುತಿಸಿದ್ದು 93 ಲಕ್ಷ ಈಗಾಗಲೇ ಹಣ ಜಮಾವಣೆಗೊಂಡಿದೆ. ಚಿಕನ್​ಗುನ್ಯಾ, ಡೆಂಘ್ಯೂ ಚಿಕಿತ್ಸೆಗೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ವಿವರಿಸಿದರು.

ಇದನ್ನೂ ಓದಿ: ಯುಟ್ಯೂಬ್​ನಲ್ಲಿ ಕರ್ನಾಟಕ ಹೈಕೋರ್ಟ್​ ಕಲಾಪ ಮೊದಲ ಬಾರಿಗೆ ನೇರಪ್ರಸಾರ

5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ

(DCM Govind Karjol says 370 villages are flooded every year in Belagavi)