ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ

Weather 2021 update: ಮುಂಗಾರು ತವರು ಕೇರಳದಲ್ಲಿ ಜೂನ್​ 11- 15 ರ ಮಧ್ಯೆ ಭಾರೀ ಮಳೆಯಾಗಲಿದೆ. ಕೊಂಕಣ ಭಾಗದಲ್ಲಿ ಮತ್ತು ಗೋವಾದಲ್ಲಿಯೂ ಮಳೆಯಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ತುಂಬಾ ಜೋರು ಮಳೆಯಾಗಲಿದೆ.

ದೇಶಾದ್ಯಂತ ಮುಂಗಾರು ಜೋರು: ಮುಂಗಾರು ತವರು ಕೇರಳದಲ್ಲಿ ಮಳೆ ಮಳೆ, ಮುಂಬೈನಲ್ಲಿ ಹೈಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ
Monsoon update: ದೇಶಾದ್ಯಂತ ಮುಂಗಾರು ಜೋರು; ಮುಂಗಾರು ತವರು ಕೇರಳದಲ್ಲಿ ಭಾರೀ ಮಳೆ, ಮುಂಬೈನಲ್ಲಿ ಹೈ ಅಲರ್ಟ್​, ಈಶಾನ್ಯದಲ್ಲಿ ಚಂಡಮಾರುತ
Follow us
ಸಾಧು ಶ್ರೀನಾಥ್​
|

Updated on:Jun 12, 2021 | 10:37 AM

ಮುಂಬೈ: ದೇಶಾದ್ಯಂತ ಮುಂಗಾರು ಮಳೆ ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈ ಥಂಡಾ ಹೊಡೆಯುತ್ತಿದೆ. ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮಳೆ ಉತ್ತಮವಾಗಿದ್ದು, ದಕ್ಷಿಣದಲ್ಲಿ ಆರಂಭವಾಗಿ ಪೂರ್ವ ಭಾರತ ಮತ್ತು ಮಧ್ಯ ಭಾರತದ ಸುತ್ತಮುತ್ತ ಬಿರುಬೀಸುತ್ತಿದೆ. ಭಾರತೀಯ ಹವಾಮಾನ ಇಲಾಖೆ (India Meteorological Department -IMD) ವರದಿಗಳ ಪ್ರಕಾರ ಭಾರತದ ಪೂರ್ವ-ಮಧ್ಯ ಭಾಗದಲ್ಲಿ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಚಂಡಮಾರುತಗಳ ಸುಳಿ ಎದ್ದಿದ್ದು, ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್​ಗಢ ರಾಜ್ಯಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ.

ಇನ್ನು ಮುಂಗಾರು ತವರು ಕೇರಳದಲ್ಲಿ ಜೂನ್​ 11- 15 ರ ಮಧ್ಯೆ ಭಾರೀ ಮಳೆಯಾಗಲಿದೆ. ಕೊಂಕಣ ಭಾಗದಲ್ಲಿ ಮತ್ತು ಗೋವಾದಲ್ಲಿಯೂ ಮಳೆಯಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ತುಂಬಾ ಜೋರು ಮಳೆಯಾಗಲಿದೆ.

ಥಂಡಾ ಹೊಡೆಯುತ್ತಿದೆ ವಾಣಿಜ್ಯ ನಗರಿ ಮುಂಬೈ: ಮುಂಗಾರು ಪ್ರಭಾವ ಮುಂಬೈನಲ್ಲಿ ಹೈ ಅಲರ್ಟ್​​​ನಲ್ಲಿದೆ. ನಾಳೆ ಭಾನುವಾರ ಮತ್ತು ಸೋಮವಾರ ಮುಂಬೈ ಮತ್ತು ಸುತ್ತಮುತ್ತ ಭಾಗಗಳಲ್ಲಿ ವಿಪರೀತ ಮಳೆಯಾಗಲಿದೆ. ಹಾಗಾಗಿ ನೌಕಾ ಪಡೆ, ಕೋಸ್ಟ್​ ಗಾರ್ಡ್​ ಮತ್ತು ಎನ್​ಡಿಆರ್​​ಎಫ್ ತಂಡಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಬೃಹನ್ಮುಂಬೈ ಮುನ್ಸಿಪಲ್​ ಕಾರ್ಪೊರೇಶನ್​ ​​(Brihanmumbai Municipal Corporation -BMC) ಸೂಚನೆ ನೀಡಿದೆ.

BMC ಯ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು. ಅಗ್ನಿಶಾಮಕ ದಳಕ್ಕೂ ಎಚ್ಚರ ಸ್ಥಿತಿಯಲ್ಲಿರುವಂತೆ ಹೇಳಲಾಗಿದೆ. ಇನ್ನು ಸಂಚಾರಕ್ಕಾಗಿ ಬೆಸ್ಟ್​ ಮತ್ತು ವಿದ್ಯುತ್​ ಸಂಚಾರಕ್ಕಾಗಿ ಅದಾನಿ ವಿದ್ಯುತ್​ ಸಬ್​ಸ್ಟೇಷನ್​​ಗಳಿಗೂ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಮಹಾರಾಷ್ಟ್ರದ ರಾಯಘಡ ಮತ್ತು ರತ್ನಗಿರಿ ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬೈ, ಥಾಣೆ, ರಾಯಘಡ ಮತ್ತು ರತ್ನಗಿರಿಯಲ್ಲಿ ಮುಂದಿನ 24 ಗಂಟೆಯಲ್ಲಿ 21 ಸೆಂ.ಮೀ. ಅತೀವ ಮಳೆ ಬೀಳಲಿದೆ.

ಜೊತೆಗೆ ಉತ್ತರ ಪ್ರದೇಶ ಅನೇಕ ಜಿಲ್ಲೆಗಳಲ್ಲಿ ಇನ್ನೇನು ಮಳೆ ಶುರುವಾಗಲಿದೆ. ಸಿಕ್ಕಿಂ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ತೆಲಂಗಾಣದವರೆಗೂ ವಾಯುಭಾರ ಕುಸಿತದ ಪ್ರಭಾವ ಬೀರಲಿದೆ. ಇದರಿಂದ ಈಗಾಗಲೇ ಮಳೆ ಬೀಳುತ್ತಿದ್ದು, ಮುಂದೆ ಹೆಚ್ಚಾಗಲಿದೆ.

ಬಿಹಾರ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮುಂಗಾರು ಮಳೆ ಬೀಳಲಿದೆ. ನಾಳೆ, ನಾಳಿದ್ದು ಈ ಮೂರೂ ರಾಜ್ಯಗಳಲ್ಲಿ ಮುಂಗಾರು ಅರ್ಭಟ ಜೋರಾಗಿರಲಿದೆ.

Monsoon 2021: ಈ ಬಾರಿ ಮುಂಗಾರು ಸೂಪರು; ಕೊರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?

(Monsoon 2021 advances in India very heavy rainfall likely in many states IMD Issued High Alert Issued for Mumbai)

Published On - 10:34 am, Sat, 12 June 21

ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ