AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಕ್ಷಿಣ ಕನ್ನಡ- ಉಡುಪಿ ಜನರಿಗೆ ಸಿಹಿ ಸುದ್ದಿ: ಇನ್ನು ಮುಂದೆ ರೇಶನ್​ ಮೂಲಕ ಕೆಂಪು ಕುಚ್ಚಲಕ್ಕಿ ಪೂರೈಕೆ – ಉಸ್ತುವಾರಿ ಸಚಿವ ಪೂಜಾರಿ

Red parboiled rice supply: ಕರಾವಳಿ ಜಿಲ್ಲೆಯ ಕೆಂಪು ಕುಚಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು. MO4, ಜ್ಯೋತಿ, ಅಭಿಲಾಶ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಬೇಕಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

ದಕ್ಷಿಣ ಕನ್ನಡ- ಉಡುಪಿ ಜನರಿಗೆ ಸಿಹಿ ಸುದ್ದಿ: ಇನ್ನು ಮುಂದೆ ರೇಶನ್​ ಮೂಲಕ ಕೆಂಪು ಕುಚ್ಚಲಕ್ಕಿ ಪೂರೈಕೆ - ಉಸ್ತುವಾರಿ ಸಚಿವ ಪೂಜಾರಿ
ದಕ್ಷಿಣ ಕನ್ನಡ- ಉಡುಪಿ ಜಿಲ್ಲೆ ಜನರಿಗೆ ಸಿಹಿ ಸುದ್ದಿ: ಇನ್ನು ಮುಂದೆ ರೇಶನ್​ ಮೂಲಕ ಕೆಂಪು ಕುಚ್ಚಲಕ್ಕಿ ಪೂರೈಕೆ - ಉಸ್ತುವಾರಿ ಸಚಿವ ಪೂಜಾರಿ
ಸಾಧು ಶ್ರೀನಾಥ್​
|

Updated on:May 27, 2021 | 4:31 PM

Share

ಬೆಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆ ಕಾರ್ಡ್​​ನಲ್ಲಿ ಸಾಮಾನ್ಯ ಅಕ್ಕಿಯ ಬದಲು ಸಾಂಪ್ರದಾಯಿಕ ಕುಚ್ಚಲಕ್ಕಿ ಸರಬರಾಜಿಗೆ ಬೇಡಿಕೆ ಇರುವ ಬಗ್ಗೆ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಪೂಜಾರಿ ಅವರು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಂಬಂಧ ಇಂದು ಆಹಾರ ಸಚಿವ ಉಮೇಶ್ ವಿ. ಕತ್ತಿ ಜತೆ ಸಭೆ ನಡೆಸಿದ್ದೇವೆ. ನವೆಂಬರ್ ತಿಂಗಳಿಂದ ಕೆಂಪು ಕುಚ್ಚಲಕ್ಕಿ ಪೂರೈಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಬಹಳ ದಿನಗಳಿಂದಲೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜನರು ಕುಚ್ಚುಲಕ್ಕಿಗಾಗಿ ಬೇಡಿಕೆ ಇಟ್ಟಿದ್ದಾರೆ. ಪಡಿತರದಲ್ಲಿ ನೀಡುವ ಸಾಮಾನ್ಯ ಅಕ್ಕಿಯಲ್ಲಿ ಇಲ್ಲಿಯ ಜನ ಊಟ ಮಾಡಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ತಯಾರಾಗುವ ಕೆಂಪು ಕುಚ್ಚುಲಕ್ಕಿ ಬೇಕು ಅಂತ ಬೇಡಿಕೆ ಇಟ್ಟಿದ್ದರು. ಅನೇಕರು ರೇಷನ್ ಪಡೆಯದೇ, ಸಾಮಾನ್ಯ ಅಕ್ಕಿ ಮಾರಾಟದ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ ಇಂದು ಆಹಾರ ಸಚಿವರ ಜೊತೆಗೆ ಸಭೆ ಮಾಡಲಾಗಿದೆ. ನವೆಂಬರ್ ತಿಂಗಳಿಂದ ಕೆಂಪು ಕುಚುಲಕ್ಕಿ ಪೂರೈಸೋ ನಿರ್ಣಯ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಕರಾವಳಿ ಜಿಲ್ಲೆಯ ಕೆಂಪು ಕುಚಲಕ್ಕಿ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುವುದು. MO4, ಜ್ಯೋತಿ, ಅಭಿಲಾಶ, ಜಯ ತಳಿಯ ಅಕ್ಕಿ ಪಡೆಯಲು ಕೇಂದ್ರ ಸರ್ಕಾರದಿಂದ ಅನುಮತಿ ಬೇಕಿದೆ. ಮುಂದಿನ ದಿನಗಳಲ್ಲಿ ಪೂರೈಕೆ ಮಾಡುವ ಕೆಲಸ ಮಾಡುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟಪಡಿಸಿದರು.

(Traditional Kuchalakki or Red parboiled rice to be supplied through ration cards says kota srinivasa pujari)

ಅಕ್ಕಿ ತೊಳೆದ ನೀರಿನಿಂದ ನುಣುಪಾದ ಸದೃಢ ತಲೆಕೂದಲು; ಮನೆಮದ್ದಿನಲ್ಲೇ ಇದೆ ಸಮಸ್ಯೆಗೆ ಪರಿಹಾರ

Published On - 4:30 pm, Thu, 27 May 21