AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ನಗರದ ಸವಾರ್ ಲೈನ್ ರಸ್ತೆಯ ನಿವಾಸಿ ಸೀನಾ ಎಂಬುವವರು ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ. ಮೃತ ಸೀನಾ ತನ್ನ ಅಕ್ಕನ ಮಗಳಾದ ಅಶ್ವಿನಿಯನ್ನೇ ವಿವಾಹವಾಗಿದ್ದರು. ವಿವಾಹವಾದರೂ ಅಶ್ವಿನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಹಾಗಾಗಿಯೇ ಸೀನಾ, ಒಳ್ಳೆಯ ತರಬೇತಿ ಕೇಂದ್ರವೊಂದರಲ್ಲಿ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.

ಶಿವಮೊಗ್ಗದಲ್ಲಿ ಮನಕಲಕುವ ಘಟನೆ: ಹೆಂಡತಿಯನ್ನು ಕೆಎಎಸ್ ಓದಿಸಿ, ತಹಸೀಲ್ದಾರ್ ಮಾಡಿಸಿದ್ದ ಪತಿ ಕೊರೊನಾಗೆ ಬಲಿ
ತಹಶೀಲ್ದಾರ್ ಪತ್ನಿ ಅಶ್ವಿನಿ, ಕೊರೊನಾಗೆ ಬಲಿಯಾದ ಪತಿ ಸೀನ,
ಸಾಧು ಶ್ರೀನಾಥ್​
|

Updated on:May 27, 2021 | 5:27 PM

Share

ಶಿವಮೊಗ್ಗ: ಕೈಹಿಡಿದ ಪತಿರಾಯ ತನ್ನ ಪತ್ನಿಯನ್ನು ಚೆನ್ನಾಗಿ ಓದಿಸಿ, ತಹಶೀಲ್ದಾರ್ ಅಧಿಕಾರಿಯನ್ನಾಗಿ ಮಾಡಿಸಿದ್ದರು. ಆದರೆ ಅದು ಕೊರೊನಾ ಮಾರಿಗೆ ಹೇಗೆ ಗೊತ್ತಾಗಬೇಕು… ಯಾವುದೋ ಮಾಯದಲ್ಲಿ ಬಂದು ಪತಿರಾಯನನ್ನು ಬಲಿ ತೆಗೆದುಕೊಂಡಿದೆ. ಸುಂದರ ಸಂಸಾರದಕ್ಕೆ ಕೊಳ್ಳಿಯಿಟ್ಟಿದೆ ದೆವ್ವ ಕೊರೊನಾ! ಕಳೆದ ಒಂದು ವಾರದಿಂದ ಕೊರೊನಾದಿಂದಾಗಿ ಪತಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಪತ್ನಿ ಬೆಂಗಳೂರಿನಲ್ಲಿ ತಹಸೀಲ್ದಾರ್ ಆಗಿ ಆರು ತಿಂಗಳಿನಿಂದ ಸೇವೆ ಸಲ್ಲಿಸುತ್ತಿದ್ದರು.

ಆತ ತಾನಂತೂ ಓದಿಲ್ಲ. ತನ್ನ ಹೆಂಡಿಯಾದರೂ ಓದಿ ಅಧಿಕಾರಿಯಾಗಲಿ ಎಂದು ಕನಸು ಕಂಡಿದ್ದ. ಆತನ ಆಸೆಯಂತೆ ಹೆಂಡತಿಯನ್ನು ಕೆಎಎಸ್ ಅಧಿಕಾರಿಯನ್ನಾಗಿ ಮಾಡಿದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು. ತಾನು ಕಂಡಿದ್ದ ಕನಸು ನನಸಾದ ಖುಷಿಯಲ್ಲಿ ಬದುಕಿನ ಪಯಣ ನಡೆಸಬೇಕಿದ್ದ ವ್ಯಕ್ತಿ ಕೊರೋನಾಗೆ ಬಲಿಯಾಗಿದ್ದಾರೆ.

ಹೌದು ಶಿವಮೊಗ್ಗದಲ್ಲಿ ಇಂತಹ ಒಂದು ಮನಕಲಕುವ ಘಟನೆ ನಡೆದಿದೆ. ಶಿವಮೊಗ್ಗದ ಸವಾರ್ ಲೈನ್ ರಸ್ತೆಯ ನಿವಾಸಿ ಸೀನಾ ಎಂಬುವವರು ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿ. ಮೃತ ಸೀನಾ ತನ್ನ ಅಕ್ಕನ ಮಗಳಾದ ಅಶ್ವಿನಿಯನ್ನೇ ವಿವಾಹವಾಗಿದ್ದರು. ವಿವಾಹವಾದರೂ ಅಶ್ವಿನಿಗೆ ಓದಿನ ತುಡಿತ ಕಡಿಮೆ ಆಗಿರಲಿಲ್ಲ. ಹಾಗಾಗಿಯೇ ಸೀನಾ, ಒಳ್ಳೆಯ ತರಬೇತಿ ಕೇಂದ್ರವೊಂದರಲ್ಲಿ ಪತ್ನಿಗೆ ಕೆಎಎಸ್ ಪೂರ್ವಭಾವಿ ತರಬೇತಿ ಕೊಡಿಸಿದ್ದರು.

ಸೀನಾ ಆಸೆಯಂತೆ ಪತ್ನಿ‌ ಅಶ್ವಿನಿ‌ ಕಳೆದ ವರ್ಷ ಕೆಎಎಸ್ ಪಾಸ್ ಮಾಡಿದ್ದರು. ಕಳೆದ 6 ತಿಂಗಳಿನಿಂದ ಬೆಂಗಳೂರಿನಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ತನ್ನ ಆಸೆಯನ್ನು ಈಡೇರಿಸಿದ ಪತ್ನಿಯ ಜೊತೆ ಸುಖವಾಗಿ ಜೀವನ ಸಾಗಿಸಬೇಕು ಎಂದುಕೊಂಡಿದ್ದರು. ಆದರೆ ಕೊರೋನಾ ಬರಸಿಡಿಲಿನಂತೆ ಅಪ್ಪಳಿಸಿ ಆತನನ್ನೇ ಬಲಿ ತೆಗೆದುಕೊಂಡಿದೆ.

(husband of tahsildar died due to coronavirus in shivamogga)

ಕೊರೊನಾದಿಂದ ಅಪ್ಪ-ಅಮ್ಮನನ್ನ ಕಳೆದುಕೊಂಡೆ, ಮೆಡಿಕಲ್ ಓದುತ್ತಿರುವೆ.. ಯಾರಾದರೂ ನನ್ನ ಶಿಕ್ಷಣಕ್ಕೆ ನೆರವಾಗಿ: ​ಯುವತಿ ಮೊರೆ

Published On - 5:24 pm, Thu, 27 May 21

Follow Us
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
RCB ವಿರುದ್ಧ ಹೀರೋ SRH ವಿರುದ್ಧ ಝೀರೋ!
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಮೋದಿ ಬಗ್ಗೆ ಮಾತಾಡಿದ್ದ ಖರ್ಗೆಗೆ ಟಾಂಗ್​​ ಕೊಟ್ಟ ಉಪರಾಷ್ಟ್ರಪತಿ
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಹೆಂಡ್ತಿ ರೆಡ್​ ಹ್ಯಾಂಡ್ ಸಿಕ್ಕಿಬಿದ್ದಾಗ ಬುದ್ದಿ ಹೇಳಿದ್ದೆ: ಪತಿ ಕಣ್ಣೀರು!
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಮಾಳು ಊರಲ್ಲಿ ಬೈಕ್​ ಅಲ್ಲಿ ಲಾಂಗ್ ಡ್ರೈವ್ ಹೋದ ರಕ್ಷಿತಾ ಶೆಟ್ಟಿ
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!
ಜೀವಜಲಕ್ಕಾಗಿ 2 ಕಿ.ಮೀ ನಡೆದುಕೊಂಡು ಹೋಗ್ಬೇಕು! ನರಲಗುಡ್ಡ ನಿವಾಸಿಗಳ ಪರದಾಟ!