ಮನುಷ್ಯತ್ವದಲ್ಲಿ ಅದೆಷ್ಟು ಸೌಂದರ್ಯವಿದೆ ?!-ಜಿಂಕೆ ಮರಿಯನ್ನು ಯೋಧ ರಕ್ಷಿಸಿದ ಈ ವಿಡಿಯೋ ನೋಡಿದ್ರೆ ಯಾರಿಗಾದ್ರೂ ಹಾಗೇ ಅನ್ಸತ್ತೆ..
ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್ಗಳ ವಿಡಿಯೋವನ್ನು @hopkinsBRFC21 ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಲಾಗಿದೆ.
ಕೆಲವರಿಗೆ ಪ್ರಾಣಿಗಳೆಡೆಗೆ ತುಸು ಜಾಸ್ತಿಯೇ ಪ್ರೀತಿ ಇರುತ್ತದೆ.. ಅವು ಸಾಕುಪ್ರಾಣಿಗಳಿರಲಿ, ಕಾಡು ಪ್ರಾಣಿಗಳಿರಲಿ. ಮನುಷ್ಯರ ಪ್ರಾಣಿಪ್ರೀತಿಗೆ ಸಾಕ್ಷಿಯಾದ ಹಲವು ವಿಡಿಯೋಗಳು ಈಗಾಗಲೇ ಇಂಟರ್ನೆಟ್ನಲ್ಲಿ ಸಾಕಷ್ಟು ವೈರಲ್ ಆಗಿದೆ. ಹಾಗೇ ಇದೀಗ ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆಯ ಮರಿಯನ್ನು ಯೋಧನೊಬ್ಬ ಕಾಪಾಡಿದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರಂತೂ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.
ಇದು ಭಾರತದ್ದಲ್ಲ ಎಂದು ಆ ಯೋಧನನ್ನು ನೋಡಿದರೆ ಗೊತ್ತಾಗುತ್ತದೆ. ಆದರೆ ನಡೆದಿದ್ದು ಎಲ್ಲಿ ಎಂಬುದು ಗೊತ್ತಾಗಿಲ್ಲ. 31 ಸೆಕೆಂಡ್ಗಳ ವಿಡಿಯೋವನ್ನು @hopkinsBRFC21 ಎಂಬ ಇನ್ಸ್ಟಾಗ್ರಾಂ ಪೇಜ್ನಲ್ಲಿ ಶೇರ್ ಮಾಡಲಾಗಿದೆ. ಅದೊಂದು ದೊಡ್ಡ ಸರೋವರ. ಆ ನೀರಿನಲ್ಲಿ ದೊಡ್ಡದಾದ ಮರವೊಂದು ಅಡ್ಡ ಮಲಗಿದೆ.. ಅದರ ಬಳಿಯೇ ಪುಟ್ಟ ಜಿಂಕೆ ಮರಿಯೊಂದು ನೀರಿನಲ್ಲಿ ಮುಳುಗುತ್ತಿತ್ತು. ಅದನ್ನು ನೋಡಿದ ಯೋಧ, ಆ ಮರದೇ ಮೇಲೆ ಹೋಗಿ, ಬೋರಲಾಗಿ ಮಲಗಿ ಜಿಂಕೆ ಮರಿಯನ್ನು ನೀರಿನಿಂದ ಎತ್ತಿ, ದಡಕ್ಕೆ ಕರೆದುಕೊಂಡು ಬಂದಿದ್ದನ್ನು ವಿಡಿಯೋದಲ್ಲಿ ನೋಡಬಹುದು. ವಿಡಿಯೋ ಶೇರ್ ಮಾಡಿದ ಇನ್ಸ್ಟಾಗ್ರಾಂ ಬಳಕೆದಾರ, ಮನುಷ್ಯತ್ವ ನಿಜಕ್ಕೂ ಸುಂದರ ಎಂದು ಕ್ಯಾಪ್ಷನ್ ಬರೆದಿದ್ದಾರೆ.
ವಿಡಿಯೋವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ. ಜಿಂಕೆ ಮರಿಯ ಜೀವ ಉಳಿಸಿದ ಯೋಧನನ್ನು ಹೊಗಳಿದ್ದಾರೆ. ಅದನ್ನು ರಕ್ಷಿಸಿದ್ದನ್ನು ನೋಡಿ ತುಂಬ ಸಂತೋಷವಾಯಿತು, ಭೂಮಿ ಮೇಲೆ ಒಳ್ಳೆಯ ಜನರಿದ್ದಾರೆ ಎಂಬುದಕ್ಕೆ ಈ ಯೋಧ ಸಾಕ್ಷಿ ಎಂಬಿತ್ಯಾದಿ ಕಾಮೆಂಟ್ಗಳನ್ನೂ ಬರೆದಿದ್ದಾರೆ.
Soldier rushes to rescue a fawn from drowning, humanity is beautiful ❤️ pic.twitter.com/IlT3aP8o7x
— ❤️ A page to make you smile ❤️ (@hopkinsBRFC21) June 11, 2021
ಇದನ್ನೂ ಓದಿ: Sanchari Vijay: ಸಂಚಾರಿ ವಿಜಯ್ ಮೆದುಳಿನ ಕೆಲಸಗಳು ನಿಂತಿದೆ; ಅಪೋಲೋ ವೈದ್ಯರಿಂದ ಆತಂಕಕಾರಿ ಮಾಹಿತಿ