AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ಲಸಿಕೆ ಹಾಕಿಸಿಕೊಂಡರೆ ಕಾರ್ ಗೆಲ್ಲುವ ಬೊಂಬಾಟ್ ಅವಕಾಶ ಇಲ್ಲಿದೆ!

ಸ್ವತಃ ಮಾಸ್ಕೋ ನಗರದ ಮೇಯರ್ ಈ ಘೋಷಣೆ ಮಾಡಿದ್ದು, ಜೂನ್ 14ರಿಂದ ಜುಲೈ 11ರವರೆಗೆ ಮೊದಲ ಡೋಸ್ ಕೊವಿಡ್ ಲಸಿಕೆ ಪಡೆಯುವ ನಾಗರಿಕರಿಗೆ ಕಾರು ಗೆಲ್ಲುವ ಅವಕಾಶವಿದೆ ಎಂದು ತಿಳಿಸಿದ್ದಾರೆ.

ಕೊವಿಡ್ ಲಸಿಕೆ ಹಾಕಿಸಿಕೊಂಡರೆ ಕಾರ್ ಗೆಲ್ಲುವ ಬೊಂಬಾಟ್ ಅವಕಾಶ ಇಲ್ಲಿದೆ!
ಸಾಂದರ್ಭಿಕ ಚಿತ್ರ
TV9 Web
| Updated By: Skanda|

Updated on: Jun 14, 2021 | 8:14 AM

Share

ಜಗತ್ತಿನಲ್ಲಿ ಕೊವಿಡ್ ಲಸಿಕೆಯನ್ನು ಸಾರ್ವಜನಿಕರಿಗೆ ವಿತರಿಸಿದ ಮೊದಲ ದೇಶ ರಷ್ಯಾ. ಈವರೆಗೆ ಅಭಿವೃದ್ಧಿಪಡಿಸಲಾಗಿರುವ ಅತಿ ಪರಿಣಾಮಕಾರಿ ಕೊವಿಡ್ ಲಸಿಕೆಯೆಂದೂ ರಷ್ಯಾ ತಯಾರಿಸಿದ ಸ್ಪುಟ್ನಿಕ್ ವಿ ಲಸಿಕೆಯನ್ನು ವ್ಯಾಖ್ಯಾನಿಸಲಾಗುತ್ತದೆ. ಇಷ್ಟೆಲ್ಲ ಇರುವಾಗ ರಷ್ಯಾದಲ್ಲೂ ಈವರೆಗೆ ಎಲ್ಲಾ ನಾಗರಿಕರಿಗೂ ಕೊವಿಡ್ ಲಸಿಕೆ ವಿತರಣೆ ಮಾಢಲು ಸಾಧ್ಯವಾಗಿಲ್ಲ. ಹೀಗಾಗಿ ಲಸಿಕೆ ವಿತರಣೆಯ ವೇಗ ಹೆಚ್ಚಿಸಲು ರಷ್ಯಾದ ಮಾಸ್ಕೋ ನಗರದ ಆಡಳಿತ ಹೊಸದೊಂದು ಸಾಹಸಕ್ಕೆ ಕೈಹಾಕಿದೆ. ನಿರ್ದಿಷ್ಟ ಅವಧಿಯಲ್ಲಿ ಮೊದಲ ಡೋಸ್ ಕೊವಿಡ್ ಲಸಿಕೆ ಪಡೆಯುವ ನಾಗರಿಕರಿಗೆ ಕಾರು ಗೆಲ್ಲುವ ಅವಕಾಶ ನೀಡಿದೆ.

ಸ್ವತಃ ಮಾಸ್ಕೋ ನಗರದ ಮೇಯರ್ ಈ ಘೋಷಣೆ ಮಾಡಿದ್ದು, ಜೂನ್ 14ರಿಂದ ಜುಲೈ 11ರವರೆಗೆ ಮೊದಲ ಡೋಸ್ ಕೊವಿಡ್ ಲಸಿಕೆ ಪಡೆಯುವ ನಾಗರಿಕರಿಗೆ ಕಾರು ಗೆಲ್ಲುವ ಅವಕಾಶವಿದೆ ಎಂದು ತಿಳಿಸಿದ್ದಾರೆ. ಈ ಅವಧಿಯಲ್ಲಿ ಮೊದಲ ಡೋಸ್ ಲಸಿಕೆ ಪಡೆಯುವವರು ಸ್ವಯಂಚಾಲಿತವಾಗಿ ಈ ಯೋಜನೆಗೆ ಒಳಪಡುತ್ತಾರೆ. ಇದೊಂದು ಲಕ್ಕಿ ಡ್ರಾ ರೀತಿಯ ಯೋಜನೆಯಾಗಿದ್ದು, ಈ ಅವಧಿಯಲ್ಲಿ ಲಸಿಕೆ ಪಡೆಯುವ ಯಾರು ಬೇಕಾದರೂ ಕಾರು ಗೆಲ್ಲಬಹುದು ಎಂದು ತಿಳಿಸಿದ್ದಾರೆ.  ಒಂದು ಮಿಲಿಯನ್ ರೂಬೆಲ್ ಮೌಲ್ಯದ ಕಾರನ್ನು ವಾರದಲ್ಲಿ ಐವರಿಗೆ ಅವಕಾಶ ಲಭ್ಯವಿದೆಯಂತೆ.

ರಷ್ಯಾದಲ್ಲಿ ಒಮ್ಮೆ ಕಡಿಮೆಯಾಗಿದ್ದ ಕೊವಿಡ್ ಸೋಂಕು ಮತ್ತೆ ಏರುವ ಲಕ್ಷಣ ಹೆಚ್ಚುತ್ತಿದೆ. ಡಿಸೆಂಬರ್ 24ರ ನಂತರ ಇದೇ ಮೊದಲ ಬಾರಿಗೆ ಮಾಸ್ಕೋ ನಗರದಲ್ಲಿ ರವಿವಾರ (ಮೇ 13) ಹೆಚ್ಚು ಕೊವಿಡ್ ಸೋಂಕಿತರು ಪತ್ತೆಯಾಗಿದ್ದು, ಒಂದೇ ದಿನ 7,704 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕೊವಿಡ್ ಸೋಂಕು ಹರಡುವುದನ್ನು ನಿಲ್ಲಿಸಲು ದೀರ್ಘ ಕಾಲಾವಧಿಯ ರಜೆಯನ್ನು ಸಹ ಮಾಸ್ಕೋ ಆಡಳಿತ ಘೋಷಿಸಿದೆ.

ಇದನ್ನೂ ಓದಿ: India Pak: ಭಾರತ ಪಾಕಿಸ್ತಾನದ ನಡುವೆ ಶುರುವಾಗಿದೆ ಅಕ್ಕಿಯ ಕಲಹ; ಇಲ್ಲಿದೆ ವಿವರ

ಜಾಗತಿಕ ಮಟ್ಟದ ನಿರ್ಣಯಗಳು ಎಲ್ಲಾ ದೇಶಗಳನ್ನು ಒಳಗೊಂಡು ಹೊರಹೊಮ್ಮಬೇಕು: ಚೀನಾ

(Russia Moscow announces will give car who get covid vaccine)