ಎಂಪಿ ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ: ಮಾಜಿ ಶಾಸಕನ ವಿರುದ್ಧ ಎಫ್​ಐಆರ್​

|

Updated on: Oct 25, 2019 | 12:08 PM

ಮೈಸೂರು: ಮಾಜಿ ಸಚಿವ ದಿವಂಗತ ಎಂ.‌ಪಿ.ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮನೆಯ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಎಂ.‌ಪಿ.ಪ್ರಕಾಶ್ ಪುತ್ರಿ ಸುಮಾ ವಿಜಯ್ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮನೆ ವಿವಾದ ಸಂಬಂಧ ಇದು ಮೂರನೇ ಎಫ್​ಐಆರ್ ದಾಖಲಾಗಿದೆ. ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಹೆಚ್.ಪಿ.ಮಂಜುನಾಥ್ ಸ್ನೇಹಿತರಾಗಿದ್ದರು. ನನ್ನ ತಮ್ಮ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ […]

ಎಂಪಿ ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ: ಮಾಜಿ ಶಾಸಕನ ವಿರುದ್ಧ ಎಫ್​ಐಆರ್​
Follow us on

ಮೈಸೂರು: ಮಾಜಿ ಸಚಿವ ದಿವಂಗತ ಎಂ.‌ಪಿ.ಪ್ರಕಾಶ್ ಪುತ್ರಿಗೆ ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಮನೆಯ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆಂದು ಆರೋಪಿಸಿ ಎಂ.‌ಪಿ.ಪ್ರಕಾಶ್ ಪುತ್ರಿ ಸುಮಾ ವಿಜಯ್ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ. ಮನೆ ವಿವಾದ ಸಂಬಂಧ ಇದು ಮೂರನೇ ಎಫ್​ಐಆರ್ ದಾಖಲಾಗಿದೆ.

ನನ್ನ ತಮ್ಮ, ಮಾಜಿ ಶಾಸಕ ಎಂ.ಪಿ.ರವೀಂದ್ರ ಹಾಗೂ ಹೆಚ್.ಪಿ.ಮಂಜುನಾಥ್ ಸ್ನೇಹಿತರಾಗಿದ್ದರು. ನನ್ನ ತಮ್ಮ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಪೆಂಟ್ ಹೌಸ್ ಖರೀದಿಸಿದ್ದ. ಸ್ನೇಹಿತರಾಗಿದ್ದ ಕಾರಣಕ್ಕೆ ತಾತ್ಕಾಲಿಕವಾಗಿ ಉಳಿದುಕೊಳ್ಳಲು ಮಂಜುನಾಥ್‌ಗೆ ಬಿಟ್ಟುಕೊಟ್ಟಿದ್ದ. ಆದ್ರೆ, ಎಂ.ಪಿ.ರವೀಂದ್ರ ಮರಣಾನಂತರ ಮನೆಗೆ ಅತಿಕ್ರಮ ಪ್ರವೇಶ ಮಾಡಿದ್ದು, ಈಗ ಮನೆ ಖಾಲಿ ಮಾಡುತ್ತಿಲ್ಲ. ಮನೆಯ ಕೀ ಕೇಳಿದರೆ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಸುಮಾ ಆರೋಪಿಸಿದ್ದಾರೆ.

ಈಗಾಗಲೇ ಅತಿಕ್ರಮ ಪ್ರವೇಶ ಸಂಬಂಧ ದೂರು ದಾಖಲಾಗಿದ್ದು, ಇದೀಗ ಸುಮಾ ವಿಜಯ್ ಮತ್ತೊಂದು ದೂರು ದಾಖಲಿಸಿದ್ದಾಳೆ. ಅಲ್ಲದೆ, ಸುಮಾ ವಿರುದ್ಧವೂ ಮಾಜಿ ಶಾಸಕ ಹೆಚ್​.ಪಿ.ಮಂಜುನಾಥ್ ಪ್ರತಿ ದೂರು ದಾಖಲಿಸಿದ್ದಾರೆ.