Karnataka Dams: ರಾಜ್ಯದಲ್ಲಿ ಮುಂಗಾರು ಒಂಚೂರು ಕ್ಷೀಣ: ಆಗಸ್ಟ್-ಸೆಪ್ಟೆಂಬರ್​ಗೆ ರಾಜ್ಯದ 12 ಪ್ರಮುಖ ಜಲಾಶಯ ತುಂಬಿತುಳುಕಲಿವೆ

|

Updated on: Jul 06, 2021 | 10:59 AM

Karnataka Reservoirs water level: ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಾರಿಯೂ ಮಳೆ ಚೆನ್ನಾಗಿ ಆದರೆ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಜಲಾಶಯಗಳು ತುಂಬಿತುಳುಕಲಿವೆ. ಆದರೆ ಸದ್ಯಕ್ಕೆ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಯಾವುದೇ ಬಾಧಕವಿಲ್ಲ.

Karnataka Dams: ರಾಜ್ಯದಲ್ಲಿ ಮುಂಗಾರು ಒಂಚೂರು ಕ್ಷೀಣ: ಆಗಸ್ಟ್-ಸೆಪ್ಟೆಂಬರ್​ಗೆ ರಾಜ್ಯದ 12 ಪ್ರಮುಖ ಜಲಾಶಯ ತುಂಬಿತುಳುಕಲಿವೆ
ರಾಜ್ಯದಲ್ಲಿ ಮುಂಗಾರು ಒಂಚೂರು ಕ್ಷೀಣ: ಆಗಸ್ಟ್-ಸೆಪ್ಟೆಂಬರ್ ವೇಳೆಗೆ ರಾಜ್ಯದ 12 ಪ್ರಮುಖ ಜಲಾಶಯಗಳು ತುಂಬಿತುಳುಕಲಿವೆ
Follow us on

ಬೆಂಗಳೂರು: ಈ ಬಾರಿ ಮುಂಗಾರು ಜೋರಾಗಿದ್ದು, ಬಹುತೇಕ ಕಡೆ ಒಳ್ಳೆಯ ಮಳೆಯಾಗಿದೆ. ಆದರೆ ಕರ್ನಾಟಕದ ಜಲಾಶಯಗಳ ಮಟ್ಟಿಗೆ ಹೇಳಬೇಕೆಂದ್ರೆ ಜಲಾಶಯಗಳಲ್ಲಿ ನೀರಿನ ಮಟ್ಟ ಏರಲು ಇನ್ನೂ ಸಾಕಷ್ಟು ಮಳೆಯಾಗಬೇಕಿದೆ. ಜೂನ್​ ತಿಂಗಳ ಮುಂಗಾರು ಮಳೆಗೆ ಜಲಾಶಯಗಳಿಗೆ ಭಾರೀ ನೀರು ಹರಿದುಬಂದಿದೆ. ಆದರೂ ಆಗಸ್ಟ್-ಸೆಪ್ಟೆಂಬರ್​ ಮಳೆ ನೀರಿಗೆ ಕೆಆರ್​ಎಸ್ ಅಣೆಕಟ್ಟೆ ಸೇರಿದಂತೆ ಬಹುತೇಕ ಎಲ್ಲ ಜಲಾಶಯಗಳು ತುಂಬುವ ಅಂದಾಜಿದೆ.

ಭಾರತೀಯ ಹವಾಮಾನ ಇಲಾಖೆ ಅಂದಾಜು ಮಾಡಿದಷ್ಟು ಮಳೆ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಆಗಿಲ್ಲ. ಕರ್ನಾಟಕ ಸೇರಿದಂತೆ ನೆರೆಯ ರಾಜ್ಯಗಳಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದೆ. ಹಾಗಾಗಿ ಮುಂದಿನ ತಿಂಗಳುಗಳಲ್ಲಿ ಮುಂಗಾರು ಮಳೆ ಹೇಗೆ ಸುರಿಯಲಿದೆ ಎಂಬುದರ ಆಧಾರದ ಮೇಲೆ ರಾಜ್ಯದ 12 ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೆಚ್ಚಳವಾಗುವುದನ್ನು ಅವಲಂಬಿಸಿದೆ.

ಈ ಮೊದಲು ಜುಲೈ ಮಧ್ಯ ಭಾಗದಲ್ಲಿ ರಾಜ್ಯದ ಜಲಾಶಯಗಳು ತುಂಬುತ್ತಿದ್ದವು. ಆದರೆ ಕಳೆದ ಎರಡು ವರ್ಷಗಳಿಂದ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಮುಂಗಾರು ಹೆಚ್ಚಾಗುತ್ತಿದೆ. ಹಾಗಾಗಿ ಈ ಬಾರಿಯೂ ಮಳೆ ಚೆನ್ನಾಗಿ ಆದರೆ, ಆಗಸ್ಟ್-ಸೆಪ್ಟೆಂಬರ್ ವೇಳೆಗೆ ಜಲಾಶಯಗಳು ತುಂಬಿತುಳುಕಲಿವೆ. ಆದರೆ ಸದ್ಯಕ್ಕೆ ಕೃಷಿ ನೀರಾವರಿ ಮತ್ತು ಕುಡಿಯುವ ನೀರಿಗೆ ಯಾವುದೇ ಬಾಧಕವಿಲ್ಲ.

ರಾಜ್ಯದ ಅತಿ ದೊಡ್ಡ ಜಲಾಶಯವಾದ ಲಿಂಗನಮಕ್ಕಿ ಸೇರಿದಂತೆ ಇತರೆ ಪ್ರಮುಖ ಜಲಾಶಯಗಳಾದ ಕೆಆರ್​ಎಸ್​, ಕಬಿನಿ, ಹೇಮಾವತಿ, ಹಾರಂಗಿ, ಸೂಪಾ, ತುಂಗಭದ್ರಾ, ಭದ್ರಾ, ಘಟಪ್ರಭಾ, ಮಲಪ್ರಭಾ, ನಾರಾಯಣಪುರ, ಆಲಮಟ್ಟಿ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿ ಲಭ್ಯವಿದೆ.

1) ಕೆಆರ್​ಎಸ್​ ಜಲಾಶಯ | KRS Dam
ಇಂದಿನ ನೀರಿನ ಮಟ್ಟ: 91 ಅಡಿ
ಗರಿಷ್ಠ ಸಾಮರ್ಥ್ಯ: 124.80 ಅಡಿ

2) ಕಬಿನಿ ಜಲಾಶಯ | Kabini Dam
ಇಂದಿನ ನೀರಿನ ಮಟ್ಟ: 2276 ಅಡಿ
ಗರಿಷ್ಠ ಸಾಮರ್ಥ್ಯ: 2284 ಅಡಿ

3) ಹೇಮಾವತಿ ಜಲಾಶಯ | Hemavathi Dam
ಇಂದಿನ ನೀರಿನ ಮಟ್ಟ: 2896 ಅಡಿ
ಗರಿಷ್ಠ ಸಾಮರ್ಥ್ಯ: 2922 ಅಡಿ

4) ಹಾರಂಗಿ ಜಲಾಶಯ | Harangi Dam
ಇಂದಿನ ನೀರಿನ ಮಟ್ಟ: 2842 ಅಡಿ
ಗರಿಷ್ಠ ಸಾಮರ್ಥ್ಯ: 2859 ಅಡಿ

5) ತುಂಗಾಭದ್ರಾ ಜಲಾಶಯ | Tungabhadra Dam
ಇಂದಿನ ನೀರಿನ ಮಟ್ಟ: 1633 ಅಡಿ
ಗರಿಷ್ಠ ಸಾಮರ್ಥ್ಯ: 1609 ಅಡಿ

6) ಭದ್ರಾ ಜಲಾಶಯ | Bhadra Dam
ಇಂದಿನ ನೀರಿನ ಮಟ್ಟ: 156 ಅಡಿ
ಗರಿಷ್ಠ ಸಾಮರ್ಥ್ಯ: 186 ಅಡಿ

7) ಲಿಂಗನಮಕ್ಕಿ ಜಲಾಶಯ | Linganamakki Dam
ಇಂದಿನ ನೀರಿನ ಮಟ್ಟ: 1785 ಅಡಿ
ಗರಿಷ್ಠ ಸಾಮರ್ಥ್ಯ: 1819 ಅಡಿ

8) ಮಲಪ್ರಭಾ ಜಲಾಶಯ | Malaprabha Dam
ಇಂದಿನ ನೀರಿನ ಮಟ್ಟ: 2062 ಅಡಿ
ಗರಿಷ್ಠ ಸಾಮರ್ಥ್ಯ: 2063 ಅಡಿ

9) ಘಟಪ್ರಭಾ ಜಲಾಶಯ | Ghataprabha Dam
ಇಂದಿನ ನೀರಿನ ಮಟ್ಟ: 2136 ಅಡಿ
ಗರಿಷ್ಠ ಸಾಮರ್ಥ್ಯ: 2175 ಅಡಿ

10) ಸೂಪಾ ಜಲಾಶಯ | Supa Dam
ಇಂದಿನ ನೀರಿನ ಮಟ್ಟ: 539 ಮೀಟರ್
ಗರಿಷ್ಠ ಸಾಮರ್ಥ್ಯ: 564 ಮೀಟರ್

11) ನಾರಾಯಣಪುರ ಜಲಾಶಯ | Narayanapura Dam
ಇಂದಿನ ನೀರಿನ ಮಟ್ಟ: 490.03 ಮೀಟರ್
ಗರಿಷ್ಠ ಸಾಮರ್ಥ್ಯ: 491 ಮೀಟರ್

12) ಆಲಮಟ್ಟಿ ಜಲಾಶಯ | Almatti Dam
ಇಂದಿನ ನೀರಿನ ಮಟ್ಟ: 517 ಮೀಟರ್
ಗರಿಷ್ಠ ಸಾಮರ್ಥ್ಯ: 519.69 ಮೀಟರ್

(deficit monsoon 2021 karnataka 12 reservoirs and dams water level as on 6th july 2021)

Published On - 9:25 am, Tue, 6 July 21