ಜಿಂಕೆ ಕಾಟಕ್ಕೆ ಅನ್ನದಾತರ ಪರದಾಟ; ಬೀದರ್ ರೈತರು ಹೈರಾಣು

| Updated By: sandhya thejappa

Updated on: Jul 10, 2021 | 9:26 AM

ಹಿಂಡು ಹಿಂಡಾಗಿ ಹೊಲಕ್ಕೆ ನುಗ್ಗುವ ಜಿಂಕೆಗಳು ಬೆಳೆಯನ್ನು ತಿಂದು ಹಾನಿ ಮಾಡುತ್ತಿವೆ. ಗೆಣುದ್ದ ಬೆಳೆದ ಉದ್ದು ಮತ್ತು ಸೋಯಾವನ್ನು ಕಾಡು ಪ್ರಾಣಿಗಳು ತಿನ್ನುತ್ತಿವೆ. ಈ ವರ್ಷ ಸಕಾಲಕ್ಕೆ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದಿದೆ.

ಜಿಂಕೆ ಕಾಟಕ್ಕೆ ಅನ್ನದಾತರ ಪರದಾಟ; ಬೀದರ್ ರೈತರು ಹೈರಾಣು
ಬೆಳೆಯನ್ನು ತಿನ್ನುತ್ತಿರುವ ಜಿಂಕೆ ಹಿಂಡು
Follow us on

ಬೀದರ್: ಕೊರೊನಾದಿಂದಾಗಿ ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಲಿಲ್ಲ. ಲಾಕ್​ಡೌನ್​ ಜಾರಿಯಿದ್ದ ಕಾರಣ ನಿರೀಕ್ಷೆಗೆ ತಕ್ಕಂತೆ ವ್ಯಾಪಾರ ಆಗಲಿಲ್ಲ. ಇದರಿಂದ ಅನಿವಾರ್ಯವಾಗಿ ರೈತನೇ ತಾನು ಬೆಳೆದ ಬೆಳೆಯನ್ನು ನಾಶಮಾಡುವ ಪರಿಸ್ಥಿತಿ ಎದುರಾಗಿತ್ತು. ಈ ನಡುವೆ ಕಾಡು ಪ್ರಾಣಿಗಳ ಕಾಟ ರೈತರಿಗೆ ದೊಡ್ಡ ತಲೆನೋವಾಗಿದೆ. ಜಿಂಕೆ ಕಾಟಕ್ಕೆ ಬೀದರ್ ಜಿಲ್ಲೆಯ ರೈತರು ಬೆಚ್ಚಿಬಿದ್ದಿದ್ದಾರೆ. ಬೆಳೆದ ಬೆಳೆಯನ್ನು ಉಳಿಸಿಕೊಳ್ಳಲು ಪರದಾಡುತ್ತಿದ್ದು, ಜಿಲ್ಲೆಯ ಕಮಲನಗರ-ಔರಾದ್ ತಾಲೂಕಿನ ರೈತರು ಹೈರಾಣಾಗಿದ್ದಾರೆ.

ಹಿಂಡು ಹಿಂಡಾಗಿ ಹೊಲಕ್ಕೆ ನುಗ್ಗುವ ಜಿಂಕೆಗಳು ಬೆಳೆಯನ್ನು ತಿಂದು ಹಾನಿ ಮಾಡುತ್ತಿವೆ. ಗೆಣುದ್ದ ಬೆಳೆದ ಉದ್ದು ಮತ್ತು ಸೋಯಾವನ್ನು ಕಾಡು ಪ್ರಾಣಿಗಳು ತಿನ್ನುತ್ತಿವೆ. ಈ ವರ್ಷ ಸಕಾಲಕ್ಕೆ ಉತ್ತಮ ಮಳೆಯಾಗಿ ಬೆಳೆ ಚೆನ್ನಾಗಿ ಬಂದಿದೆ. ಆದರೆ ಜಿಂಕೆಗಳು ಬೆಳೆಯನ್ನು ತಿಂದು ಹಾಳು ಮಾಡುತ್ತಿವೆ. ಸಾಲಾ ಸೋಲ ಮಾಡಿ ಬಿತ್ತಿದ ಬೆಳೆಯನ್ನ ಮೊಳಕೆಯಲ್ಲಿಯೇ ಜಿಂಕೆಗಳು ತಿನ್ನುತ್ತಿವೆ.

ಕಳೆದ ಎರಡು ವರ್ಷದಿಂದ ಜಿಲ್ಲೆಯಲ್ಲಿ ಜಿಂಕೆಗಳ ಸಂಖ್ಯೆ ದುಪ್ಪಟ್ಟಾಗಿದ್ದು, ಜಿಂಕೆಗಳಿಂದ ಬೆಳೆಯನ್ನು ರಕ್ಷಿಸಿ ಎಂದು ಅರಣ್ಯ ಇಲಾಖೆಗೆ ರೈತರು ಅಲೆದು ಅಲೆದು ಸುಸ್ತಾಗಿದ್ದಾರೆ. ಒಂದೊಂದು ಗುಂಪಿನಲ್ಲಿ ನೂರರಿಂದ ಇನ್ನೂರರ ಸಂಖ್ಯೆಯಲ್ಲಿ ಜಿಂಕೆ ಹಿಂಡು ಬಂದು ಬೆಳೆಯನ್ನು ತಿನ್ನುತ್ತಿವೆ. ಒಂದು ಸಲ ರೈತನ ಹೊಲಕ್ಕೆ ಜಿಂಕೆ ಹಿಂಡು ನುಗ್ಗಿದರೆ ಒಂದು ಎಕರೆಯಷ್ಟು ಬೆಳೆ ಹಾನಿಯಾಗುತ್ತದೆ. ಒಂದೆರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ರೈತರಿಗೆ ಇದರಿಂದ ಭಾರೀ ನಷ್ಟವಾಗುತ್ತದೆ.

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಜೀತ, ಬಾಲಕಾರ್ಮಿಕ ಪದ್ಧತಿ ಜೀವಂತ ಆರೋಪ; ದಾಳಿ ವೇಳೆ ಸುಮಾರು 10 ಮಕ್ಕಳ ರಕ್ಷಣೆ

Karnataka Dams: ಮುಂಗಾರು ಮಳೆ ಮತ್ತೆ ಅಬ್ಬರಿಸತೊಡಗಿದೆ; ರಾಜ್ಯದ 12 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹೀಗಿದೆ

(Deer are destroying crops in bidar)