ಮೈಸೂರು: ಕೊವಿಡ್ ಟೆಸ್ಟಿಂಗ್ ಕಡಿಮೆ ಮಾಡಿದ್ದು ಸೋಂಕು ಹರಡಲು ಕಾರಣವಾಯ್ತು. ಇದನ್ನು ನಾನು ಮುಕ್ತವಾಗಿ ಒಪ್ಪಿಕೊಳ್ಳುತ್ತೇನೆ. ನಾವು ಕೊವಿಡ್ ಟೆಸ್ಟ್ ಕಡಿಮೆ ಮಾಡಬಾರದಿತ್ತು. ನಮ್ಮ ಹಾಗೂ ಜನರ ನಿರ್ಲಕ್ಷ್ಯದಿಂದ ಇದು ನಡೆದಿದೆ. ಗ್ರಾಮಾಂತರ ಪ್ರದೇಶಗಳಲ್ಲೂ ಕೊರೊನಾ ಹರಡಿಬಿಟ್ಟಿದೆ. ಇದಕ್ಕೆ ಕೊವಿಡ್ ಮಿತ್ರ ಮೂಲಕ ಪರಿಹಾರ ಹುಡುಕಿದ್ದೇವೆ. ಪಂಚಸೂತ್ರ ಯೋಜನೆ ಮೂಲಕ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡಿದ್ದೇವೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಪಾಸಿಟಿವ್ ಬಂದ ಮೇಲೆ ಕಡ್ಡಾಯವಾಗಿ ಕೋವಿಡ್ ಸೆಂಟರ್‌ಗೆ ಬರಬೇಕು. ಬರದೆ ಇದ್ದರೆ ಬಲವಂತವಾಗಿಯಾದರೂ ಸರಿ ಕೊವಿಡ್ ಕೇರ್ ಸೆಂಟರ್‌ಗೆ ಕರೆದುತರಬೇಕಾಗುತ್ತದೆ. ಹೋಂ ಐಸೋಲೇಷನ್ ಅನ್ನ ಕಡ್ಡಾಯವಾಗಿ ರದ್ದು ಮಾಡ್ತಿವಿ. ಯಾರೇ ಆಗಲಿ ಆಸ್ಪತ್ರೆ ಅಥವ ಕೋವಿಡ್ ಸೆಂಟರ್ ಬರಬೇಕು. ಬರಬೇಕಾಗುತ್ತದೆ. ಇನ್ನು ಮೇಲೆ ಯಾರು ಸಬೂಬು ಹೇಳುವಂತಿಲ್ಲ ಎಂದು ಅವರು ತಿಳಿಸಿದರು.ಮೈಸೂರಿನಲ್ಲಿ ಪ್ರತಾಪ್‌ಸಿಂಹ ಹೇಳಿಕೆ.
ಇದನ್ನೂ ಓದಿ: ಕೊವಿಡ್ನಿಂದ ಮೃತಪಟ್ಟ ಶಿಕ್ಷಕರ ಕುಟುಂಬಸ್ಥರಿಗೆ ಸರ್ಕಾರಿ ನೌಕರಿ; ನೇಮಕಾತಿ ಪತ್ರ ನೀಡಿದ ಸಚಿವ ಸುರೇಶ್ ಕುಮಾರ್
(Decreased of Covid testing has caused the spread of infection say MP Pratap Simha
Published On - 3:40 pm, Thu, 27 May 21