AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಕಿ ತೊಳೆದ ನೀರಿನಿಂದ ನುಣುಪಾದ ಸದೃಢ ತಲೆಕೂದಲು; ಮನೆಮದ್ದಿನಲ್ಲೇ ಇದೆ ಸಮಸ್ಯೆಗೆ ಪರಿಹಾರ

ನೈಸರ್ಗಿಕವಾಗಿ ಸಿಗುವ ಅದೆಷ್ಟೋ ಪದಾರ್ಥಗಳಿಂದ ಕೂದಲು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು. ನುಣುಪಾದ ಸದೃಢ ತಲೆಕೂದಲನ್ನು ಪಡೆಯಬಹುದು.

ಅಕ್ಕಿ ತೊಳೆದ ನೀರಿನಿಂದ ನುಣುಪಾದ ಸದೃಢ ತಲೆಕೂದಲು; ಮನೆಮದ್ದಿನಲ್ಲೇ ಇದೆ ಸಮಸ್ಯೆಗೆ ಪರಿಹಾರ
ಸಂಗ್ರಹ ಚಿತ್ರ
shruti hegde
|

Updated on:May 10, 2021 | 5:18 PM

Share

ನೆನೆಸಿಟ್ಟ ಅಕ್ಕಿ ನೀರನ್ನು ನೈಸರ್ಗಿಕ ಔಷಧವಾಗಿ ಚರ್ಮದ ಸಮಸ್ಯೆಗೆ ಮತ್ತು ಕೂದಲು ಉದುರುವ ಸಮಸ್ಯೆಗೆ ಪರಿಹಾರವಾಗಿ ಬಳಸಲಾಗುತ್ತದೆ. ಇದಕ್ಕಾಗಿಯೇ ಅಕ್ಕಿ ತೊಳೆದ ನೀರು ದಶಕಗಳಿಂದ ಜನಪ್ರಿಯತೆಯನ್ನು ಪಡೆದುಕೊಂಡಿದೆ. ವಿಶೇಷವಾಗಿ ಜಪಾನ್​ ಮತ್ತು ದಕ್ಷಿಣ ಕೊರಿಯಾದಂತಹ ದೇಶಗಳಲ್ಲಿ ಚರ್ಮದ ರಕ್ಷಣೆ ಮತ್ತು ಕೂದಲು ರಕ್ಷಣೆ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಜನರು ಅಕ್ಕಿ ತೊಳೆದ ನೀರನ್ನು ಬಳಸುತ್ತಾರೆ.

ಸುಮಾರು 24 ಗಂಟೆಗಳ ಕಾಲ ಅಕ್ಕಿಯನ್ನು ನೀರಿನಲ್ಲಿ ನೆನೆಸಿಡಬೇಕು. ಅಕ್ಕಿ ನೀರು ಹುಳಿಬರಿಸುವುದು ಎಂದೂ ಇದನ್ನು ಕರೆಯಲಾಗುತ್ತದೆ. ಇದನ್ನು ತಲೆ ಕೂದಲಿಗೆ ಹಚ್ಚಿಕೊಳ್ಳುವ ಮೂಲಕ ಹಾನಿಗೊಳಗಾದ ಕೂದಲು ಸದೃಢವಾಗಲು ಸಹಾಯವಾಗುತ್ತದೆ. ಇದರಿಂದ ನುಣುಪಾದ, ಹೊಳೆಯುವ ಕೂದಲು ನಿಮ್ಮದಾಗುತ್ತದೆ. 24 ಗಂಟೆಗಳ ಕಾಲ ನೀರಿನಲ್ಲಿ ಅಕ್ಕಿಯನ್ನು ನೆನೆ ಹಾಕಿದಾಗ, ಅಕ್ಕಿಯಲ್ಲಿನ ಪೌಷ್ಠಿಕ ಗುಣಗಳು ನೀರಿನಲ್ಲಿ ಬಿಡುತ್ತವೆ. ನಂತರ ನಿಧಾನವಾಗಿ ಅಕ್ಕಿಯನ್ನು ನೀರಿನಿಂದ ಬೇರ್ಪಡಿಸಿ ನೀರನ್ನು ತಲೆಗೆ ಹಚ್ಚಿಕೊಳ್ಳಬೇಕು.

ನೆನೆಸಿಟ್ಟ ಅಕ್ಕಿಯ ನೀರಿನಲ್ಲಿ ಜೀವಸತ್ವಗಳಿರುತ್ತದೆ. ವಿಟಮಿನ್​ ಬಿ ಮತ್ತು ವಿಟಮಿನ್ ಇ ಕಂಡು ಬರುತ್ತದೆ. ಇದು ಚರ್ಮಕ್ಕೆ ಮತ್ತು ಹಾನಿಗೊಳಗಾದ ಕೂದಲನ್ನು ಸದೃಢಗೊಳಿಸಲು ನೆರವಾಗುತ್ತದೆ. ಬಲವಾದ ಮತ್ತು ದಟ್ಟವಾದ ಕೂದಲು ಪಡೆಯಲು ಇದನ್ನು ಚಿಕಿತ್ಸೆಯ ರೂಪದಲ್ಲಿಯೂ ಬಳಸಲಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಕಾಯಿಲೆಗಳನ್ನೂ ಕೂಡಾ ಅಕ್ಕಿ ತೊಳೆದ ನೀರಿನ ಮೂಲಕ ಹೋಗಲಾಡಿಸಬಹುದಾಗಿದೆ. ನೈಸರ್ಗಿಕವಾಗಿ ಸಿಗುವ ಅದೆಷ್ಟೋ ಪದಾರ್ಥಗಳಿಂದ ಕೂದಲು ಸಮಸ್ಯೆಗಳಿಗೆ ಪರಿಹಾರ ಪಡೆದುಕೊಳ್ಳಬಹುದು.

ಇದನ್ನೂ ಓದಿ: Viral Video: ಬ್ಯಾಗ್​​ನಲ್ಲಿದ್ದ ಮೊಬೈಲ್​​ನಲ್ಲಿ ಬೆಂಕಿ; ಕೈ, ತಲೆಕೂದಲು ಸುಟ್ಟುಕೊಂಡ ಯುವಕ

Published On - 5:17 pm, Mon, 10 May 21