Monsoon 2021: ಈ ಬಾರಿ ಮುಂಗಾರು ಸೂಪರು; ಕೊರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?

Rural Economy: ಭರ್ಜರಿ ಮುಂಗಾರು ಅಷ್ಟೇ ಅಲ್ಲ; ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿ ದೀಪಾವಳಿ ವರೆಗೂ ಉಚಿತ ಆಹಾರ ಸಾಮಗ್ರಿ ವಿತರಿಸುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಸುಮಾರು 80 ಕೋಟಿ ಫಲಾನುಭವಿಗಳು ಆಹಾರ ಉತ್ಪನ್ನಗಳ ಹೊರತಾಗಿ ಇತರೆ ಸರಕುಗಳ ಖರೀದಿಗೆ ಮುಂದಾಗುತ್ತಾರೆ ಎಂಬುದು ಉತ್ಪಾದನಾ ಕಂಪನಿಗಳ ಎಣಿಕೆಯಾಗಿದೆ. ಇದೀಗ ದೇಶ ಅನ್​ ಲಾಕ್​​ ನತ್ತ ಮುಖ ಮಾಡಿರುವುದರಿಂದ ಆರ್ಥಿಕ ಚಟುವಟಿಕೆಗಳೂ ಸಹ ಗರಿಗೆದರಲಿವೆ ಎಂಬ ಆಶಾಭಾವ ಎಲ್ಲೆಡೆ ಮನೆ ಮಾಡಿವೆ.

Monsoon 2021: ಈ ಬಾರಿ ಮುಂಗಾರು ಸೂಪರು; ಕೊರೊನಾದಿಂದ ನೆಲಕಚ್ಚಿರುವ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?
Monsoon 2021: ಈ ಬಾರಿ ಮುಂಗಾರು ಸೂಪರು: ಕೊರೊನಾದಿಂದ ನೆಲಕಚ್ಚಿರುವ ದೇಶದ ಆರ್ಥಿಕತೆಗೆ ಮುಂಗಾರು ಆಸರೆಯಾಗಬಲ್ಲದಾ?
Follow us
ಸಾಧು ಶ್ರೀನಾಥ್​
|

Updated on: Jun 11, 2021 | 10:26 AM

ದೆಹಲಿ: ಇಡೀ ಜಗತ್ತು ಸೇರಿದಂತೆ ಭಾರತದಲ್ಲಿಯೂ ಕೊರೊನಾ ಪೆಡಂಭೂತದಿಂದ ಆರ್ಥಿಕತೆ ನೆಲಕಚ್ಚಿರುವಾಗ ಮುಂಗಾರು ಮಳೆಯಾದರೂ ಆಸರೆಯಾಗಬಲ್ಲದಾ? ಎಂದು ರೈತಾಪಿ ವರ್ಗ ಸೇರಿದಂತೆ ಇಡೀ ದೇಶದ ಉದ್ಯಮ ತಲೆಯ ಮೇಲೆ ಕೈಹೊತ್ತು ಕುಳಿತು ಚಿಂತಿಸುತ್ತಿದೆ. ಮಹಾ ಸಾಂಕ್ರಾಮಿಕದ ಕಡುಕಷ್ಟಗಳನ್ನು ಭರ್ಜರಿ ಮುಂಗಾರು ನಿವಾರಿಸಬಲ್ಲದೇ? ಎಂದು ಉದ್ಯಮ ವಲಯ ಪ್ರಶ್ನಿಸುತ್ತಿದೆ.

ಭರ್ಜರಿ ಮುಂಗಾರು ಮಳೆಯಾಗುವ ನಿರೀಕ್ಷೆ ಅಪಾರವಾಗಿದೆ. ಭಾರತೀಯ ಹವಾಮಾನ ಇಲಾಖೆಯೂ (India Meteorological Department – IMD) ಈ ಬಾರಿ ಮುಂಗಾರು ಸೂಪರು ಅಂತಿದೆ. ಗ್ರಾಮೀಣ ಭಾರತದಲ್ಲಿ ಉತ್ತಮ ಮಳೆ-ಬೆಳೆಯಾಗಿ ಫಸಲು ಭರ್ಜರಿಯಾಗಲಿದೆ ಅನ್ನುತ್ತಿದೆ ಹವಾಮಾನ ವರದಿಗಳು. ಇದರಿಂದ ಗ್ರಾಮೀಣ ಭಾರತ ಸಂಪದ್ಭರಿತವಾಗಿ ನಳನಳಿಸಿದರೆ ಬೇಡಿಕೆ ಹೆಚ್ಚಾಗಲಿದೆ ಎಂಬ ಗ್ರೀನ್​ ಸಿಗ್ನಲ್​ ಕಂಪನಿಗಳಿಗೆ (Corporate India) ದೊರೆತಿದೆ. ಆದರೆ ಕೊರೊನಾದ ಎರಡು-ಮೂರು ಅಲೆಗಳೇ ಚಿಂತಾಜನಕಕವಾಗಿರುವುದು. ಕೊರೊನಾ ಎರಡಾಗಿ, ಮೂರನೆಯದು ಹೆಚ್ಚು ಕಾಟ ಕೊಟ್ಟರೆ ಗತಿಯೇನು ಎಂಬುದು ಉದ್ಯಮ ವಲಯದ ಚಿಂತೆಯನ್ನು ಹೆಚ್ಚಿಸಿದೆ.

ದೇಶದ ಅನೇಕ ಭಾಗಗಳಲ್ಲಿ ಅದಾಗಲೇ ಮೊದಲು ಚಂಡಮಾರುತಗಳು, ಅದರ ಜೊತೆಗೆ ಈಗ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿರುವುದರಿಂದ ಬಳಕೆ ಪ್ರಮಾಣ ಅಧಿಕಗೊಳ್ಳಲಿದೆ ಎಂದು ಕಂಪನಿಗಳು ಕಾದುಕುಳಿತಿವೆ. ಜೂನ್​ 1ರಿಂದ ಇದುವರೆಗೂ ವಾಡಿಕೆಗಿಂತ ಶೇ. 21 ರಷ್ಟು ಮಳೆಯಾಗಿದೆ. ಮುಂದೆಯೂ ವಾಡಿಕೆಯಂತೆ ಉತ್ತಮ ಮಳೆಯಾಗಲಿದೆ ಎಂದು IMD ಸೇರಿದಂತೆ ಖಾಸಗಿ Skymet ಹವಾಮಾನ ಅಂದಾಜುದಾರರು ಹೇಳಿದ್ದಾರೆ.

ಇದು ಗ್ರಾಮೀಣ ಭಾರತದ ಆರ್ಥಿಕತೆಗೆ ಚೇತೋಹಾರಿಯಾಗಿದೆ. ಅದರ ‘ಅರ್ಥ’ ಗ್ರಾಹಕ ಬಳಕೆ ಸರಕುಗಳು, ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್​​ಗಳಿಗೆ ಬೇಡಿಕೆ ಹೆಚ್ಚಾಗಲಿದೆ ಎಂಬುದು ಉತ್ಪಾದನಾ ಕಂಪನಿಗಳು ಲೆಕ್ಕಾಚಾರವಾಗಿದೆ. ಇದನ್ನರಿತು ಅನೇಕ FMCG ಗ್ರಾಹಕ ಸರಕು ಕಂಪನಿಗಳು ಗ್ರಾಮೀಣ ಭಾಗಗಳತ್ತ ಹೆಜ್ಜೆ ಹಾಕಲು ಹಾತೊರೆಯುತ್ತಿವೆ. COVID-19 ಎರಡು ಮೂರು ಅಲೆಗಳು ಸ್ವಲ್ಪಮಟ್ಟಿಗೆ ಅಡಚಣೆಯೊಡ್ಡಿದರೂ ದೇಶದ ಗ್ರಾಮೀಣ ಭಾಗ ಕಂಪನಿಗಳಿಗೆ ಜೀವಸೆಲೆಯಾಗಲಿದೆ ಎನ್ನುತ್ತಿವೆ ಕಾರ್ಪೊರೇಟ್​ ವಲಯ.

ಬರೀ ಭರ್ಜರಿ ಮುಂಗಾರು ಅಷ್ಟೇ ಅಲ್ಲ; ಇತ್ತೀಚೆಗೆ ಸರ್ಕಾರಗಳು ಸಾಕಷ್ಟು ಆರ್ಥಿಕ ಪ್ಯಾಕೇಜ್​ಗಳನ್ನು ಘೋಷಿಸಿವೆ. ಇದೂ ಆರ್ಥಿಕ ಚೇತರಿಗೆ ನೆರವಾಗಲಿದೆ. ಇತ್ತೀಚೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿ ದೀಪಾವಳಿ ವರೆಗೂ ಉಚಿತ ಆಹಾರ ಸಾಮಗ್ರಿ ವಿತರಿಸುವುದಾಗಿ ಪ್ರಕಟಿಸಿದ್ದಾರೆ. ಇದರಿಂದ ಸುಮಾರು 80 ಕೋಟಿ ಫಲಾನುಭವಿಗಳು ಆಹಾರ ಉತ್ಪನ್ನಗಳ ಹೊರತಾಗಿ ಇತರೆ ಸರಕುಗಳ ಖರೀದಿಗೆ ಮುಂದಾಗುತ್ತಾರೆ ಎಂಬುದು ಉತ್ಪಾದನಾ ಕಂಪನಿಗಳ ಎಣಿಕೆಯಾಗಿದೆ. ಇದೀಗ ದೇಶ ಅನ್​ ಲಾಕ್​​ ನತ್ತ ಮುಖ ಮಾಡಿರುವುದರಿಂದ ಆರ್ಥಿಕ ಚಟುವಟಿಕೆಳೂ ಸಹ ಗರಿಗೆದರಲಿವೆ ಎಂಬ ಆಶಾಭಾವ ಎಲ್ಲೆಡೆ ಮನೆ ಮಾಡಿವೆ.

(good Monsoon 2021 to increase FMCG rural consumption despite coronavirus pandemic havoc)

Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಒಂದು ವಾರ ಗುಡುಗು ಸಿಡಿಲು ಸಹಿತ ಮಳೆ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ