ರಕ್ತದಾನ ಮಾಡಲು ರಾಜವಂಶಸ್ಥ ಯದುವೀರ್ ಕರೆ
ಮೈಸೂರಿನ ಕೆಲ ಸೇವಾ ಸಂಸ್ಥೆಗಳು ಒಟ್ಟಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. ನಾಗರೀಕರು ಸಮಾಜದ ಸುಧಾರಣೆಗಾಗಿ ಹಾಗೂ ಈ ಬಿಕ್ಕಟ್ಟಿನ ಕಾಲದಲ್ಲಿ ಎಲ್ಲರೂ ಮುಂದೆ ಬಂದು ರಕ್ತವನ್ನು ದಾನ ಮಾಡಿ ಎಂದು ಮನವಿ ಮಾಡಿದ್ದಾರೆ.
ಮೈಸೂರು: ರಕ್ತದಾನ ಮಾಡಿ ಎಂದು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕರೆ ನೀಡಿದ್ದಾರೆ. ಕಠಿಣ ಸಂದರ್ಭ ಇದಾಗಿದೆ. ಇಂತಹ ಸಮಯದಲ್ಲಿ ಎಲ್ಲರು ಕೈಜೋಡಿಸಿ. ಈ ಸಂದರ್ಭದಲ್ಲಿ ರಕ್ತದಾನ ಮಾಡಿ ಎಂದು ಯದುವೀರ್ ಮನವಿ ಮಾಡಿದ್ದಾರೆ. ಮೈಸೂರಿನ ಕೆಲ ಸೇವಾ ಸಂಸ್ಥೆಗಳು ಒಟ್ಟಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. ನಾಗರೀಕರು ಸಮಾಜದ ಸುಧಾರಣೆಗಾಗಿ ಹಾಗೂ ಈ ಬಿಕ್ಕಟ್ಟಿನ ಕಾಲದಲ್ಲಿ ಎಲ್ಲರೂ ಮುಂದೆ ಬಂದು ರಕ್ತವನ್ನು ದಾನ ಮಾಡಿ. ವಿಶೇಷವಾಗಿ ಯುವಕರು ಈ ಬಗ್ಗೆ ಹೆಚ್ಚು ಗಮನಹರಿಸಬೇಕು ಎಂದು ವೀಡಿಯೋ ಮೂಲಕ ಮನವಿ ಮಾಡಿದ್ದಾರೆ. ಶಾಸಕ ಡಿ.ಎಸ್.ಸುರೇಶ್ ಡ್ಯಾನ್ಸ್ ಚಿಕ್ಕಮಗಳೂರು: ಕೊವಿಡ್ ಕೇರ್ ಸೆಂಟರ್ನಲ್ಲಿ ಶಾಸಕ ಡಿ.ಎಸ್.ಸುರೇಶ್ ಡ್ಯಾನ್ಸ್ ಮಾಡಿದ್ದಾರೆ. ಸೋಂಕಿತರಿಗೆ ಧೈರ್ಯ ತುಂಬಲು ಸೋಂಕಿತ ಬಾಲಕಿ ಜೊತೆ ಶಾಸಕರು ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ. ಜಿಲ್ಲೆಯ ತರೀಕೆರೆ ತಾಲೂಕಿನ ಬಾವಿಕೆರೆ ಗ್ರಾಮದಲ್ಲಿ ಹಾಡು ಹೇಳುತ್ತಾ ಶಾಸಕ ನೃತ್ಯ ಮಾಡಿದ್ದಾರೆ.
ಬಾವಿಕೆರೆ ಕೋವಿಡ್ ಕೇರ್ ಸೆಂಟರ್ನಲ್ಲಿ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಶಾಸಕ ಕಾಲ ಮತ್ತೊಮ್ಮೆ ನಮಗಾಗಿ ಬಂತು ಎಂಬ ಹಾಡನ್ನು ಹಾಡಿದ್ದಾರೆ. ಜೊತೆಗೆ ಯಾರೇ ನೀನು ರೋಜಾ ಹೂವೇ ಹಾಡನ್ನು ಹಾಡಿಕೊಂಡು ಹೆಜ್ಜೆ ಹಾಕಿದ್ದಾರೆ. ಸೋಂಕಿತ ಬಾಲಕಿ ಶಾಸಕರ ಜೊತೆ ಕುಣಿದು ಕುಪ್ಪಳಿಸಿದ್ದಾಳೆ. ಈ ವೇಳೆ ಶಾಸಕರಿಗೆ ಅಧಿಕಾರಿಗಳು ಸಾಥ್ ನೀಡಿದ್ದಾರೆ.
ಇದನ್ನೂ ಓದಿ
ನಟ ದರ್ಶನ್ ಮನವಿಗೆ ಓಗೊಟ್ಟ ಜನತೆ; ಒಂದೇ ವಾರದಲ್ಲಿ 1 ಕೋಟಿ ರೂಪಾಯಿ ಮೃಗಾಲಯ ಪ್ರಾಧಿಕಾರದ ಖಾತೆಗೆ ಸಂದಾಯ
ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್, ಈಶಾನ್ಯದಲ್ಲಿ ಚಂಡಮಾರುತ
(Yaduveer has requested to donate blood in mysuru)