ಬೆಂಗಳೂರು: ಲಸಿಕೆ ಹಾಕಿ ಹಣ ಮಾಡುತ್ತಿದ್ದ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯ ವಜಾ

ಬೆಂಗಳೂರು: ಲಸಿಕೆ ಹಾಕಿ ಹಣ ಮಾಡುತ್ತಿದ್ದ ಬಿಬಿಎಂಪಿ ಆರೋಗ್ಯ ಕೇಂದ್ರದ ವೈದ್ಯ ವಜಾ
ಕೊರೊನಾ ಲಸಿಕೆ (ಪ್ರಾತಿನಿಧಿಕ ಚಿತ್ರ)

ಹೆಚ್ಚುವರಿ ಹಣ ಪಡೆದು ಜನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಶಾಪ್ ಮಾಲೀಕ ಮತ್ತು ವೈದ್ಯ ವಿರುದ್ಧ ಆರೋಪ ಕೇಳಿ ಬಂದಿದೆ. ದಂಧೆ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ವೈದ್ಯನನ್ನು ವಜಾಗೊಳಿಸಲಾಗಿದೆ.

Ayesha Banu

|

Jun 01, 2021 | 9:12 AM

ಬೆಂಗಳೂರು: ಕಳೆದ ಕೆಲ ದಿನಗಳ ಹಿಂದೆ ಅರ್ಹರಿಗೆ ನೀಡಬೇಕಿದ್ದ ಕೊರೊನಾ ಲಸಿಕೆಯನ್ನು ಹಣ ಪಡೆದು ಅಕ್ರಮವಾಗಿ ನೀಡುತ್ತಿದ್ದ ಬಿಬಿಎಂಪಿ ಗುತ್ತಿಗೆ ವೈದ್ಯೆ ಸೇರಿ ಇಬ್ಬರನ್ನು ಬಂಧಿಸಲಾಗಿತ್ತು. ಸದ್ಯ ಈಗ ಇಂತಹದೆ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರಿನ ಎನ್.ಎಸ್ ಪಾಳ್ಯದ ಬಿಬಿಎಂಪಿ ಆರೋಗ್ಯ ಕೇಂದ್ರದಲ್ಲಿ ವ್ಯಾಕ್ಸಿನ್ ದಂಧೆ ಬಯಲಾಗಿದೆ.

ಹೆಚ್ಚುವರಿ ಹಣ ಪಡೆದು ಜನರಿಗೆ ಕೊವಿಡ್ ಲಸಿಕೆ ನೀಡಲಾಗುತ್ತಿದೆ ಎಂದು ಮೆಡಿಕಲ್ ಶಾಪ್ ಮಾಲೀಕ ಮತ್ತು ವೈದ್ಯ ವಿರುದ್ಧ ಆರೋಪ ಕೇಳಿ ಬಂದಿದೆ. ದಂಧೆ ನಡೆಯುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಆರೋಗ್ಯ ಕೇಂದ್ರದ ವೈದ್ಯನನ್ನು ವಜಾಗೊಳಿಸಲಾಗಿದೆ.

ಸಾರ್ವಜನಿಕರಿಂದ ಹಣ ಪಡೆದು ಫ್ರೆಂಟ್ ಲೈನ್ ವಾರಿಯರ್ ಎಂದು ಹೇಳಿ ವ್ಯಾಕ್ಸಿನ್ ನೀಡುತ್ತಿದ್ದರು. ಮೆಡಿಕಲ್ ಶಾಪ್ ಮಾಲೀಕ ಮತ್ತು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಡಾಕ್ಟರ್ ಇಬ್ಬರೂ ಸೇರಿ ಸರ್ಕಾರದಿಂದ ಬರುವ ಲಸಿಕೆಯನ್ನು ಹೆಚ್ಚಿನ ಹಣಕ್ಕೆ ಮಾರುತ್ತಿದ್ದರು. ಮೊದಲಿಗೆ ಮೆಡಿಕಲ್ ಶಾಪ್ ಮಾಲೀಕ ತನ್ನ ಅಂಗಡಿಗೆ ಬರುವ ಜನರಿಗೆ ಲಸಿಕೆ ಹಾಕಿಸಿಕೊಳ್ಳಬೇಕೆ ಎಂದು ಹೇಳಿ ತಿಳಿದುಕೊಳ್ಳುತ್ತಿದ್ದ ಬಳಿಕ ಹೆಚ್ಚು ಹಣ ಪಡೆದು ಅವರನ್ನು ಆರೋಗ್ಯ ಕೇಂದ್ರಕ್ಕೆ ಕಳಿಸುತ್ತಿದ್ದ. ಅಲ್ಲಿ ಮೆಡಿಕಲ್ ಶಾಪ್ನಿಂದ ಬಂದವರಿಗೆ ಮೊದಲು ವಾಕ್ಸಿನ್ ಹಾಕಿಸಿ ಕಳಿಸಲಾಗುತ್ತಿತ್ತು.

ಇವರು ಯಾರೂ ಕ್ಯೂನಲ್ಲಿ ನಿಲ್ಲುವ ಅಗತ್ಯವೇ ಇರಲಿಲ್ಲ. ನೇರವಾಗಿ ಹೋಗಿ ಕೊವಿಡ್ ಲಸಿಕೆ ಪಡೆಯುತ್ತಿದ್ದರು. ಕ್ಯೂನಲ್ಲಿ ನಿಂತು ಲಸಿಕೆ ಪಡೆಯಲು ಬಂದ ಜನ ಇದನ್ನು ಗಮನಿಸಿ ಈ ಬಗ್ಗೆ ಬಿಬಿಎಂಪಿ ಹಾಗೂ ಶಾಸಕರ ಕಚೇರಿಗೆ ದೂರು ನೀಡಿದ್ದಾರೆ. ಹೀಗಾಗಿ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡ್ತಿದ್ದ ಡಾಕ್ಟರ್ ರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇವರಿಬ್ಬರೂ ಸೇರಿ ನೂರಾರು ಜನರಿಗೆ ಲಸಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ: ಲಸಿಕೆ ಹಾಕಿ ಹಣ ಮಾಡುತ್ತಿದ್ದ ಲೇಡಿ ಡಾಕ್ಟರ್ಸ್ ವಿರುದ್ಧ ಎಫ್ಐಆರ್, ಪೊಲೀಸರಿಂದ ಮುಂದುವರೆದ ಶೋಧ

Follow us on

Related Stories

Most Read Stories

Click on your DTH Provider to Add TV9 Kannada