ಧಾರವಾಡದ ಬ್ಲಡ್ ಬ್ಯಾಂಕ್​ನಲ್ಲಿ ನೋ ಸ್ಟಾಕ್​ ಬೋರ್ಡ್; ಜಿಲ್ಲೆಯಲ್ಲಿ ಕಾಡುತ್ತಿದೆ ರಕ್ತದಾನಿಗಳ ಕೊರತೆ

ರಕ್ತದ ಕೊರತೆಯ ಪರಿಣಾಮ ಗರ್ಭಿಣಿಯರು ಹಾಗೂ ಥಲೇಸೀಮಿಯಾ ರೋಗಿಗಳ ಮೇಲಾಗುತ್ತಿದೆ. ಬೇರೆಲ್ಲ ಶಸ್ತ್ರಚಿಕಿತ್ಸೆಗಳ ಬೇಡಿಕೆ ಇಲ್ಲದೇ ಇದ್ದರೂ ಥಲೇಸೀಮಿಯಾ ರೋಗಿಗಳಿಗೆ ನಿರಂತವಾಗಿ ರಕ್ತ ಬೇಕಾಗುತ್ತದೆ. ಅವರಿಗೆ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಕೊರತೆ ನಿರಂತರವಾಗಿ ಇದ್ದೇ ಇರುತ್ತದೆ. ಹೀಗಾಗಿ ಅಂಥ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆದರೆ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗಿದ್ದು, ಬೇಡಿಕೆಯನ್ನು ಸರಿದೂಗಿಸಲು ಆಗುತ್ತಿಲ್ಲ.

ಧಾರವಾಡದ ಬ್ಲಡ್ ಬ್ಯಾಂಕ್​ನಲ್ಲಿ ನೋ ಸ್ಟಾಕ್​ ಬೋರ್ಡ್; ಜಿಲ್ಲೆಯಲ್ಲಿ ಕಾಡುತ್ತಿದೆ ರಕ್ತದಾನಿಗಳ ಕೊರತೆ
ಬ್ಲಡ್ ಬ್ಯಾಂಕ್
Follow us
TV9 Web
| Updated By: preethi shettigar

Updated on:Jul 06, 2021 | 9:28 AM

ಧಾರವಾಡ: ಸಾಮಾನ್ಯವಾಗಿ ಯಾವುದಾದರೂ ಅಂಗಡಿಗಳಲ್ಲಿ ಅತಿ ಬೇಡಿಕೆಯ ವಸ್ತುಗಳು ಮುಗಿದಾಗ ನೋ ಸ್ಟಾಕ್ ಎನ್ನುವ ಬೋರ್ಡ್ ಹಾಕುವುದನ್ನು ನಾವು ನೋಡಿರುತ್ತೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಕೊರೊನಾ ಎರಡನೇ ಅಲೆಯ ಕಾಲಘಟ್ಟದಲ್ಲಿ ಆಸ್ಪತ್ರೆಗಳಲ್ಲಿ ಕೂಡ ನೋ ಬೆಡ್​ ಎನ್ನುವ ಬೋರ್ಡ್ ಎಲ್ಲರನ್ನು ಹೈರಾಣಾಗಿಸಿತ್ತು. ಆದರೆ ಧಾರವಾಡದಲ್ಲಿ ಇದೀಗ ನೋ ಸ್ಟಾಕ್ ಪರಿಸ್ಥಿತಿ ಬ್ಲಡ್ ಬ್ಯಾಂಕ್​ಗಳಿಗೂ ಬಂದಿದೆ. ಜಿಲ್ಲೆಯಲ್ಲಿ ಇದೀಗ ಸಾಮಾನ್ಯ ಗುಂಪಿನ ರಕ್ತವೂ  ಸಿಗದೇ ಅನೇಕರು ಪರದಾಡುವಂತಾಗಿದೆ. ಇದರಿಂದಾಗಿ ಒಂದು ಕಡೆ ರೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದರೆ ಮತ್ತೊಂದು ಕಡೆ ಶಸ್ತ್ರಚಿಕಿತ್ಸೆ ಮಾಡಲು ವೈದ್ಯರು ಕೂಡ ಹಿಂದೇಟು ಹಾಕುವಂತಾಗಿದೆ.

ಧಾರವಾಡ ಜಿಲ್ಲೆಯಲ್ಲಿ ಸದ್ಯ ಯಾವುದೇ ಬ್ಲಡ್ ಬ್ಯಾಂಕಿಗೆ ಹೋಗಿ ಕೇಳಿದರೂ ನೋ ಸ್ಟಾಕ್ ಅಂತಾನೇ ಹೇಳುತ್ತಿದ್ದಾರೆ. ಮಾತ್ರವಲ್ಲ ಬಹುತೇಕ ಬ್ಲಡ್ ಬ್ಯಾಂಕ್​ಗಳು ಕೂಡ ದಾನಿಗಳಿಲ್ಲದೆ ಬಿಕೋ ಎನ್ನುವ ಸ್ಥಿತಿಗೆ ಬಂದಿವೆ. ಅಷ್ಟಕ್ಕೂ ಈ ಸಮಸ್ಯೆಗೆ ಕಾರಣವಾಗಿದ್ದು, ಕೊವಿಡ್ ಲಸಿಕಾ ಅಭಿಯಾನ. ರಕ್ತದ ಕೊರತೆಗೂ ಲಸಿಕೆಗೂ ಏನು ಸಂಬಂಧ ಅಂದುಕೊಳ್ಳೋದು ಸಹಜ. ಆದರೆ ಇದೀಗ ರಕ್ತದ ಕೊರತೆಗೆ ಕಾರಣ ಲಸಿಕಾಕರಣ ಕಾರ್ಯಕ್ರಮ. 18 ವರ್ಷ ಮೇಲ್ಪಟ್ಟವರಿಗೆ ಇದೀಗ ಕೊವಿಡ್ ವ್ಯಾಕ್ಸಿನ್ ಹಾಕುವುದಕ್ಕೆ ಶುರು ಮಾಡಲಾಗಿದೆ. ಮುಖ್ಯವಾಗಿ ರಕ್ತದಾನ ಮಾಡುವವರು ಕೂಡ ಇದೇ ವಯಸ್ಸಿನವರಾಗಿರುವುದರಿಂದ ರಕ್ತದಾನದತ್ತ ಯಾರು ಕೂಡ ಗಮನ ಹರಿಸುತ್ತಿಲ್ಲ. ಇದರಿಂದಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಿನಕ್ಕೆ 2 ರಿಂದ 3 ಯೂನಿಟ್ ಮಾತ್ರ ರಕ್ತ ಸಂಗ್ರಹವಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಪ್ರಭು ತಿಳಿಸಿದ್ದಾರೆ.

ರಕ್ತದ ಕೊರತೆಯ ಪರಿಣಾಮ ಗರ್ಭಿಣಿಯರು ಹಾಗೂ ಥಲೇಸೀಮಿಯಾ ರೋಗಿಗಳ ಮೇಲಾಗುತ್ತಿದೆ. ಬೇರೆಲ್ಲ ಶಸ್ತ್ರಚಿಕಿತ್ಸೆಗಳ ಬೇಡಿಕೆ ಇಲ್ಲದೇ ಇದ್ದರೂ ಥಲೇಸೀಮಿಯಾ ರೋಗಿಗಳಿಗೆ ನಿರಂತವಾಗಿ ರಕ್ತ ಬೇಕಾಗುತ್ತದೆ. ಅವರಿಗೆ ರಕ್ತದಲ್ಲಿನ ಕೆಂಪು ರಕ್ತ ಕಣಗಳ ಕೊರತೆ ನಿರಂತರವಾಗಿ ಇದ್ದೇ ಇರುತ್ತದೆ. ಹೀಗಾಗಿ ಅಂಥ ರೋಗಿಗಳಿಗೆ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಆದರೆ ಜಿಲ್ಲೆಯಲ್ಲಿ ರಕ್ತದ ಕೊರತೆ ಉಂಟಾಗಿದ್ದು, ಬೇಡಿಕೆಯನ್ನು ಸರಿದೂಗಿಸಲು ಆಗುತ್ತಿಲ್ಲ.

ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಸೇರಿ ಒಟ್ಟು 12ಕ್ಕೂ ಹೆಚ್ಚು ರಕ್ತ ಭಂಡಾರಗಳು ಧಾರವಾಡ ಜಿಲ್ಲೆಯಲ್ಲಿವೆ. ಆದರೆ ಎಲ್ಲಿಯೂ ರಕ್ತವೇ ಸಿಗುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಒಂದೇ ಒಂದು ಮಸೇಜ್ ಮಾಡಿದ್ದರೆ ಸಾಕಷ್ಟ ಜನರು ರಕ್ತದಾನಕ್ಕೆ ಓಡಿ ಬರುತ್ತಿದ್ದರು. ಆದರೆ ಇದೀಗ ರಕ್ತದಾನಿಗಳನ್ನು ಹುಡುಕಾಡುವಂತಾಗಿದೆ ಎಂದು ಸ್ಥಳೀಯರಾದ ಅನಿಲ ಕುಮಾರ ಶೆಟ್ಟಿ ಹೇಳಿದ್ದಾರೆ.

ಕೊರೊನಾ ಲಸಿಕೆ ಪಡೆದುಕೊಂಡ 14 ದಿನದ ಬಳಿಕ ರಕ್ತದಾನ ಮಾಡಬಹುದಾಗಿದ್ದರೂ, ಏನಾಗುತ್ತೋ ಏನೋ ಎನ್ನುವ ಆತಂಕ ಜನರಲ್ಲಿದೆ. ಹೀಗಾಗಿ ಸರ್ಕಾರ ರಕ್ತದಾನ ಮಾಡಿದವರಿಗೆ ಆದ್ಯತೆ ಮೇರೆಗೆ ಲಸಿಕೆ ಕೊಡಲಾಗುತ್ತದೆ ಎಂದು ಘೋಷಿಸಿದರೆ ರಕ್ತದಾನದ ಕೊರತೆಯನ್ನು ನೀಗಿಸಬಹುದಾಗಿದೆ ಎನ್ನುವುದು ಧಾರವಾಡದ ಸ್ಥಳೀಯರ ಅಭಿಪ್ರಾಯ.

ಇದನ್ನೂ ಓದಿ: ಲಸಿಕೆ ಪಡೆದ 28 ದಿನದೊಳಗೆ ರಕ್ತದಾನ ಮಾಡುವಂತಿಲ್ಲ, ರಕ್ತದ ಕೊರತೆ ನೀಗಿಸಲು ಲಸಿಕೆ ಪಡೆಯುವ ಮುನ್ನವೇ ಯುವಕರು ರಕ್ತದಾನ ಮಾಡಿ

World Blood Donor Day: ರಕ್ತದಾನ ಮಾಡುವುದರಿಂದ ಆಗುವ 5 ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿರಿ

Published On - 8:46 am, Tue, 6 July 21

ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಮಾಜಿ ಲವರ್​ನಿಂದ ಯುವತಿಗೆ ಕಿರುಕುಳ: ಬೈಕ್ ಕದ್ದು, ಜಖಂಗೊಳಿಸಿದ ಯುವಕ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ಕರ್ನಾಟಕ ಬಿಜೆಪಿಯಲ್ಲಿ ಬದಲಾವಣೆ ಬಿರುಗಾಳಿ: ಯತ್ನಾಳ್ ಸ್ಫೋಟಕ ಹೇಳಿಕೆ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ
ತ್ರಿವಿಕ್ರಮ್ ಡೇಂಜರ್​ ಎಂದ ಭವ್ಯಾ ಗೌಡ; ರಾಧೆಗೆ ಈಗ ಬೇಡವಾದ ಕೃಷ್ಣ