ಕೆಎಸ್​ಆರ್​ಟಿಸಿ ಐಷಾರಾಮಿ ಬಸ್​ಗಳ ವೀಕೆಂಡ್​ ಪ್ರಯಾಣ ದರದಲ್ಲಿ ಇಳಿಕೆ

| Updated By: ಸಾಧು ಶ್ರೀನಾಥ್​

Updated on: Jan 09, 2021 | 3:26 PM

ಇಷ್ಟುದಿನ ಮಾಮೂಲಿ ದರಕ್ಕಿಂತ ವಾರಾಂತ್ಯದಲ್ಲಿ ಶೇ.10ರಷ್ಟು ಹೆಚ್ಚಿಸುತ್ತಿದ್ದ ಕೆಎಸ್​ಆರ್​ಟಿಸಿ ಈಗ ಕಡಿಮೆ ಮಾಡಲು ನಿರ್ಧರಿಸಿದೆ. ಕೊವಿಡ್​ ಹಿನ್ನೆಲೆಯಲ್ಲಿ ಐಷಾರಾಮಿ ಬಸ್​ಗಳಲ್ಲಿ ಓಡಾಟ ಮಾಡುವವರ ಸಂಖ್ಯೆ ಕಡಿಮೆಯಾದ ಕಾರಣ, ಪ್ರಯಾಣಿಕರನ್ನು ಸೆಳೆಯಲು ಈ ತಂತ್ರ ಅನುಸರಿಸುತ್ತಿದೆ.

ಕೆಎಸ್​ಆರ್​ಟಿಸಿ ಐಷಾರಾಮಿ ಬಸ್​ಗಳ ವೀಕೆಂಡ್​ ಪ್ರಯಾಣ ದರದಲ್ಲಿ ಇಳಿಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಇಷ್ಟು ದಿನ ವೀಕೆಂಡ್​ನಲ್ಲಿ ವೋಲ್ವೋ, ಸ್ಲೀಪರ್​, ಕ್ಲಬ್​ ಕ್ಲಾಸ್​ ಬಸ್​ಗಳ ಪ್ರಯಾಣ ದರ ಹೆಚ್ಚು ಮಾಡುತ್ತಿದ್ದ ಕೆಎಸ್​ಆರ್​ಟಿಸಿ ಇದೀಗ ದರದಲ್ಲಿ ಇಳಿಕೆ ಮಾಡಿದೆ. ವಾರದ ಅಂತ್ಯದಲ್ಲಿ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಿರುತ್ತಿದ್ದ ಕಾರಣ ಈ ಬಸ್​ಗಳ ಪ್ರಯಾಣ ದರ ಶುಕ್ರವಾರ ಮತ್ತು ಭಾನುವಾರ ಏರಿಕೆಯಾಗುತ್ತಿತ್ತು.

ಇನ್ಮೇಲೆ ವಾರಾಂತ್ಯ ದರ ಹೆಚ್ಚಿಗೆ ಇರೋಲ್ಲ
ಇಷ್ಟು ದಿನ ಮಾಮೂಲಿ ದರಕ್ಕಿಂತ ವಾರಾಂತ್ಯದಲ್ಲಿ ಶೇ.10ರಷ್ಟು ಹೆಚ್ಚಿಸುತ್ತಿದ್ದ ಕೆಎಸ್​ಆರ್​ಟಿಸಿ ಈಗ ಕಡಿಮೆ ಮಾಡಲು ನಿರ್ಧರಿಸಿದೆ. ಕೊವಿಡ್​ ಹಿನ್ನೆಲೆಯಲ್ಲಿ ಐಷಾರಾಮಿ ಬಸ್​ಗಳಲ್ಲಿ ಓಡಾಟ ಮಾಡುವವರ ಸಂಖ್ಯೆ ಕಡಿಮೆಯಾದ ಕಾರಣ, ಪ್ರಯಾಣಿಕರನ್ನು ಸೆಳೆಯಲು ಈ ತಂತ್ರ ಅನುಸರಿಸುತ್ತಿದೆ. ಮುಂದಿನ ಶುಕ್ರವಾರ (15-01-2021)ದಿಂದ ಜನವರಿ 31ರವರೆಗೂ ಇದೇ ನಿಯಮ ಅನ್ವಯ ಆಗಲಿದೆ. ವಾರದ ಎಲ್ಲ ದಿನದ ದರವೇ ವೀಕೆಂಡ್​ಗೂ ಅನ್ವಯ ಆಗಲಿದೆ.

ಮೋದಿ, ಯಡಿಯೂರಪ್ಪ ಕೈಗೊಂಡ ದಿಟ್ಟ ನಿರ್ಣಯಗಳಿಂದ ಕೊರೊನಾ ಹತೋಟಿಯಲ್ಲಿದೆ: ಸಚಿವ ಸುಧಾಕರ್​