ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ. ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. […]

ಆನ್ ಲೈನ್ ವಂಚಕರಿಗೆ ವರವಾದ ಈರುಳ್ಳಿ, ಅಗ್ಗದ ಬೆಲೆಗೆ ಪೂರೈಕೆ ಅಂತಾ 3 ಲಕ್ಷದ ಉಂಡೆನಾಮ
Follow us
ಸಾಧು ಶ್ರೀನಾಥ್​
|

Updated on:Dec 16, 2019 | 11:40 AM

ಹಾಸನ: ಈರುಳ್ಳಿ ರೇಟ್ ಗಗನಕ್ಕೇರಿದೆ. ದಿನದಿಂದ ದಿನಕ್ಕೆ ಗಗನಕುಸುಮವಾಗ್ತಿದೆ. ಆನಿಯನ್​​​ಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್. ಚಿನ್ನ ಕೊಳ್ಳೋ ಬದ್ಲು ಈರುಳ್ಳಿ ಕೊಂಡ್ರೆ ಸಾಕಪ್ಪಾ ಅಂತಿದ್ದಾರೆ. ಆನಿಯನ್ ಹೆಸರಲ್ಲಿ ಆನ್​ಲೈನ್​​​ ವಂಚನೆ ಜಾಲ ಸದ್ದು ಮಾಡಿದೆ.

ಈರುಳ್ಳಿ ಹೆಸರಲ್ಲಿ ಕಾಲಿಟ್ಟಿದೆ ಆನ್​​ಲೈನ್​ ವಂಚನೆ ಜಾಲ! ಈರುಳ್ಳಿಗೆ ಬಂಗಾರದಂತ ರೇಟ್​ ಬಂತೋ ವಂಚನೆ ಜಾಲ ಜೋರಾಗ್ತಿದೆ. ವರ್ತಕರು ಕೂಡ ಎಲ್ಲಿ ಕಡಿಮೆ ರೇಟ್ ಸಿಗುತ್ತೆ ಅಂತ ಜಾಲಾಡ್ತಿದ್ದಾರೆ. ಇದೀಗ ಇವರನ್ನೇ ಟಾರ್ಗೆಟ್ ಮಾಡಿರೋ ಖದೀಮರು ಆನ್​ಲೈನ್​ಲ್ಲಿ ಲಕ್ಷ ಲಕ್ಷ ಮೋಸ ಮಾಡಿದ್ದಾರೆ. ಹಾಸನ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಈರುಳ್ಳಿ ವರ್ತಕ ಸೈಯದ್ ಮುದಾಸೀರ್​ಗೆ ದೂರವಾಣಿ ಕರೆ ಮಾಡಿದ್ದಾರಂತೆ.

ನಮ್ಮ ಬಳಿ ಲೋಡ್​ಗಟ್ಟಲೇ ಈರುಳ್ಳಿ ಸ್ಟಾಕ್ ಇದೆ. ಕಡಿಮೆ ರೇಟ್​​ಗೆ ಕೊಡ್ತೀವಿ ಅಡ್ವಾನ್ಸ್ ಹಣ ಖಾತೆಗೆ ಜಮೆ ಮಾಡಿ ಅಂತ ಪುಂಗಿದ್ದಾರೆ. ಇದನ್ನೇ ನಂಬಿದ ಸೈಯದ್ ಮದಾಸೀರ್ ಕರೆ ಮಾಡಿದ್ದ ಅನಾಮಧೇಯ ವ್ಯಕ್ತಿ ಖಾತೆಗೆ 3 ಲಕ್ಷದ 80 ಸಾವಿರ ರೂಪಾಯಿ ಜಮೆ ಮಾಡಿ ಮೋಸ ಹೋಗಿದ್ದಾರೆ. ಇದೀಗ ಹಾಸನ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣವೂ ಇಲ್ಲ, ಈರುಳ್ಳಿಯೂ ಇಲ್ಲದೇ ತಲೆ ಮೇಲೆ ಕೈ ಹೊದ್ದು ಕೂತಿದ್ದಾರೆ.

ಇನ್ನು, ಈರುಳ್ಳಿ ರೇಟ್ ಗಗನಕ್ಕೇರ್ತಿರೋದನ್ನೇ ಟಾರ್ಗೆಟ್ ಮಾಡ್ತಿರೋ ಖದೀಮರು ಆನ್​​ಲೈನ್ ವಂಚನೆಗಿಳಿದಿರೋದು ವರ್ತಕರ ನಿದ್ದೆಗೆಡಿಸಿದೆ. ಯಾರನ್ನ ನಂಬೋದು, ಯಾರನ್ನ ಬಿಡೋದು ಅನ್ನೋ ಭೀತಿ ಕೂಡ ವರ್ತಕರಿಗೆ ಎದುರಾಗಿದೆ.

ಒಟ್ನಲ್ಲಿ ಈರುಳ್ಳಿ ಬೆಲೆ ಏರಿದ್ದೇ ಏರಿದ್ದು, ಜನರು ಅಡುಗೆ ಮಾಡೋ ಹಾಗಿಲ್ಲ, ವರ್ತಕರು ವ್ಯಾಪಾರ ಮಾಡೋದು ಕಷ್ಟವಾಗ್ತಿದೆ. ಎಲ್ರೂ ಈರುಳ್ಳಿ ರೇಟ್ ಯಾವಾಗ ಇಳೀಯುತ್ತಪ್ಪಾ ಅನ್ನೋ ಹೊತ್ತಲ್ಲೇ ವಂಚನೆ ಜಾಲ ಹೆಜ್ಜೆ ಇಟ್ಟಿದೆ.

Published On - 11:39 am, Mon, 16 December 19

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ