Online Meeting: ಆನ್​ಲೈನ್ ಮೀಟಿಂಗ್ ನಡುವೆ ಧ್ವನಿ ಸರಿಯಾಗಿ ಕೇಳದೇ ಸಮಸ್ಯೆ ಆಗುತ್ತಿದೆಯೇ? ಇಲ್ಲಿದೆ ಉಪಾಯ

ನೆಟ್​ವರ್ಕ್ ಸಮಸ್ಯೆ, ವಿಡಿಯೋ ಕಾಲ್​ನಲ್ಲಿ ಅಡಚಣೆ ಇತ್ಯಾದಿ ತೊಂದರೆಗಳು ಆಗುತ್ತಿವೆ. ಸಾಧಾರಣ ನೆಟ್​ವರ್ಕ್ ಸಿಕ್ಕರೂ ಫೋನ್ ನಡುವೆ ಕಿರಿಕಿರಿ, ನಾಯಿಸ್ ಉಂಟಾಗುತ್ತಿದೆ. ಇದಕ್ಕೆ ಪರಿಹಾರವೇನು? ಇಲ್ಲಿದೆ ಮಾಹಿತಿ.

Online Meeting: ಆನ್​ಲೈನ್ ಮೀಟಿಂಗ್ ನಡುವೆ ಧ್ವನಿ ಸರಿಯಾಗಿ ಕೇಳದೇ ಸಮಸ್ಯೆ ಆಗುತ್ತಿದೆಯೇ? ಇಲ್ಲಿದೆ ಉಪಾಯ
ಆನ್​ಲೈನ್ ಮೀಟಿಂಗ್ ವೇಳೆ ಸಮಸ್ಯೆ
Follow us
TV9 Web
| Updated By: ganapathi bhat

Updated on:Aug 14, 2021 | 1:04 PM

ಕೊರೊನಾ ಸೋಂಕು ಪರಿಚಯವಾದ ಮೇಲೆ ಬಹುತೇಕ ಎಲ್ಲಾ ಆಫೀಸ್ ಕೆಲಸಗಳು ಕೂಡ ಮನೆಯಿಂದಲೇ ನಡೆಯುತ್ತಿದೆ. ವರ್ಕ್ ಫ್ರಮ್ ಹೋಮ್ ಎಂಬ ಪದ್ಧತಿ ಶುರುವಾಗಿದೆ. ವಿಡಿಯೋ ಕಾಲ್, ಕಾನ್ಫರೆನ್ಸ್ ಕಾಲ್ ಮೂಲಕ ಮೀಟಿಂಗ್, ಎಲ್ಲವೂ ಆನ್​ಲೈನ್ ಎಂಬಂತಾಗಿದೆ. ಈ ನಡುವೆ ಕೆಲವರಿಗೆ ನೆಟ್​ವರ್ಕ್ ಸಮಸ್ಯೆ, ವಿಡಿಯೋ ಕಾಲ್​ನಲ್ಲಿ ಅಡಚಣೆ ಇತ್ಯಾದಿ ತೊಂದರೆಗಳು ಆಗುತ್ತಿವೆ. ಸಾಧಾರಣ ನೆಟ್​ವರ್ಕ್ ಸಿಕ್ಕರೂ ಫೋನ್ ನಡುವೆ ಕಿರಿಕಿರಿ, ನಾಯಿಸ್ ಉಂಟಾಗುತ್ತಿದೆ. ಇದಕ್ಕೆ ಪರಿಹಾರವೇನು? ಇಲ್ಲಿದೆ ಮಾಹಿತಿ.

ಆನ್​ಲೈನ್ ಕಾಲ್ ಸಮಸ್ಯೆಗೆ ಕ್ರಿಸ್ಪ್ ಎಂಬ ಅಪ್ಲಿಕೇಷನ್ ಬಳಸಿ ಪರಿಹಾರ ಕಂಡುಕೊಳ್ಳಬಹುದು. ಕ್ರಿಸ್ಪ್ ಅಪ್ಲಿಕೇಷನ್ ನಮ್ಮ ಮೊಬೈಲ್ ಮೈಕ್ರೋಫೋನ್ ಹಾಗೂ ವಿಡಿಯೋ ಕಾನ್ಫರೆನ್ಸ್ ಟೂಲ್ ನಡುವೆ ಮಧ್ಯವರ್ತಿಯಂತೆ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಬೇಡವಾದ ಶಬ್ದ (Noise Cancellation) ತೆಗೆಯಲು ಸಹಾಯ ಮಾಡುತ್ತದೆ. ಈ ಉಚಿತ ಅಪ್ಲಿಕೇಷನ್ ಆಂಡ್ರಾಯ್ಡ್ ಹಾಗೂ ಐಒಎಸ್ ಎರಡೂ ವಿಧದ ಮೊಬೈಲ್​ಗಳಿಗೆ ಲಭ್ಯವಿದೆ. ಜೂಮ್ ಕಾಲ್, ಟೀಮ್ಸ್, ಸ್ಲಾಕ್, ಹ್ಯಾಂಗ್​ಔಟ್ಸ್, ಸ್ಕೈಪ್ ಮತ್ತು ವೆಬೆಕ್ಸ್ ಅಪ್ಲಿಕೇಷನ್​ಗಳಿಗೆ, ವಿಡಿಯೋ ಕಾಲ್​ಗಳಿಗೆ ಕೂಡ ಕ್ರಿಸ್ಪ್ ಸಪೋರ್ಟ್ ಮಾಡುತ್ತದೆ. ಅಷ್ಟೇ ಅಲ್ಲದೆ ಇನ್ನಿತರ ವಿಡಿಯೋ ಕಾಲ್ ಅಪ್ಲಿಕೇಷನ್​ಗಳಿಗೆ ಕ್ರಿಸ್ಪ್ ಬಳಸಬೇಕಾದರೆ ‘ಇತರೆ ಅಪ್ಲಿಕೇಷನ್​ಗಳು (Other Apps)’ ಎಂಬ ಆಯ್ಕೆ ಕೂಡ ಲಭ್ಯವಿದೆ.

ಕ್ರಿಸ್ಪ್ ಅಪ್ಲಿಕೇಷನ್ ಮೊಬೈಲ್​ಗೆ ಅಳವಡಿಸಿಕೊಳ್ಳುವುದು ಹೇಗೆ? ಕ್ರಿಸ್ಟ್ ಆಪ್​ನ್ನು ಮೊಬೈಲ್​ನಲ್ಲಿ ಸೆಟ್ ಅಪ್ ಮಾಡಿಕೊಳ್ಳುವುದು ಬಹಳ ಕಷ್ಟದ ಕೆಲಸ ಏನಲ್ಲ. ಮೊದಲಿಗೆ ಕ್ರಿಸ್ಪ್ ವೆಬ್​ಸೈಟ್​ಗೆ ಸೈನ್ ಇನ್ ಆಗಬೇಕು. ಅದಾದ ಬಳಿಕ, ಸೂಕ್ತ ಸಾಧನ ಡೌನ್​ಲೋಡ್ ಮಾಡಿಕೊಳ್ಳಲು ಹೊಸ ಪುಟವೊಂದು ತೆರೆದುಕೊಳ್ಳುತ್ತದೆ. ಅದರಿಂದ ಆ ಸಾಧನ/ ಟೂಲ್​ನ್ನು ನಮ್ಮ ಕಂಪ್ಯೂಟರ್ ಅಥವಾ ಮೊಬೈಲ್​ಗೆ ಡೌನ್​ಲೋಡ್ ಮಾಡಿಕೊಳ್ಳಬಹುದು. ಡೌನ್​ಲೋಡ್ ಮಾಡಿಕೊಂಡ ಫೈಲ್ ಮುಖಾಂತರ ಟೂಲ್ ಬಳಕೆ ಮಾಡಲು ಆರಂಭಿಸಬಹುದು.

ಈ ಹಂತ ಮುಗಿದ ಬಳಿಕ, ಒಂದು ನೋಟಿಫಿಕೇಷನ್ ಟ್ರೇ ನಿಮ್ಮ ಮೊಬೈಲ್ ಸ್ಕ್ರೀನ್ ಮೇಲೆ ಕಂಡುಬರುತ್ತದೆ. ಆ ಟೂಲ್ ಮೂಲಕವೇ ನೀವು ನಾಯಿಸ್ ಕ್ಯಾನ್ಸಲೇಶನ್, ಶಬ್ದ ಅಡ್ಜಸ್​ಮೆಂಟ್ ಮಾಡಿಕೊಳ್ಳಬಹುದು. ಕ್ರಿಸ್ಪ್ ಬಳಕೆ ಮಾಡುವ ಮೊದಲು, ಮೈಕ್ರೋಫೋನ್ ಮೂಲಕ ಮಾತನಾಡಿ, ಸ್ಪೀಕರ್ ಮೂಲಕ ಕೇಳಿಕೊಂಡು ಮೊದಲು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರೀಕ್ಷಿಸಿಕೊಳ್ಳಬಹುದು. ಬಳಿಕ, ಯಾವ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಷನ್ ನೀವು ಬಳಸುತ್ತೀರೋ ಅದಕ್ಕೆ ಮಧ್ಯವರ್ತಿಯಾಗಿ ಕ್ರಿಸ್ಪ್ ಸೆಟ್ ಅಪ್ ಮಾಡಿಕೊಳ್ಳಬಹುದು.

ಜೂಮ್​ನಲ್ಲಿ ಕ್ರಿಸ್ಪ್ ಸೆಟ್ ಅಪ್ ಮಾಡಿಕೊಳ್ಳುವುದು ಹೇಗೆ? ಈಗ ಉದಾಹರಣೆಯಾಗಿ ಕ್ರಿಸ್ಪ್​ನ್ನು ಜೂಮ್ ಅಪ್ಲಿಕೇಷನ್​ನಲ್ಲಿ ಬಳಸುವುದು ಹೇಗೆ ಎಂದು ತಿಳಿದುಕೊಳ್ಳೋಣ. ಅದೇ ರೀತಿ ಮೇಲೆ ಸೂಚಿಸಿದ ಇತರ ವಿಡಿಯೋ ಕಾಲ್ ಅಪ್ಲಿಕೇಷನ್​ಗಳಿಗೂ ಈ ಸಾಧನವನ್ನು ಬಳಸಬಹುದು. ಮೊದಲಿಗೆ ಜೂಮ್ ತೆರೆದುಕೊಳ್ಳಿ. ಸೆಟ್ಟಿಂಗ್ಸ್ ಆಯ್ಕೆಗೆ ತೆರಳಿ. ಅಲ್ಲಿ ಆಡಿಯೋ ಸೆಟ್ಟಿಂಗ್ ಅಡಿಯಲ್ಲಿ ಮೈಕ್ರೋಫೋನ್ ಡ್ರಾಪ್ ಡೌನ್ ತೆರೆಯಿರಿ. ಅಲ್ಲಿ ಕ್ರಿಸ್ಪ್ ಮೈಕ್ರೋಫೋನ್ ಆಯ್ಕೆ ಕ್ಲಿಕ್ ಮಾಡಿ.

ಇದೇ ಆಯ್ಕೆಯನ್ನು ಸ್ಪೀಕರ್ ಅಥವಾ ಹೆಡ್​ಫೋನ್ ಔಟ್​ಪುಟ್​ಗೂ ಸಹ ಬಳಸಬಹುದು. ಇದರಿಂದ ವಿಡಿಯೋ ಕಾಲ್​ನಲ್ಲಿ ಬರುವ ಬೇಡವಾದ ಶಬ್ದ (ನಾಯಿಸ್) ಕಡಿಮೆ ಮಾಡಬಹುದು.

ಈ ಸೆಟ್ಟಿಂಗ್​ಗಳನ್ನು ಮಾಡಿಕೊಂಡ ಬಳಿಕ ಅಪ್ಲೈ ಮಾಡಿ, ಜೂಮ್ ಕಾಲ್​ಗೆ ಎಂಟರ್ ಕೊಡಿ. ಇದರಿಂದಾಗಿ ನಿಮ್ಮ ಕರೆಯಲ್ಲಿ ಜೊತೆಗಿರುವ ಇತರರಿಗೆ ನಿಮ್ಮ ಧ್ವನಿ ಸ್ಪಷ್ಟವಾಗಿ ಕೇಳಿಸುವಂತೆ ಆಗುತ್ತದೆ. ಈ ಅಪ್ಲಿಕೇಷನ್ ವಾರದಲ್ಲಿ 240 ನಿಮಿಷಗಳನ್ನು ಉಚಿತವಾಗಿ ನೀಡಲಿದೆ. ಹೆಚ್ಚಿನ ಸೌಲಭ್ಯಗಳು, ಅನ್​ಲಿಮಿಟೆಡ್ ಕರೆಗೆ ಈ ಅವಕಾಶ ಬೇಕು ಎಂದಾದರೆ ತಿಂಗಳಿಗೆ 5 ಡಾಲರ್​ಗೆ (361 ರೂಪಾಯಿ) ಲಭ್ಯವಾಗಲಿದೆ.

ಇದನ್ನೂ ಓದಿ: World No Tobacco Day 2021: ಸಿಗರೇಟ್ ಸೇವನೆ ಬಿಡಬೇಕು ಎಂದು ಯೋಚಿಸುತ್ತಿದ್ದೀರಾ? ಈ ಮಾರ್ಗಗಳನ್ನು ಅನುಸರಿಸಿ

ಮನೆಯಲ್ಲಿ ಕೆಲಸ, ಮನದಲ್ಲಿ ದುಗುಡ: ವರ್ಕ್​ ಫ್ರಮ್ ಹೋಮ್​ಗೆ ಒಂದು ವರ್ಷ

Published On - 10:55 pm, Sun, 30 May 21

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ