AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಕ್ಕೂ ಬಂತು ಕುತ್ತು: ಜನ ಓಡಾಡುವ ದಾರಿಯಲ್ಲಿ ಕಾಂಕ್ರೀಟ್ ಬ್ಲಾಕ್​​ಗಳ ಹಾವಳಿ

ಒಂದು ಕಾಲದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಪರಿಪೂರ್ಣವೆಂದು ಖ್ಯಾತಿ ಪಡೆದಿತ್ತು. ಆದರೆ ಇತ್ತೀಚೆಗೆ ಪಾದಚಾರಿಗಳ ಮಾರ್ಗಗಳಲ್ಲಿ ಕಾಂಕ್ರೀಟ್ ಬ್ಲಾಕ್‌ಗಳು, ಕಸ ಮತ್ತು ಅಡ್ಡಾದಿಡ್ಡಿ ವಾಹನ ನಿಲುಗಡೆಯಿಂದ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಬಾಗ್‌ಮನೆ ಟೆಕ್ ಪಾರ್ಕ್ ಪ್ರದೇಶದಲ್ಲಿನ ಈ ಅವ್ಯವಸ್ಥೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆದು, ಸುರಕ್ಷಿತ ಪಾದಚಾರಿ ಮಾರ್ಗಗಳ ಅಗತ್ಯವನ್ನು ಒತ್ತಿಹೇಳಲಾಗಿದೆ.

ಬೆಂಗಳೂರಿನಲ್ಲಿ ಪಾದಚಾರಿ ಮಾರ್ಗಕ್ಕೂ ಬಂತು ಕುತ್ತು: ಜನ ಓಡಾಡುವ ದಾರಿಯಲ್ಲಿ ಕಾಂಕ್ರೀಟ್ ಬ್ಲಾಕ್​​ಗಳ ಹಾವಳಿ
ವೈರಲ್​ ಪೋಸ್ಟ್
ಅಕ್ಷಯ್​ ಪಲ್ಲಮಜಲು​​
|

Updated on:Jan 10, 2026 | 10:09 PM

Share

ಬೆಂಗಳೂರು, ಜ.10: ಬೆಂಗಳೂರು (Bengaluru) ಸಿಲಿಕಾನ್​​ ಸಿಟಿ, ಇಲ್ಲಿ ಎಲ್ಲವೂ ಪರ್ಫೆಕ್ಟ್ ಆಗಿರಬೇಕು. ಆದರೆ ಇತ್ತೀಚಿಗೆ ಇಲ್ಲಿ ಯಾವುದೂ ಸರಿ ಇಲ್ಲ. ದಿನಕ್ಕೊಂದು ಸಮಸ್ಯೆಗಳ ದೂರು ಬರುತ್ತಿರುತ್ತದೆ. ಒಂದು ಕಡೆ ರಸ್ತೆ ಸಮಸ್ಯೆ, ಇನ್ನೊಂದು ಕಡೆ ಟ್ರಾಫಿಕ್​​​​, ಇದೀಗ ಇದರ ಜತೆಗೆ ಪಾದಚಾರಿಗಳ ಮಾರ್ಗ ಕೂಡ ಸರಿ ಇಲ್ಲ. ಪಾದಚಾರಿಗಳ ಮಾರ್ಗದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಎಕ್ಸ್​​ನಲ್ಲಿ ಈ ವಿಚಾರವಾಗಿ ಪೋಸ್ಟ್​​ವೊಂದನ್ನು ಮಹಿಳೆಯೊಬ್ಬರು ಹಂಚಿಕೊಂಡಿದ್ದಾರೆ. ಮೊದಲೇ ಈ ಪಾದಚಾರಿ ಮಾರ್ಗದಲ್ಲಿ ಓಡಾಡಲು ಆಗುತ್ತಿಲ್ಲ. ಅಲ್ಲಿಯೇ ಕಸ, ವಾಹನ ಎಲ್ಲವನ್ನು ನಿಲ್ಲಿಸಿರುತ್ತಾರೆ. ಹೇಗೋ ಸಹಿಸಿಕೊಂಡು ಹೋಗುತ್ತೇವೆ. ಇದರ ಮಧ್ಯೆ ಈ ದೊಡ್ಡ ಗಾತ್ರದ ಕಾಂಕ್ರೀಟ್ ಬ್ಲಾಕ್‌ ಇಟ್ಟಿದ್ದಾರೆ. ಜನರು ಇಲ್ಲಿ ಹೇಗೆ ಓಡಾಡುವುದು, ಅಧಿಕಾರಿಗಳಿಗೆ ಈ ಬಗ್ಗೆ ಸಾಮಾನ್ಯ ಪ್ರಜ್ಞೆಯಾದರು ಇರಬೇಕೆಲ್ಲ ಎಂದು ಪ್ರಶ್ನಿಸಿದ್ದಾರೆ.

ಎಕ್ಸ್​​ ಖಾತೆಯಲ್ಲಿ ಶಿಲ್ಪ ಎನ್ನುವವರು ಈ ಪೋಸ್ಟ್​ನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಂದು ಫೋಟೋವನ್ನು ಹಂಚಿಕೊಂಡು, “ಭಾರತದ ಅತಿದೊಡ್ಡ ತಂತ್ರಜ್ಞಾನ ಕೇಂದ್ರಗಳಲ್ಲಿ ಒಂದಾದ ನಮ್ಮ ಬೆಂಗಳೂರು, ಸಾರ್ವಜನಿಕ ಯೋಜನೆ ಮತ್ತು ಪಾದಚಾರಿ ಸುರಕ್ಷತೆಯ ಕುರಿತು ಭಾರೀ ಚರ್ಚೆಗೆ ಕಾರಣವಾಗಿದೆ. ಬಾಗ್ಮನೆ ಟೆಕ್ ಪಾರ್ಕ್ ಪ್ರದೇಶದಲ್ಲಿರುವ ಇಂತಹ ಸ್ಥಿತಿ ಎಲ್ಲೂ ಇಲ್ಲ. ಪಾದಚಾರಿ ಮಾರ್ಗದ ಮೇಲೆ ಕಾಂಕ್ರೀಟ್ ಬ್ಲಾಕ್‌ಗಳನ್ನು ಹಾಕಲಾಗಿದ್ದು, ರಸ್ತೆಯಲ್ಲಿ ಸುರಕ್ಷಿತವಾಗಿ ನಡೆಯಬೇಕಾಗಿರುವ ಪರಿಸ್ಥಿತಿ ಬಂದಿದೆ. ಮೊದಲು ಸಂಗ್ರಹಣೆ, ನಂತರ ನಡೆಯಲು ಅನುಕೂಲಕರ” ಎಂದು ಈ ಪೋಸ್ಟ್​​ನಲ್ಲಿ ಬರೆದಿದ್ದಾರೆ. ಈ ಪೋಸ್ಟ್​ ಕಡಿಮೆ ಅವಧಿಯಲ್ಲಿ 8 ಸಾವಿರ ವೀಕ್ಷಣೆಯನ್ನು ಗಳಿಸಿಕೊಂಡಿದೆ. ಹಲವಾರು ನೆಟ್ಟಿಗರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅಲ್ಲಲ್ಲಿ ವಾಹನ ಪಾರ್ಕ್​ ಮಾಡುವವರಿಗೆ ಜಿಬಿಎ ಶಾಕ್!

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

​​ಬೆಂಗಳೂರಿನಾದ್ಯಂತ ಇಂತಹ ದೃಶ್ಯಗಳು ಸಾಮಾನ್ಯ ಎಂದು ಈ ಪೋಸ್ಟ್​​ಗೆ ರೀಪೋಸ್ಟ್​ ಮಾಡಿದ್ದಾರೆ. ಜನರ ನಡೆಯುವ ಈ ಸ್ಥಳದಲ್ಲಿ ವಾಹನ, ಕಾಮಗಾರಿ ವಸ್ತುಗಳು, ಇಂತಹ ದೊಡ್ಡ ಗಾತ್ರದ ಕಾಂಕ್ರೀಟ್ ಬ್ಲಾಕ್​​ಗಳನ್ನು ಹಾಕುತ್ತಿದ್ದಾರೆ. ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ ಅನೇಕರು ಕಮೆಂಟ್​ ಮಾಡಿದ್ದಾರೆ. ನಾವು ಪಾದಚಾರಿ ಮಾರ್ಗಗಳಲ್ಲಿ ಈ ಅಸಂಬದ್ಧತೆಗಾಗಿ ತೆರಿಗೆ ಪಾವತಿಸುತ್ತಿದ್ದೇವೆಯೇ? ಎಂದು ಒಬ್ಬರು ಹೇಳಿದ್ದಾರೆ. ಇದು ಗಂಭೀರವಾಗಿ ಸ್ವೀಕಾರಾರ್ಹವಲ್ಲ ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನ ನಿವಾಸಿಯಾಗಿ ಈ ಚಿತ್ರವನ್ನು ನೋಡಿದಾಗ ನನಗೆ ಬೇಸರವಾಗುತ್ತದೆ ಎಂದು ಇನ್ನೊಬ್ಬರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:07 pm, Sat, 10 January 26

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ
ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಕ್ಕೆ ಕಾರಣವೇನು? ವಿವರಿಸಿದ ಯಶ್ ತಾಯಿ ಪುಷ್ಪ