World Blood Donor Day: ರಕ್ತದಾನ ಮಾಡುವುದರಿಂದ ಆಗುವ 5 ಪ್ರಯೋಜನಗಳ ಬಗ್ಗೆ ತಿಳಿದುಕೊಂಡಿರಿ
ವಿಶ್ವ ರಕ್ತ ದಾನಿಗಳ ದಿನ: ರಕ್ತದಾನದಿಂದ ಅದೆಷ್ಟೋ ಜನರ ಜೀವ ಉಳಿದಿದೆ. ಅನೇಕ ಬಾರಿ ಮಾರಣಾಂತಿಕ ಪರಿಸ್ಥಿತಿಯಲ್ಲಿ ಬಳಲುತ್ತಿರುವ ರೋಗಿಗಳಿಗೆ ರಕ್ತದಾನ ಜೀವ ಉಳಿಸಿದೆ. ಹಾಗೂ ದಾನಿಗಳಿಗೂ ಕೂಡಾ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ ಎಂದು ನೀವು ತಿಳಿದಿರಲೆಬೇಕು.
ರಕ್ತದಾನ ಮಾಡುವುದರ ಪ್ರಯೋಜನಗಳು ಮತ್ತು ಅದರ ಅಗತ್ಯತೆಯ ಕುರಿತಾಗಿ ಜಾಗೃತಿ ಮೂಡಿಸಲು ಪ್ರತೀ ವರ್ಷ ಜೂನ್ 14ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತದೆ. ಇನ್ನೊಬ್ಬರ ಜೀವ ಉಳಿಸಲು ಉಡುಗೊರೆಯಾಗಿ ರಕ್ತವನ್ನು ನೀಡುವ ದಾನಿಗಳಿಗೆ ಧನ್ಯವಾದ ತಿಳಿಸಲು ಈ ದಿವನ್ನು ಆಚರಿಸಲಾಗುತ್ತದೆ. ಇದೊಂದು ಉದಾತ್ತ ಉದ್ದೇಶವಾಗಿದ್ದು ಹಿಂಜರಿಯುತ್ತಿರುವ ಇತರರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಈ ದಿನವನ್ನು ಮೀಸಲಿಡಲಾಗಿದೆ.
ರಕ್ತದಾನದಿಂದ ಅದೆಷ್ಟೋ ಜನರ ಜೀವ ಉಳಿದಿದೆ. ಅನೇಕ ಬಾರಿ ಮಾರಣಾಂತಿಕ ಪರಿಸ್ಥಿತಿಯಲ್ಲಿ ಬಳಲುತ್ತಿರುವ ರೋಗಿಗಳಿಗೆ ರಕ್ತದಾನ ಜೀವ ಉಳಿಸಿದೆ. ಹಾಗೂ ದಾನಿಗಳಿಗೂ ಕೂಡಾ ಆರೋಗ್ಯದ ಪ್ರಯೋಜನಗಳನ್ನು ನೀಡುತ್ತದೆ ಎಂದು ನೀವು ತಿಳಿದಿರಲೆಬೇಕು.
ತೂಕನಷ್ಟ ರಕ್ತದಾನವು ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮತ್ತು ಆರೋಗ್ಯವಂತ ವಯಸ್ಕರಲ್ಲಿ ದೇಹದ ಸದೃಢತೆಯ ಜತೆಗೆ ಫಿಟ್ನೆಸ್ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರ ನೀವು ಒಂದು ಡ್ರಾಪ್ ರಕ್ತವನ್ನು ದಾನ ಮಾಡುವುದು ಸುಮಾರು 650 ಕ್ಯಾಲೋರಿಗಳನ್ನು ಕರಗಿಸಲು ಸಹಾಯಕವಾಗುತ್ತದೆ. ಆದರೆ, ರಕ್ತದಾನ ಮಾಡುವ ಮೊದಲು ವೈದ್ಯರೊಂದಿಗೆ ಸಮಾಲೋಚಿಸುವುದು ಅತ್ಯಗತ್ಯ.
ಹಿಮೋಕ್ರೊಮಾಟೋಸಿಸ್ಅನ್ನು ತಡೆಯುತ್ತದೆ ರಕ್ತದಾನ ಮಾಡುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು ಹಾಗೂ ಹಿಮೋಕ್ರೊಮಾಟೋಸಿಸ್ ಬೆಳವಣಿಗೆಯನ್ನು ತಡೆಯಬಹುದು. ಈ ಪರಿಸ್ಥಿತಿಯಲ್ಲಿ ದೇಹವು ಕಬ್ಬಿಣದ ಅಂಶವನ್ನು ಅತಿಯಾಗಿ ಹೀರಿಕೊಳ್ಳುತ್ತದೆ. ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಅತಿಯಾದ ಕಬ್ಬಿಣ ಅಂಶದ ಹೊರೆಯನ್ನು ಕಡಿಮೆ ಮಾಡಬಹುದು. ಹಾಗಾಗಿ ಹಿಮೋಕ್ರೊಮಾಟೋಸಿಸ್ ಇರುವವರಿಗೆ ರಕ್ತದಾನ ಪ್ರಯೋಜನಕಾರಿಯಾಗಿದೆ. ಆದರೆ, ರಕ್ತದಾನದ ಕುರಿತಾಗಿ ವೈದ್ಯರಲ್ಲಿ ಸಲಹೆ ಪಡೆಯುವುದು ಅತ್ಯವಶ್ಯಕ.
ಹೃದಯರೋಗ ಅಪಾಯವನ್ನು ಕಡಿಮೆ ಮಾಡುತ್ತದೆ ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿನ ಕಬ್ಬಿಣದ ಅಂಶ ಹತೋಟಿಯಲ್ಲಿರುತ್ತದೆ. ಇದರಿಂದ ಹೃದ್ರೋಗದ ಅಪಾಯವನ್ನು ತಡೆಹಿಡಿಯಬಹುದಾಗಿದೆ. ದೇಹದಲ್ಲಿನ ಹೆಚ್ಚಿನ ಕಬ್ಬಿಣದ ಅಂಶವು ವಯಸ್ಕರಲ್ಲಿ ಹೃದಾಯಾಘಾತ, ಪಾರ್ಶ್ವವಾಯುಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ ದೇಹದಲ್ಲಿನ ಹೆಚ್ಚಿನ ಮಟ್ಟದ ಕಬ್ಬಿಣವು ಕ್ಯಾನ್ಸರ್ಗೆ ಕಾರಣವಾಗುತ್ತದೆ. ರಕ್ತದಾನ ಮಾಡುವ ಮೂಲಕ ನಿಮ್ಮ ದೇಹದಲ್ಲಿನ ಕಬ್ಬಣದ ಅಂಶವನ್ನು ಹತೊಟಿಯಲ್ಲಿಟ್ಟುಕೊಳ್ಳಬಹುದಾಗಿದೆ. ಇದರಿಂದ ಕ್ಯಾನ್ಸರ್ ಬರುವ ಅಪಾಯವನ್ನು ಕಡಿಮೆ ಮಾಡಬಹುದು.
ಹೊಸ ರಕ್ತಕಣ ಉತ್ಪಾದನೆ ರಕ್ತದ ದಾನವು ಹೊಸ ರಕ್ತ ಕಣಗಳ ಉತ್ಪಾದನೆಗೆ ಸಹಾಯಕವಾಗಿದೆ. ರಕ್ತದಾನ ಮಾಡಿದ 48 ಗಂಟೆಗಳ ಒಳಗೆ ನಿಮ್ಮ ದೇಹವು ವ್ಯವಸ್ಥಿತವಾಗಿ ಕೆಲಸ ಪಾರಂಭಿಸುತ್ತದೆ. ಹಾಗೂ ಕೆಂಪು ರಕ್ತಕಣಗಳನ್ನು 30-60 ದಿನಗಳ ಅವಧಿಯಲ್ಲಿಉತ್ಪಾದಿಸುತ್ತದೆ. ಆದ್ದರಿಂದ ರಕ್ತದಾನವು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಇದನ್ನೂ ಓದಿ:
ರಕ್ತದಾನ ಮಾಡಲು ರಾಜವಂಶಸ್ಥ ಯದುವೀರ್ ಕರೆ
ವ್ಯಾಕ್ಸಿನ್ ಹಾಕಿಸಿಕೊಳ್ಳುವ ಮೊದಲು ರಕ್ತದಾನ ಮಾಡಿ ಮಾದರಿಯಾದ ನಟ ವಸಿಷ್ಠ ಸಿಂಹ