Tv9 Digital Live: ಹೊರಗೆ ಬರೋಕೆ ಕೊರೊನಾ ಭಯ, ಮನೇಲಿದ್ರೆ ಹಸಿವಿನ ಹಿಂಸೆ; ಅಡಕತ್ತರಿಯಲ್ಲಿ ದುಡಿದು ತಿನ್ನುವ ಜನ

ಈ ವರ್ಷ ಮುಂಗಾರು ಚೆನ್ನಾಗಿದೆ. ಮೊದಲ ವಾರದಲ್ಲಿಯೇ ಕರ್ನಾಟಕದಲ್ಲಿ ಮಳೆ ಬರುತ್ತೆ. ಇನ್ನೊಂದು ವಾರ ಲಾಕ್​ಡೌನ್ ಇರುತ್ತಾ ಇಲ್ವಾ ಎಂಬ ಬಗ್ಗೆ ಸರ್ಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು 15 ದಿನ ಲಾಕ್​ಡೌನ್ ನಿರ್ಬಂಧ ವಿಸ್ತರಿಸುವುದಿದ್ದರೆ ಅದನ್ನೂ ಸ್ಪಷ್ಟವಾಗಿ ಹೇಳಬೇಕು. ಸರ್ಕಾರ ಒಂದು ಪ್ಲಾನ್ ಮುಂದಿಟ್ಟರೆ ಜನರು ಸಿದ್ಧತೆ ಮಾಡಿಕೊಳ್ತಾರೆ. ಯಾವಾಗಿನಿಂದ ಲಾಕ್​ಡೌನ್ ಹೋಗುತ್ತೆ ಅಂತ ಜನರಿಗೆ ಗೊತ್ತಾಗಬೇಕು ಎಂದು ಪ್ರೋ. ಕೇಶವ್ ಹೇಳಿದ್ದಾರೆ.

Tv9 Digital Live: ಹೊರಗೆ ಬರೋಕೆ ಕೊರೊನಾ ಭಯ, ಮನೇಲಿದ್ರೆ ಹಸಿವಿನ ಹಿಂಸೆ; ಅಡಕತ್ತರಿಯಲ್ಲಿ ದುಡಿದು ತಿನ್ನುವ ಜನ
ಆ್ಯಂಕರ್ ಹರಿಪ್ರಸಾದ್ ಮತ್ತು ಡಾ.ಸುನಿಲ್
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: preethi shettigar

Updated on: Jun 01, 2021 | 9:56 AM

ಕರ್ನಾಟಕ ರಾಜ್ಯದಲ್ಲಿ ವ್ಯಾಪಕವಾಗಿ ಹರಡಿದ ಕೊರೊನಾ ಸೋಂಕಿನ 2ನೇ ಅಲೆಗೆ ಕಡಿವಾಣ ಹಾಕಲೆಂದು ಸರ್ಕಾರವು ಲಾಕ್​ಡೌನ್ ಘೋಷಿಸಿ ಸುಮಾರು 40 ದಿನಗಳಾಗುತ್ತಿವೆ. ಇನ್ನೂ 7 ದಿನ ಲಾಕ್​ಡೌನ್ ನಿರ್ಬಂಧ ವಿಸ್ತರಿಸಬೇಕು ಎಂದು ಸರ್ಕಾರಕ್ಕೆ ತಜ್ಞರು ಸಲಹೆ ನೀಡಿದ್ದಾರೆ. ಲಾಕ್​ಡೌನ್​ನಿಂದ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದ್ದರೂ ಆರ್ಥಿಕತೆ ಕುಸಿಯುತ್ತಿದೆ. ಜನರು ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೋಮವಾರ ಟಿವಿ9 ಕನ್ನಡ ಡಿಜಿಟಲ್ ನಡೆಸಿದ ಲೈವ್ ಸಂವಾದದಲ್ಲಿ ಚರ್ಚೆ ನಡೆಯಿತು. ಆ್ಯಂಕರ್ ಹರಿಪ್ರಸಾದ್ ಸಂವಾದ ನಡೆಸಿಕೊಟ್ಟರು. ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಸುನಿಲ್, ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಜಿ.ಆರ್.ಬಂಗೇರ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ಆರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಎಸ್.ಆರ್.ಕೇಶವ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಸಂವಾದದ ಆರಂಭದಲ್ಲಿ ಮಾತನಾಡಿದ ಸಾಂಕ್ರಾಮಿಕ ರೋಗಗಳ ತಜ್ಞ ಡಾ.ಸುನಿಲ್, ಬೆಂಗಳೂರಿನಲ್ಲಿ ಪಾಸಿಟಿವಿಟಿ ಪ್ರಮಾಣವು ಶೇ 10ಕ್ಕಿಂತ ಕಡಿಮೆ ಇದೆ. ಆದರೆ ಇದೂ ಸಹ ನೆಮ್ಮದಿಗೆ ಕಾರಣವಾಗುವುದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ನಗರಗಳಲ್ಲಿ ಪಾಸಿಟಿವಿಟಿ ದರವು ಶೇ 5ಕ್ಕೂ ಕಡಿಮೆ ಇರಬೇಕು ಎಂದು ಹೇಳುತ್ತೆ. ಲಾಕ್​ಡೌನ್ ನಿರ್ಬಂಧ ಹಿಂಪಡೆದರೆ ಸೋಂಕು ಮತ್ತೆ ಹೆಚ್ಚಾಗುವ ಅಪಾಯವಿದೆ. ಸೋಂಕು ಪೂರ್ಣ ನಿಯಂತ್ರಣಕ್ಕೆ ಬರೋಕೆ ಇನ್ನೂ 15 ದಿನ ಲಾಕ್​ಡೌನ್ ಮಾಡಬೇಕು. 1ನೇ ಅಲೆಯ ನಂತರ ಜನರ ವರ್ತನೆ ನೋಡಿದರೆ ನನಗೆ ಅಷ್ಟೊಂದು ವಿಶ್ವಾಸ ಬರ್ತಿಲ್ಲ. ನಿರ್ಬಂಧ ತೆಗೆದ್ರೆ ಜನರು ಓಡಾಡ್ತಾರೆ. ಒಮ್ಮೆ ಸಂಪರ್ಕ ಶುರುವಾದ್ರೆ ಸೋಂಕು ಹೆಚ್ಚಾಗುತ್ತೆ. ಕೇಂದ್ರ ಸರ್ಕಾರದ ಪ್ರಕಾರ ಐಸಿಯು ಬೆಡ್​ ಆಕ್ಯುಪೆನ್ಸಿ ಪ್ರಮಾಣವೂ ಶೇ 50ರಷ್ಟು ಇರಬೇಕು. ಆದರೆ ಈ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ಲಾಕ್​ಡೌನ್ ನಿರ್ಬಂಧಗಳನ್ನು ಇನ್ನಷ್ಟು ದಿನ ವಿಸ್ತರಿಸುವುದು ಅನಿವಾರ್ಯ ಎಂದು ಹೇಳಿದರು.

ಜೀವ, ಜೀವನ ಎರಡೂ ಮುಖ್ಯ: ಪ್ರೊ.ಕೇಶವ ನಾವು 2020ರಲ್ಲಿ ಅನುಭವಿಸಿದ್ದಂಥದ್ದೇ ಪರಿಸ್ಥಿತಿ. ನಮಗೆ ಜೀವ ಮತ್ತು ಜೀವನ ಎರಡೂ ಮುಖ್ಯ. ಸರ್ಕಾರಕ್ಕೂ ಈ ದ್ವಂದ್ವ ಇದೆ. ಕೊರೊನಾ ಪಾಸಿಟಿವಿಟಿ ದರ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ನಾವು ಲಾಕ್​ಡೌನ್​ಗೆ ಹೋಗಬೇಕಾಯಿತು. ಈಗ ನಮ್ಮ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 38ರಿಂದ ಶೇ 14ಕ್ಕೆ ಬಂದಿದೆ. 40 ದಿನಗಳ ಲಾಕ್​ಡೌನ್ ನಂತರವೂ ಇದು ಏಕೆ ಶೇ 10ರ ಒಳಗೆ ಬಂದಿಲ್ಲ? ನಾವು ಫೇಲ್ ಆಗಿದ್ದು ಎಲ್ಲಿ? ಇವೆಲ್ಲಾ ಒಂದು ಸಮಾಜವಾಗಿ ನಾವು ಯೋಚಿಸಬೇಕಾದ ವಿಷಯಗಳು.

ಈ ವರ್ಷ ಮುಂಗಾರು ಚೆನ್ನಾಗಿದೆ. ಮೊದಲ ವಾರದಲ್ಲಿಯೇ ಕರ್ನಾಟಕದಲ್ಲಿ ಮಳೆ ಬರುತ್ತೆ. ಇನ್ನೊಂದು ವಾರ ಲಾಕ್​ಡೌನ್ ಇರುತ್ತಾ ಇಲ್ವಾ ಎಂಬ ಬಗ್ಗೆ ಸರ್ಕಾರ ಸ್ಪಷ್ಟವಾದ ನಿರ್ಧಾರ ತೆಗೆದುಕೊಳ್ಳಬೇಕು. ಇನ್ನು 15 ದಿನ ಲಾಕ್​ಡೌನ್ ನಿರ್ಬಂಧ ವಿಸ್ತರಿಸುವುದಿದ್ದರೆ ಅದನ್ನೂ ಸ್ಪಷ್ಟವಾಗಿ ಹೇಳಬೇಕು. ಸರ್ಕಾರ ಒಂದು ಪ್ಲಾನ್ ಮುಂದಿಟ್ಟರೆ ಜನರು ಸಿದ್ಧತೆ ಮಾಡಿಕೊಳ್ತಾರೆ. ಯಾವಾಗಿನಿಂದ ಲಾಕ್​ಡೌನ್ ಹೋಗುತ್ತೆ ಅಂತ ಜನರಿಗೆ ಗೊತ್ತಾಗಬೇಕು.

ಈಗ ನಗರಗಳಲ್ಲಿ ಕೊರೊನಾ ಸೋಂಕು ಕಡಿಮೆಯಾಗ್ತಿದೆ. ಹಳ್ಳಿಗಳಲ್ಲಿ ಹೆಚ್ಚಾಗ್ತಿದೆ. ಬಿತ್ತನೆ ಚಟುವಟಿಕೆಯ ಈ ಕಾಲದಲ್ಲಿ ಹಳ್ಳಿಗಳಲ್ಲಿ ಆರೋಗ್ಯ ಸುಧಾರಣೆಗೆ ಎಂಥ ಕ್ರಮ ತಗೊಂಡಿದ್ದೀವಿ ಅಂತ ಯೋಚನೆ ಮಾಡಬೇಕು. ಹಳ್ಳಿಗಳಲ್ಲಿ ಸೋಂಕಿತರನ್ನು ಐಸೋಲೇಟ್ ಮಾಡಿ, ಪ್ರೈಮರಿ ಕಾಂಟ್ಯಾಕ್ಟ್​ಗೆ ಚಿಕಿತ್ಸೆ ಕೊಡಬೇಕಿತ್ತು. ಇದನ್ನು ಯುದ್ಧೋಪಾದಿಯಲ್ಲಿ ಮಾಡ್ತಿದ್ದೀವಾ? ರಾಜಸ್ಥಾನ ಬಿಟ್ಟರೆ ನಮ್ಮಲ್ಲೇ ಒಣಭೂಮಿ ಹೆಚ್ಚಾಗಿರುವುದು. ಮಳೆ ಬಂದ ತಕ್ಷಣ ಎಲ್ಲರೂ ಭೂಮಿಗೆ ಬರ್ತಾರೆ. ಈ ವೇಳೆ ಸೋಂಕು ತಡೆಗೆ ಏನು ಯೋಜನೆ ರೂಪಿಸಿದ್ದೇವೆ?

ಬೆಂಗಳೂರಿನಲ್ಲಿ 2.5 ಲಕ್ಷ ಸಣ್ಣ ಮತ್ತು ಅತಿಸಣ್ಣ ಘಟಕಗಳಿವೆ (ಎಂಎಸ್​ಎಂಇ). ಕರ್ನಾಟಕದಲ್ಲಿ 7.5 ಲಕ್ಷ ಎಂಎಸ್​ಎಂಇಗಳಿವೆ. ಕೇವಲ ಜೀವ ಗಮನಿಸಿ ಜೀವನ ನೋಡದಿದ್ರೆ ಕಷ್ಟವಾಗುತ್ತೆ. ಈಗಾಗಲೇ ಸಾಕಷ್ಟು ಜನರು ಬಡತನ ರೇಖೆಗಿಂತ ಕೆಳಗೆ ಬಂದಿದ್ದಾರೆ. ಲಾಕ್​ಡೌನ್ ಮುಂದುವರಿದರೆ ಕೈಗಾರಿಕಾ ಉತ್ಪಾದನೆಗೆ ತೊಂದರೆಯಾಗುತ್ತಾ ಅಂತ ನನಗೆ ಭಯ. ಕೃಷಿ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆಬೀಜಗಳ ಪೂರೈಕೆ ಸರಿಯಾಗಿ ಆಗಿದೆಯೇ ಎಂಬ ಬಗ್ಗೆ ನನಗೆ ಆತಂಕವಿದೆ.

ಕಾರ್ಖಾನೆಗಳನ್ನು ತೆರೆಯಲು ಸರ್ಕಾರ ಗಮನ ಕೊಡಬೇಕು. ಕಾರ್ಮಿಕರಿಗೆ ಲಸಿಕೆ ಕೊಟ್ಟು ಪ್ರೊಡಕ್ಷನ್ ಶುರು ಮಾಡಬೇಕು. ಶಿಫ್ಟ್​ಗಳಲ್ಲಿ ಕೆಲಸ ಮಾಡುವುದನ್ನು ಪ್ರೋತ್ಸಾಹಿಸಬೇಕು. ಕಾರ್ಖಾನೆಗಳ ಸಮೀಪದಲ್ಲಿಯೇ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಯಾವುದೇ ದೇಶಗಳಲ್ಲಿ ನಡೆದ ವಿದ್ಯಮಾನಗಳನ್ನು ಅಧ್ಯಯನ ಮಾಡಿದ್ರೆ ದೀರ್ಘಕಾಲದ ಲಾಕ್​ಡೌನ್ ಯಶಸ್ವಿಯಾಗಲ್ಲ ಎನ್ನುವುದು ಗಮನಕ್ಕೆ ಬರುತ್ತೆ. ಸುದೀರ್ಘ ಅವಧಿಗೆ ಲಾಕ್​ಡೌನ್ ಮಾಡಿದರೆ ತೊಂದರೆಯೇ ಹೆಚ್ಚು. ಬಡತನ ಹೆಚ್ಚಾಗುತ್ತೆ. ಹೊರಗೆ ಬಂದ್ರೆ ಕೊವಿಡ್, ಮನೆಯಲ್ಲಿದ್ರೆ ಹಸಿವಿನಿಂದ ಸಾಯಬೇಕಾಗುತ್ತೆ. ಸ್ವಾಭಿಮಾನದಿಂದ ಬದುಕುವ ಜನರು ಸರ್ಕಾರದಿಂದ ಸಿಗುವ ಉಚಿತ ಕೊಡುಗೆಗಳನ್ನೂ ಇಷ್ಟಪಡುವುದಿಲ್ಲ. ಕೆಲಸ ಕಳೆದುಕೊಳ್ಳುವ ಎಲ್ಲರಿಗೂ ಸಹಾಯ ಮಾಡುವಷ್ಟು ಹಣ ಸರ್ಕಾರದ ಬಳಿ ಇದೆಯೇ ಎಂಬ ಬಗ್ಗೆಯೂ ನಾವು ಯೋಚಿಸಬೇಕಿದೆ.

Facebook-Live

ಅರ್ಥಶಾಸ್ತ್ರಜ್ಞ ಪ್ರೊ.ಕೇಶವ ಮತ್ತು ಉದ್ಯಮಿ ಜಿ.ಆರ್.ಬಂಗೇರ

ಸರ್ಕಾರ ಎಚ್ಚೆತ್ತುಕೊಳ್ಳದಿದ್ರೆ ನಿರುದ್ಯೋಗ ಹೆಚ್ಚಾಗುತ್ತೆ: ಜಿ.ಆರ್.ಬಂಗೇರ ಸಂವಾದದಲ್ಲಿ ಮಾತನಾಡಿದ ಎಫ್​ಕೆಸಿಸಿಐ ಮಾಜಿ ಅಧ್ಯಕ್ಷ ಮತ್ತು ಉದ್ಯಮಿ ಜಿ.ಆರ್.ಬಂಗೇರ, ‘ಕಾರ್ಖಾನೆಗಳನ್ನು ನಡೆಸಲು ನಮಗೆ ಸಾಧ್ಯವಾಗುತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ, ಪ್ರತಿವರ್ಷ ಕಾಲೇಜುಗಳಿಂದ ಹೊರಗೆ ಬರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವುದಾದರೂ ಹೇಗೆ’ ಎಂದು ಪ್ರಶ್ನಿಸಿದರು.

‘ಉತ್ಪಾದನೆ, ಮಾರಾಟ ನಿಂತು ಹೋಗಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡಲು ಆಗುತ್ತಿಲ್ಲ. 2020ರಲ್ಲಿ ಅನುಭವಿಸಿದ ನಷ್ಟ ತುಂಬಿಕೊಳ್ಳುವ ಮೊದಲೇ ಮತ್ತೆ ಲಾಕ್​ಡೌನ್ ಬಂದಿದೆ. ಹಣ ರೊಟೇಶನ್ ಆಗಿ ಉದ್ಯಮ ನಡೆಯಬೇಕು. ಮೀಸಲು ನಿಧಿ ಹೆಚ್ಚು ಇರುವುದಿಲ್ಲ. ಬ್ಯಾಂಕ್​ಗಳಲ್ಲಿ ಸಾಲ ತಂದರೆ ಬಡ್ಡಿಕಟ್ಟೋರು ಯಾರು? ಅಸಲು ತೀರಿಸುವ ಬಗೆ ಹೇಗೆ? ಲಾಕ್​ಡೌನ್ ಇದ್ದರೆ ವ್ಯಾಪಾರ ಆಗುವುದಿಲ್ಲ, ವ್ಯಾಪಾರ ಆಗದಿದ್ದರೆ ಉತ್ಪಾದನೆಯಿಂದ ಪ್ರಯೋಜನವಾಗುವುದಿಲ್ಲ. ಕರ್ನಾಟಕದಲ್ಲಿ ಶೇ 59ರಷ್ಟು ಕೈಗಾರಿಕೆಗಳು ಈಗ ಬಾಗಿಲು ಹಾಕುವ ಸ್ಥಿತಿಗೆ ಬಂದಿವೆ.

ನಾವು ಜೀವ ಮತ್ತು ಜೀವನದ ಮಧ್ಯೆ ಹೋರಾಡ್ತಾ ಇದ್ದೀವಿ. ಲಸಿಕೆ ಕೊಡೋದು ಚುರುಕಾಗಬೇಕು. ಕುಂಬಳಗೋಡಿನಲ್ಲಿ 7-8 ಸಾವಿರ ಜನರು ಕೈಗಾರಿಕೆಗಳಲ್ಲಿ ಕೆಲಸ ಮಾಡ್ತಾರೆ. ಆದ್ರೆ ಅಲ್ಲಿನ ಪಿಎಚ್​ಸಿಯಲ್ಲಿ 100 ಲಸಿಕೆ ಕೂಡಾ ಪ್ರತಿದಿನ ಕೊಡ್ತಿಲ್ಲ. ಒಟ್ಟು ಜನಸಂಖ್ಯೆಯ ಅರ್ಧದಷ್ಟಾದರೂ ಜನರಿಗೆ ಲಸಿಕೆ ಕೊಟ್ಟರೆ ಮಾತ್ರ ಪರಿಸ್ಥಿತಿ ಒಂದು ಹಂತಕ್ಕೆ ಬರುತ್ತೆ. ಕೈಗಾರಿಕೆಗಳಲ್ಲಿ ಕಾರ್ಮಿಕರನ್ನು ಇರಿಸಿಕೊಳ್ಳಿ ಎಂಬ ಸಲಹೆ ಕೇಳಿಬರುತ್ತಿದೆ. ಅದರೆ ಇದು ಅಸಾಧ್ಯ.

ಸರ್ಕಾರದವರು ಕೊವಿಡ್ ಪ್ಯಾಕೇಜ್ ಅಂತ 20 ಲಕ್ಷ ಕೋಟಿ ರೂಪಾಯಿ ಕೊಟ್ಟಿದ್ದೀವಿ ಅಂತ ಹೇಳ್ತಾರೆ. 20 ಲಕ್ಷ ಕೋಟಿಗೆ ಎಷ್ಟು ಸೊನ್ನೆ ಅಂತ್ಲೇ ನನಗೆ ಗೊತ್ತಾಗಲ್ಲ. ಆದರೆ ಈ ಹಣದಲ್ಲಿ ಶೇ 60ರಷ್ಟು ಬಳಕೆಯಾಗಿಲ್ಲ. ಬ್ಯಾಂಕ್​ನವರಿಗೆ ಆರ್​ಬಿಐ, ಸರ್ಕಾರದಿಂದ ನಿರ್ದೇಶನ ಬಂದಾಗ ಸಾಲ ಕೊಡ್ತಾರೆ. ಆದರೆ 90 ದಿನಗಳಿಂದ 180 ದಿನಗಳಿಗೆ ಎನ್​ಪಿಎ ಅವಧಿ ವಿಸ್ತರಿಸಬೇಕು ಅಂದ್ರೆ ಈವರೆಗೆ ಕೇಳಿಲ್ಲ. ರಿನ್ಯೂವಲ್ ಫೀಸ್, ಸರ್ವೀಸ್ ಚಾರ್ಜ್​ ಹಾಕ್ತಿದ್ದಾರೆ. ಬ್ಯಾಂಕ್​ನವರಿಗೂ ಫೈನಾನ್ಸ್​ನವರಿಗೂ ಏನೂ ವ್ಯತ್ಯಾಸವಿಲ್ಲದ ಸ್ಥಿತಿಯಿದೆ.

ನಾನು ಸರ್ಕಾರಕ್ಕೆ ಒತ್ತಾಯಿಸುವುದು ಇಷ್ಟೇ. ಸ್ವಾಮಿ 20 ಲಕ್ಷ ಕೋಟಿ ಪ್ಯಾಕೇಜ್​ ಆಮೇಲೆ ಮಾಡಿ. 2000 ಕೋಟಿ ಬದಿಗಿಟ್ಟು ಲಸಿಕೆ ತರಿಸಿ, ಎಲ್ಲರಿಗೂ ಕೊಡಿ. ಲಾಕ್​ಡೌನ್ ಮಾಡಿದ್ರೆ ಸಂಪಾದನೆಯಿಲ್ಲದ ಜನ ಬದುಕುವುದಾದರೂ ಹೇಗೆ? ನಮ್ಮದು ಮುಂದುವರಿದ ದೇಶವಲ್ಲ. ಇನ್ನೊಂದು ವರ್ಷ ಕೈಗಾರಿಕೆಗಳು ಮೇಲೆ ಏಳುವ ಪರಿಸ್ಥಿತಿಯಿಲ್ಲ. ಈಗ ಲಕ್ಷಾಂತರ ಜನ ಕಾಲೇಜುಗಳಿಂದ ಬರ್ತಾರೆ. ಅವರಿಗೆ ಕೆಲಸ ಯಾರು ಕೊಡ್ತಾರೆ. ಸಾಲ ಕೊಟ್ರೆ ಉದ್ಯಮಗಳು ಕೆಲಸ ಮಾಡಲು ಆಗಲ್ಲ. ಉತ್ಪಾದನೆ ಶುರುವಾಗಬೇಕು, ಉತ್ಪಾದನೆಯಾದ ಸರಕು ಗ್ರಾಹಕರನ್ನು ತಲುಪಬೇಕು, ಮಾರಾಟದ ಸರಣಿ ಮತ್ತೆ ಚಾಲೂ ಆಗಬೇಕು.

(Question of Life and Livelihood in the time of covid pandemic govt should plan to protect public safety and economy)

ಇದನ್ನೂ ಓದಿ: ಸಮಗ್ರ ಕರ್ನಾಟಕ ವರದಿ: ಯಾವ ಜಿಲ್ಲೆಯಲ್ಲಿ ಎಷ್ಟು ದಿನ ಲಾಕ್​ಡೌನ್? ಜಿಲ್ಲಾವಾರು ನಿಯಮಗಳು ಹೇಗಿವೆ? ಇಲ್ಲಿದೆ ಸಂಪೂರ್ಣ ಮಾಹಿತಿ

 ಬೆಂಗಳೂರಿನಲ್ಲಿ ಲಾಕ್​ಡೌನ್ ಉಲ್ಲಂಘಿಸಿ ಓಡಾಟ; 26 ಸಾವಿರ ವಾಹನ ಜಪ್ತಿ, 17 ಕೋಟಿ ರೂಪಾಯಿ ದಂಡ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್