Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ...ಆಗಿದ್ದೇನು?

ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ…ಆಗಿದ್ದೇನು?

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Mar 18, 2025 | 8:46 PM

ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲ ಆದೇಶ ನೀಡಿದರೂ ಸಹ ಕೆಎಸ್​ಆರ್​ಟಿಸಿ ಕ್ಯಾರೇ ಎಂದಿಲ್ಲ. ಹೀಗಾಗಿ ಆಕ್ರೋಶಗೊಂಡ ಕೋರ್ಟ್, ಬಸ್​ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿಯ ಶಿರಸಿ ಡಿಪೋದ ಕೆಎಸ್​ಆರ್​ಟಿಸಿ ಬಸನ್ನು ತಂದು ಕೋರ್ಟ್​ ಆವರಣದಲ್ಲಿ ನಿಲ್ಲಿಸಲಾಗಿದೆ.

ಶಿವಮೊಗ್ಗ, (ಮಾರ್ಚ್ 18): ರಸ್ತೆ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಲ ಆದೇಶ ನೀಡಿದರೂ ಸಹ ಕೆಎಸ್​ಆರ್​ಟಿಸಿ ಕ್ಯಾರೇ ಎಂದಿಲ್ಲ. ಹೀಗಾಗಿ ಆಕ್ರೋಶಗೊಂಡ ಕೋರ್ಟ್, ಬಸ್​ ಜಪ್ತಿ ಮಾಡುವಂತೆ ಆದೇಶ ಹೊರಡಿಸಿದೆ. ಅದರಂತೆ ಕೆಎಸ್ ಆರ್ ಟಿಸಿಯ ಶಿರಸಿ ಡಿಪೋದ ಕೆಎಸ್​ಆರ್​ಟಿಸಿ ಬಸನ್ನು ತಂದು ಕೋರ್ಟ್​ ಆವರಣದಲ್ಲಿ ನಿಲ್ಲಿಸಲಾಗಿದೆ.

2022ರ ಜುಲೈ 7 ರಂದು ಪತ್ರಿಕೆ ಹಂಚಲು ಹೋಗಿದ್ದ ಗಣೇಶ್ ಎನ್ನುವಾತನಿಗೆ ಸಾಗರದ ಪ್ರವಾಸಿ ಮಂದಿರದ ಎದುರು ಶಿರಸಿ ಡಿಪೋದ ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದಿತ್ತು. ಈ ಅಪಘಾತದಲ್ಲಿ ಗಣೇಶ್ ಮೃತಪಟ್ಟಿದ್ದ. ಇದರಿಂದ ಪರಿಹಾರ ಕೊಡಿಸುವಂತೆ ಮೃತರ ಕುಟುಂಬಸ್ಥರು ಗರದ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಕೋರ್ಟ್, ಗಣೇಶ್ ಅವರ ಪೋಷಕರಿಗೆ ಮೂರು ತಿಂಗಳೊಳಗೆ ಪರಿಹಾರ ನೀಡುವಂತೆ 2024 ರ ಜುಲೈ 8 ರಂದು ನ್ಯಾಯಾಲಯ ಆದೇಶಿಸಿತ್ತು. ಆದ್ರೆ, ಇದುವರೆಗೂ ಕೆಎಸ್​ಆರ್​ಟಿಸಿ ಯಾವುದೇ ಪರಿಹಾರ ನೀಡಿಲ್ಲ. ಹೀಗಾಗಿ ಮೃತ ಗಣೇಶನ ತಾಯಿ ಉಮಾ ಅವರು ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು.

Published on: Mar 18, 2025 08:46 PM