5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ

Srinivas Mata

|

Updated on:May 31, 2021 | 9:10 PM

ಭಾರತದಲ್ಲಿ 5G ತಂತ್ರಜ್ಞಾನ ಜಾರಿಯನ್ನು ವಿರೋಧಿಸಿ ಚಿತ್ರ ನಟಿ ಜೂಹಿ ಚಾವ್ಲಾ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಬಗ್ಗೆ ಜೂನ್ 2ನೇ ತಾರೀಕು ವಿಚಾರಣೆ ನಡೆಯಲಿದೆ.

5G ತಂತ್ರಜ್ಞಾನ ಭಾರತದಲ್ಲಿ ಜಾರಿ ಆಗಬಾರದೆಂದು ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ; ಆಕೆ ನೀಡಿದ ಕಾರಣಗಳು ಇಲ್ಲಿವೆ
ನಟಿ ಜೂಹಿ ಚಾವ್ಲಾ

Follow us on


ನವದೆಹಲಿ: ಬಾಲಿವುಡ್​ ನಟಿ ಜೂಹಿ ಚಾವ್ಲಾ ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್ (RF) ಹಾನಿಕಾರಕ ಪರಿಣಾಮಗಳ ಬಗ್ಗೆ ಅರಿವು ಮೂಡಿಸುವುದರಲ್ಲಿ ಸಕ್ರಿಯರಾಗಿದ್ದು, ಭಾರತದಲ್ಲಿ 5G ಮೊಬೈಲ್ ತಂತ್ರಜ್ಞಾನ ಅನುಷ್ಠಾನದ ವಿರುದ್ಧ ಕಾನೂನು ವ್ಯಾಜ್ಯ ಹೂಡಿದ್ದಾರೆ. ಇವತ್ತು ಇರುವುದಕ್ಕಿಂತ 5G ತಂತ್ರಜ್ಞಾನವು ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್​ಗೆ ಜನರು ಮತ್ತು ಪ್ರಾಣಿಗಗಳನ್ನು 10ರಿಂದ 100 ಪಟ್ಟಿನ ತನಕ ಒಡ್ಡುತ್ತದೆ ಎಂದು ಹೇಳಿದ್ದಾರೆ. ನ್ಯಾಯಮೂರ್ತಿ ಸಿ. ಹರಿಶಂಕರ್ ಅವರನ್ನು ಒಳಗೊಂಡ ಪೀಠವು ಈ ವಿಚಾರಣೆಯನ್ನು ದೆಹಲಿ ಹೈಕೋರ್ಟ್​ನ ಮತ್ತೊಂದು ಪೀಠಕ್ಕೆ ವರ್ಗಾಯಿಸಿದ್ದಾರೆ. ಜೂನ್ 2ನೇ ತಾರೀಕಿನಂದು ಅಹವಾಲು ಆಲಿಸಲಾಗುತ್ತದೆ. ಜೂಹಿ ಚಾವ್ಲಾ ಅವರ ವಕ್ತಾರರರು ಮಾತನಾಡಿ, 5G ತಂತ್ರಜ್ಞಾನವು ಮನುಷ್ಯರಿಗೆ ಮತ್ತು ಎಲ್ಲ ಜೀವಿಗಳಿಗೂ ಸುರಕ್ಷಿತ ಎಂಬುದನ್ನು ಪ್ರತಿವಾದಿಗಳು ಸ್ಪಷ್ಟಪಡಿಸಬೇಕು. ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್ ಅಧ್ಯಯನ ವರದಿಯನ್ನು ಅದಕ್ಕೆ ಪೂರಕವಾಗಿ ನೀಡುವಂತೆ ಸೂಚಿಸಲು ಮನವಿ ಮಾಡಲಾಗಿದೆ ಎಂದಿದ್ದಾರೆ.

ಇನ್ನೂ ಮುಂದುವರಿದು, ಒಂದು ವೇಳೆ ಅಗತ್ಯ ಪ್ರಮಾಣದಲ್ಲಿ ಅಧ್ಯಯನ ಆಗಿಲ್ಲ ಎಂದಾದಲ್ಲಿ ಖಾಸಗಿ ಹಿತಾಸಕ್ತಿಗಳು ಪಾಲ್ಗೊಳ್ಳದೆ ಗುಣಮಟ್ಟದ ಸಂಶೋಧನೆಯನ್ನು ನಡೆಸಬೇಕು ಎಂದು ಹೇಳಿದ್ದಾರೆ. 5G ತಂತ್ರಜ್ಞಾನ ಜಾರಿಗೆ ತರಲು ದೇಶದಲ್ಲಿ ಸ್ಪರ್ಧೆ ನಡೆಯುತ್ತಿದೆ. ಇದರಿಂದಾಗಿ ಸದ್ಯದ ಮತ್ತು ಭವಿಷ್ಯದ ತಲೆಮಾರಿನ ಆರೋಗ್ಯದ ಮೇಲೆ ಗಮನ ನೀಡದೆ ಬೇರೆ ಕಡೆಗೆ ಸೆಳೆಯಲಾಗುತ್ತಿದೆ ಎಂದಿದ್ದಾರೆ. ಇವತ್ತಿಗೆ ಹೊರಸೂಸುತ್ತಿರುವ ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್​ಗಿಂತ 10 ಅಥವಾ 100 ಪಟ್ಟು ಹೆಚ್ಚಾಗುವುದರಿಂದ ವರ್ಷದ 365 ದಿನ 24 ಗಂಟೆ ಕಾಲ ಭೂಮಿ ಮೇಲಿನ ಯಾವುದೇ ವ್ಯಕ್ತಿ, ಯಾವುದೇ ಪ್ರಾಣಿ, ಯಾವುದೇ ಪಕ್ಷಿ, ಕೀಟ ಮತ್ತು ಸಸ್ಯ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಜೂಹಿ ಚಾವ್ಲಾ ಹೇಳಿಕೆಯಲ್ಲಿ ಹೇಳಿದ್ದಾರೆ.

ಮನುಷ್ಯರು ಹಾಗೂ ಭೂಮಿಯ ಪರಿಸರದ ಮೇಲೆ ಸರಿಪಡಿಸಲಾದ ಹಾನಿಯಾಗುತ್ತದೆ. ಅದೇ ರೀತಿ 5G ತಂತ್ರಜ್ಞಾನದಿಂದ ಮನುಷ್ಯರ ಮೇಲೆ ಗಂಭೀರ ಮೇಲೆ ಪರಿಣಾಮ ಆಗುತ್ತದೆ ಎನ್ನಲಾಗಿದೆ. ಅಸ್ವಾಸ್ಥ್ಯಕ್ಕೆ ಒಳಗಾದ ಮನುಷ್ಯರು ಮತ್ತು ಡಿಎನ್​ಎ, ಜೀವಕೋಶಗಳು, ಅಂಗಾಂಗ ವ್ಯವಸ್ಥೆಗೆ ಹಾನಿ ಮಾಡಿರುವುದು ಕ್ಲಿನಿಕಲ್ ಪರೀಕ್ಷೆಯಲ್ಲಿ ಕಂಡುಬಂದಿದೆ. ಇದರ ಜತೆಗೆ ಪ್ರಾಣಿಗಳು ಮತ್ತು ಸಸ್ಯಗಳ ಮೇಲೂ ಪರಿಣಾಮ ಆಗುವುದು ಗೊತ್ತಾಗಿದೆ. ಎಲೆಕ್ಟ್ರೋಮ್ಯಾಗ್ನೆಟಿಕ್ ಮಾಲಿನ್ಯದಿಂದ ಆಧುನಿಕ ನಾಗರಿಕತೆ ಜನರಲ್ಲಿ ಕ್ಯಾನ್ಸರ್, ಹೃದಯಕ್ಕೆ ಸಂಬಂಧಿಸಿ ಸಮಸ್ಯೆ ಎದುರಾಗಬಹುದು ಎಂಬುದು 10,000ಕ್ಕೂ ಹೆಚ್ಚು ಅಧ್ಯಯನಗಳಿಂದ ಗೊತ್ತಾಗಿದೆ. ಈ ಸಂಖ್ಯೆಯು ನಿರ್ಲಕ್ಷ್ಯ ಮಾಡಲು ಸಾಧ್ಯವೇ ಇಲ್ಲದಂಥ ದೊಡ್ಡ ಸಂಖ್ಯೆ ಎಂದು ಹೇಳಲಾಗಿದೆ.

ಮಾರ್ಚ್ 20, 2019ಕ್ಕೆ ಆರ್​ಟಿಐ (ಮಾಹಿತಿ ಹಕ್ಕು ಕಾಯ್ದೆ) ಅಡಿ ಅನ್ವಯ ದೂರಸಂಪರ್ಕ ಸಚಿವಾಲಯವು ಉತ್ತರಿಸಿದ್ದು, ವಿಜ್ಞಾನ ಮತ್ತು ಎಂಜಿನಿಯರಿಂಗ್ ಸಂಶೋಧನೆ ಮಂಡಳಿಯ ಮಾಹಿತಿಯಂತೆ, 2G, 3G, 4G, 5G ಸೆಲ್ಯುಲಾರ್ ಟೆಕ್ನಾಲಜಿಯ ಪರಿಣಾಮ ಮನುಷ್ಯರು, ಪ್ರಾಣಿಗಳು, ಪಕ್ಷಿಗಳು, ಸಸ್ಯಗಳು ಮತ್ತು ಇತರ ಜೀವಿಗಳ ಮೇಲೆ ಏನು ಎಂಬ ಬಗ್ಗೆ ನಿರ್ದಿಷ್ಟ ಅಧ್ಯಯನ ಆಗಿಲ್ಲ ಎಂದಿದ್ದರು ಎನ್ನಲಾಗಿದೆ. ಚಾವ್ಲಾ ಹೇಳಿಕೆಯಲ್ಲಿ ತಿಳಿಸಿರುವಂತೆ, ಈ ತಂತ್ರಜ್ಞಾನ ಜಾರಿಗೆ ವಿರುದ್ಧವಾಗಿಯೇನೂ ಇಲ್ಲ. ಆದರೆ ಸ್ವಂತವಾಗಿ ರೇಡಿಯೋಫ್ರೀಕ್ವೆನ್ಸಿ ರೇಡಿಯೇಷನ್, ಕಾಲ್​ ಟವರ್ ಮತ್ತು ಅದರಿಂದ ಆಗುವ ಹಾನಿಕಾರಕ ಪರಿಣಾಮಗಳನ್ನು ಅಧ್ಯಯನ ನಡೆಸಿದ ಮೇಲೆ ಇದರ ಜಾರಿಗೆ ಆಕ್ಷೇಪ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: Fact Check: 5ಜಿ ತಂತ್ರಜ್ಞಾನ ಪ್ರಯೋಗಕ್ಕೂ ಕೋವಿಡ್-19ಗೂ ಯಾವುದೇ ಸಂಬಂಧವಿಲ್ಲ

(Bollywood actress Juhi Chawla plea in court against 5G implementation in India. Here is the details of case)

ತಾಜಾ ಸುದ್ದಿ

Related Stories

Most Read Stories

Click on your DTH Provider to Add TV9 Kannada