Viral Video: ಬ್ಯಾಗ್ನಲ್ಲಿದ್ದ ಮೊಬೈಲ್ನಲ್ಲಿ ಬೆಂಕಿ; ಕೈ, ತಲೆಕೂದಲು ಸುಟ್ಟುಕೊಂಡ ಯುವಕ
ಚಾರ್ಜ್ಗೆ ಹಾಕಿದ್ದ ಮೊಬೈಲ್ ಸ್ಫೋಟವಾಗಿದ್ದನ್ನು, ಮೊಬೈಲ್ ಸ್ಫೋಟದಿಂದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದನ್ನು ಕೇಳಿದ್ದೇವೆ. ಆದರೆ ಈಗ ಮೊಬೈಲ್ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.. ಅಬ್ಬಾ.. ! ಇದು ನಿಜಕ್ಕೂ ಭಯಾನಕ ಎಂದಿದ್ದಾರೆ. ಯುವಕ ಹಾಗೂ ಯುವತಿ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಯುವಕನ ಎಡಭುಜದಲ್ಲಿ ಬ್ಯಾಗ್ ಇರುತ್ತದೆ. ಅದರಲ್ಲಿ ಇರುವ ಮೊಬೈಲ್ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಬ್ಯಾಗ್ ಹೊತ್ತಿ ಉರಿಯಲು ಪ್ರಾರಂಭಿಸಿದೆ. ಈ ಘಟನೆ ನಡೆದಿದ್ದು ಚೀನಾದಲ್ಲಿ ಎಂದು ಹೇಳಲಾಗಿದ್ದು, ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ […]
ಚಾರ್ಜ್ಗೆ ಹಾಕಿದ್ದ ಮೊಬೈಲ್ ಸ್ಫೋಟವಾಗಿದ್ದನ್ನು, ಮೊಬೈಲ್ ಸ್ಫೋಟದಿಂದ ಕೆಲವರು ಗಂಭೀರವಾಗಿ ಗಾಯಗೊಂಡಿದ್ದನ್ನು ಕೇಳಿದ್ದೇವೆ. ಆದರೆ ಈಗ ಮೊಬೈಲ್ಗೆ ಬೆಂಕಿ ಹೊತ್ತಿಕೊಂಡ ವಿಡಿಯೋವೊಂದು ವೈರಲ್ ಆಗಿದ್ದು, ನೆಟ್ಟಿಗರು ಹುಬ್ಬೇರಿಸಿದ್ದಾರೆ.. ಅಬ್ಬಾ.. ! ಇದು ನಿಜಕ್ಕೂ ಭಯಾನಕ ಎಂದಿದ್ದಾರೆ.
ಯುವಕ ಹಾಗೂ ಯುವತಿ ರಸ್ತೆಯಲ್ಲಿ ಹೋಗುತ್ತಿರುತ್ತಾರೆ. ಯುವಕನ ಎಡಭುಜದಲ್ಲಿ ಬ್ಯಾಗ್ ಇರುತ್ತದೆ. ಅದರಲ್ಲಿ ಇರುವ ಮೊಬೈಲ್ನಲ್ಲಿ ಒಮ್ಮೆಲೇ ಬೆಂಕಿ ಕಾಣಿಸಿಕೊಂಡು, ಬ್ಯಾಗ್ ಹೊತ್ತಿ ಉರಿಯಲು ಪ್ರಾರಂಭಿಸಿದೆ. ಈ ಘಟನೆ ನಡೆದಿದ್ದು ಚೀನಾದಲ್ಲಿ ಎಂದು ಹೇಳಲಾಗಿದ್ದು, ದಕ್ಷಿಣ ಚೀನಾ ಮಾರ್ನಿಂಗ್ ಪೋಸ್ಟ್ ಮಾಧ್ಯಮ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ವಿಡಿಯೋ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಆ ಯುವಕ ಬ್ಯಾಗ್ನ್ನು ಕೆಳಗೆ ಬಿಸಾಕಿದ್ದಾರೆ. ಆದರೂ ಅವರ ಕೈ ಸುಟ್ಟಿದ್ದು, ತಲೆ ಕೂದಲೂ ಸಹ ಸುಟ್ಟಿದೆ.
ಇದು ಸ್ಯಾಮ್ಸಂಗ್ ಫೋನ್ ಆಗಿದ್ದು, ಯುವಕ 2016ರಲ್ಲಿ ಖರೀದಿ ಮಾಡಿದ್ದ ಎಂದು ತಿಳಿದುಬಂದಿದೆ. ಇನ್ನು ಕಳೆದ ಹಲವಾರು ದಿನಗಳಿಂದಲೂ ಮೊಬೈಲ್ನ ಬ್ಯಾಟರಿಯಲ್ಲಿ ಸಮಸ್ಯೆ ಆಗುತ್ತಿತ್ತು ಎಂದು ಯುವಕ ಹೇಳಿಕೊಂಡಿದ್ದಾನೆ. ಅದೇನೇ ಇರಲಿ, ವಿಡಿಯೋ ನೋಡಿದ ನೆಟ್ಟಿಗರು, ತಮಗೆ ತುಂಬ ಶಾಕ್ ಆಗಿದ್ದಾಗಿ ಹೇಳಿಕೊಂಡಿದ್ದಾರೆ. ಮೊಬೈಲ್ ಎಷ್ಟೇ ಅನಿವಾರ್ಯತೆ ಇದ್ದರೂ, ಅದರ ಬಗ್ಗೆ ತುಂಬ ಎಚ್ಚರಿಕೆಯಿಂದ ಇರಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
This is the shocking moment a phone catches fire inside a man’s bag in China. pic.twitter.com/4C5zz8Ov6t
— SCMP News (@SCMPNews) April 20, 2021
ಇದನ್ನೂ ಓದಿ: ನೈಟ್ ಕರ್ಫ್ಯೂ ಉಲ್ಲಂಘಿಸುವ ವಾಹನಗಳ ಜಪ್ತಿಗೆ ಆದೇಶಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಇನ್ನೂ ಏನು ಹೇಳಿದರು?
ಮೈಸೂರು ವೈದ್ಯಕೀಯ ಸಂಶೋಧನಾಲಯದ ಡೀನ್ಗೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಕ್ಲಾಸ್
ಗಾಳಿ, ಮಳೆಯಿಂದ ಬೀದಿಗೆ ಬಿದ್ದ ಹಾವೇರಿ ಜನರ ಬದುಕು; ಶಾಶ್ವತ ಸೂರಿಗೆ ಸ್ಥಳೀಯರ ಆಗ್ರಹ
Published On - 2:09 pm, Thu, 22 April 21