ಜಾಗತಿಕ ಮಟ್ಟದ ನಿರ್ಣಯಗಳು ಎಲ್ಲಾ ದೇಶಗಳನ್ನು ಒಳಗೊಂಡು ಹೊರಹೊಮ್ಮಬೇಕು: ಚೀನಾ

ನಾವಂತೂ ಇಂತಹ ಚಿಕ್ಕ ಗುಂಪುಗಳಿಗೆ ಮಹತ್ವ ನೀಡುವುದಿಲ್ಲ. ದೇಶಗಳು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ, ದುರ್ಬಲವಾಗಿರಲಿ ಅಥವಾ ಸಬಲವಾಗಿರಲಿ, ಬಡದೇಶವಾಗಿರಲಿ ಇಲ್ಲವೇ ಶ್ರೀಮಂತ ದೇಶವೇ ಆಗಿರಲಿ..

ಜಾಗತಿಕ ಮಟ್ಟದ ನಿರ್ಣಯಗಳು ಎಲ್ಲಾ ದೇಶಗಳನ್ನು ಒಳಗೊಂಡು ಹೊರಹೊಮ್ಮಬೇಕು: ಚೀನಾ
ಅಮೆರಿಕದ 46ನೇ ಅಧ್ಯಕ್ಷ ಜೋ ಬೈಡೆನ್ ಮತ್ತು ಚೀನಾ ಪ್ರಧಾನಿ ಕ್ಸಿನ್ ಜಿನ್​ಪಿಂಗ್
Follow us
TV9 Web
| Updated By: guruganesh bhat

Updated on:Jun 13, 2021 | 7:31 PM

ಬೀಜಿಂಗ್: ವಿವಿಧ ದೇಶಗಳ ಚಿಕ್ಕ ಚಿಕ್ಕ ಗುಂಪುಗಳು ವಿಶ್ವದ ಆಗುಹೋಗುಗಳ ಭವಿಷ್ಯವನ್ನು ನಿರ್ಣಯಿಸುವ ದಿನಗಳು ಎಂದಿಗೋ ಮುಗಿದುಹೋಗಿದೆ ಎಂದು ಹೇಳಿರುವ ಚೀನಾ,  ಜಿ 7 ರಾಷ್ಟ್ರಗಳ ಒಕ್ಕೂಟಕ್ಕೆ ನೇರಾನೇರ ತಿರುಗೇಟು ನೀಡಿದೆ. ಜಗತ್ತಿನ ಅತಿ ಬಲಾಢ್ಯ ದೇಶಗಳೆಂದು ಕರೆಸಿಕೊಳ್ಳುವ ಅಮೆರಿಕ, ಇಂಗ್ಲೆಂಡ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಜಪಾನ್​ಗಳ ಒಕ್ಕೂಟವಾದ ಜಿ 7 ದೇಶಗಳ ಶೃಂಗಸಭೆಯ ಬೆನ್ನಲ್ಲೇ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ವಿಶ್ವದ ಬಲಾಢ್ಯ ದೇಶದ ಪಟ್ಟಕ್ಕೆ ಅವಿರತ ಹೋರಾಡುತ್ತಿದ್ದ ಸೋವಿಯತ್ ರಷ್ಯಾದ ಪಟ್ಟವನ್ನು 1991ರ ನಂತರ ತನ್ನತ್ತ ವಾಲಿಸಿಕೊಂಡಿರುವ ಚೀನಾ ಅಮೆರಿಕವನ್ನು ಸಹ ಪರೋಕ್ಷವಾಗಿ ಮಣಿಸಿದೆ ಎಂಬ ಅಭಿಪ್ರಾಯಗಳೇ ಇತ್ತೀಚಿಗೆ ಕೇಳಿಬರುತ್ತಿವೆ. ಸದ್ಯ ವಿಶ್ವದ ಅತಿ ಶಕ್ತಿಶಾಲಿ ದೇಶಗಳಲ್ಲಿ ಚೀನಾವೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ ಎಂದು ಚೀನಾ ತನ್ನನ್ನು ತಾನು ವ್ಯಾಖ್ಯಾನಿಸಿಕೊಳ್ಳುತ್ತದೆ. ಕೆಲವು ವಿಷಯಗಳಲ್ಲಿ ಅಮೆರಿಕವೂ ಚೀನಾದ ಪರೋಕ್ಷ ಬೆದರಿಕೆಗಳಿಗೆ ಮಣಿದಿರುವುದೇ ಇದಕ್ಕೆ ಸಾಕ್ಷಿ.

ಜಾಗತಿಕ ಮಟ್ಟದ ನಿರ್ಧಾರಗಳನ್ನು ವಿವಿಧ ದೇಶಗಳ ಚಿಕ್ಕ ಗುಂಪುಗಳು ನಿರ್ಣಯಿಸುವ ಕಾಲ ಮುಗಿದು ಎಷ್ಟೋ ಕಾಲವಾಗಿದೆ. ನಾವಂತೂ ಇಂತಹ ಚಿಕ್ಕ ಗುಂಪುಗಳಿಗೆ ಮಹತ್ವ ನೀಡುವುದಿಲ್ಲ. ದೇಶಗಳು ಚಿಕ್ಕದಿರಲಿ ಅಥವಾ ದೊಡ್ಡದಾಗಿರಲಿ, ದುರ್ಬಲವಾಗಿರಲಿ ಅಥವಾ ಸಬಲವಾಗಿರಲಿ, ಬಡದೇಶವಾಗಿರಲಿ ಇಲ್ಲವೇ ಶ್ರೀಮಂತ ದೇಶವೇ ಆಗಿರಲಿ..ಜಾಗತಿಕ ಮಟ್ಟದ ನಿರ್ಣಯಗಳು ಎಲ್ಲಾ ದೇಶಗಳ ಮೂಲಕವೇ ಹೊರಹೊಮ್ಮಬೇಕು ಎಂದು ಚೀನಾದ ಮಾಧ್ಯಮ ವಕ್ತಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಭವಿಷ್ಯದಲ್ಲಿ ಕಾಡಬಹುದಾದ ಸಾಂಕ್ರಾಮಿಕ ರೋಗಗಳ ವಿರುದ್ಧ ಜಿ7 ನಾಯಕರ ಅಸ್ತ್ರ ಸಿದ್ಧತೆ ಜಗತ್ತಿನ ಏಳು ಶ್ರೀಮಂತರಾಷ್ಟ್ರಗಳು ಅಂದರೆ ಜಿ7 (G7) ನಾಯಕರು ಮಹತ್ವದ ನಿರ್ಧಾರವನ್ನೊಂದನ್ನು ಕೈಗೊಂಡಿದ್ದಾರೆ. ಭವಿಷ್ಯದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಗುರಿಯೊಂದಿಗೆ, ಪ್ರಮುಖ ಜಾಗತಿಕ ಆರೋಗ್ಯ ಘೋಷಣೆಯಾದ ಕಾರ್ಬಿಸ್​ ಬೇ ಡಿಕ್ಲೇರೇಶನ್​​ಗೆ ಸಹಿ ಹಾಕಲಿದ್ದಾರೆ. ಈ ಘೋಷಣೆಯ ಅನ್ವಯ, ಭವಿಷ್ಯದಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಎದುರಾದರೂ ಅದರ ನಿಯಂತ್ರಣಕ್ಕಾಗಿ ತಮ್ಮಲ್ಲಿನ ಸಂಪನ್ಮೂಲಗಳನ್ನು ಬಳಸಲು ಜಿ7 ನಾಯಕರು ಬದ್ಧರಾಗಿರುತ್ತಾರೆ ಎಂದು ಯುಕೆ ಸರ್ಕಾರ ತಿಳಿಸಿದೆ.

ಕೊರೊನಾ ಸೋಂಕು ಜಗತ್ತಿನಾದ್ಯಂತ 3.7 ಮಿಲಿಯನ್​ ಜನರ ಪ್ರಾಣ ಬಲಿಪಡೆದಿದೆ ಎಂದು ಜಾನ್​ ಹಾಪ್​​ಕಿನ್ಸ್​ ಯೂನಿವರ್ಸಿಟಿ ವರದಿ ನೀಡಿದೆ. ಇನ್ನು ಬಹುತೇಕ ಎಲ್ಲ ದೇಶಗಳ ಆರ್ಥಿಕ ಪರಿಸ್ಥಿತಿಯನ್ನು ನಾಶಮಾಡಿದೆ. ಇನ್ನೂ ಈ ಸೋಂಕಿನ ತೀವ್ರತೆ ಕಡಿಮೆಯಾಗಿಲ್ಲ. ಈ ಹೊತ್ತಲ್ಲಿ ಜಿ7 ನಾಯಕರ ಘೋಷಣೆ ತುಂಬ ಮುಖ್ಯವೆನಿಸಿದೆ.

ಇನ್ನು ಕಾರ್ಬಿಸ್​ ಬೇ ಡಿಕ್ಲೇರೇಶನ್​ ಬಗ್ಗೆ ಮಾತನಾಡಿದ ಬ್ರಿಟಿಷ್​ ಪ್ರಧಾನಮಂತ್ರಿ ಬೋರಿಸ್​ ಜಾನ್ಸನ್​, ಕೊರೊನಾ ವಿರುದ್ಧ ಹೋರಾಡಲು ಇಡೀ ಜಗತ್ತು ಒಗ್ಗಟ್ಟಾಗಿ ನಿಂತಿದೆ. ಊಹೆಗೂ ಮೀರಿದ ವೇಗದಲ್ಲಿ ಕೊವಿಡ್​ 19 ಲಸಿಕೆಯನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಆದರೆ ಮುಂದೆ ಯಾವತ್ತೂ ಇಂಥದ್ದೊಂದು ಸಾಂಕ್ರಾಮಿಕ ರೋಗ ಬಾರದಂತೆ ತಡೆಯುವ ಅವಶ್ಯಕತೆ ಇದೆ ಎಂದು ಹೇಳಿದ್ದಾರೆ.

ಕಳೆದ 18ತಿಂಗಳಲ್ಲಿ ನಾವು ಕಲಿತಿದ್ದು ಸಾಕಷ್ಟಿದೆ. ಮುಂದೆ ಇಂಥ ಪರಿಸ್ಥಿತಿ ಎದುರಾಗಲು ಬಿಡುವುದಿಲ್ಲ ಎಂಬ ಘೋಷಣೆಯೊಂದಿಗೆ ಇಂದು ವಿಶ್ವದ ಪ್ರಭಾವಿ ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಸೇರಿ ಒಟ್ಟಾಗಿದ್ದರ ಬಗ್ಗೆ ತುಂಬ ಖುಷಿಯಾಗುತ್ತಿದೆ ಎಂದು ಬೋರಿಸ್​ ತಿಳಿಸಿದ್ದಾರೆ. ಅಮೆರಿಕ, ಯುಕೆ, ಜರ್ಮನಿ, ಫ್ರಾನ್ಸ್​​, ಕೆನಡಾ, ಇಟಲಿ ಮತ್ತು ಜಪಾನ್​ ದೇಶಗಳನ್ನು ಈ ಜಿ7 ಒಳಗೊಂಡಿದ್ದು, 2021ರ ಜಿ7 ಶೃಂಗಸಭೆಯ ಅಧ್ಯಕ್ಷತೆ ಬ್ರಿಟನ್​​ದ್ದಾಗಿದೆ. ಈ ಬಾರಿ ಶೃಂಗಸಭೆಗೆ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಅತಿಥಿ ರಾಷ್ಟ್ರಗಳಾಗಿ ಆಹ್ವಾನ ನೀಡಿತ್ತು.

ಇದನ್ನೂ ಓದಿ: G7 Summit 2021: ಜಿ7 ಶೃಂಗಸಭೆಯಲ್ಲಿ ‘ಒಂದು ಭೂಮಿ, ಒಂದು ಆರೋಗ್ಯ’ ಮಂತ್ರ ಉಚ್ಛರಿಸಿದ ಪ್ರಧಾನಿ ನರೇಂದ್ರ ಮೋದಿ

ಕೊವಿಡ್ ಮೂರನೇ ಅಲೆ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ: ಲ್ಯಾನ್ಸೆಟ್ ವರದಿ

(Small groups dont rule the world says China)

Published On - 7:29 pm, Sun, 13 June 21

ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮೈಸೂರು ಇನ್ಫೋಸಿಸ್ ಕ್ಯಾಂಪಸ್‌ನಲ್ಲಿ ಮತ್ತೆ ಕಾಣಿಸಿಕೊಂಡ ಚಿರತೆ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಮಾಧ್ಯಮದವರನ್ನು ಯಾಕೆ ಆಹ್ವಾನಿಸಿಲ್ಲ ಎಂದು ಜಾರಕಿಹೊಳಿಯನ್ನು ಕೇಳಬೇಕು: ಸಿಎಂ
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗು: ಧನುಗೆ ಹನುಮಂತ ಹೀಗೆ ಹೇಳಿದ್ದೇಕೆ?
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಪ್ರಿಯಾಂಕ್ ಹೇಳಿದ್ದನ್ನು ಸಿದ್ದರಾಮಯ್ಯ ಬಹಳ ಹೊತ್ತು ಕಿವಿಗೆ ಹಾಕ್ಕೊಳಲ್ಲ!
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಅಧಿಕಾರಿಗಳ ಜೊತೆ ಕಾಫೀ ಹೀರಿದ ಮುಖಂಡರಲ್ಲಿ ಬಸನಗೌಡ ಯತ್ನಾಳ್ ಕಾಣಿಸಲಿಲ್ಲ
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಹೆಚ್ಎಂಪಿ ವೈರಸ್ ಪತ್ತೆಗೆ ಪ್ರತ್ಯೇಕವಾದ ಕಿಟ್ ಇಲ್ಲ: ದಿನೇಶ್ ಗುಂಡೂರಾವ್
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಫಿನಾಲೆ ಟಿಕೆಟ್ ಆಸೆಗೆ ಮನುಷ್ಯತ್ವ ಮರೆತ ಬಿಗ್ ಬಾಸ್ ಸ್ಪರ್ಧಿಗಳು
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಪ್ರಶ್ನೆಯನ್ನು ಸಿದ್ದರಾಮಯ್ಯ ಇಲ್ಲವೇ ಶಿವಕುಮಾರ್​​ರನ್ನು ಕೇಳಬೇಕು: ಸತೀಶ್
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ಸಫಾರಿ ವೇಳೆ ಜೀಪ್​ನಿಂದ ಘೇಂಡಾಮೃಗದ ಮುಂದೆ ಬಿದ್ದ ತಾಯಿ-ಮಗಳು; ಆಮೇಲೇನಾಯ್ತು
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ