Petrol Price Hike: ಇಂಧನ ದರ ಏರಿಕೆಯ ವಿರುದ್ಧ ಇಂದು ಕಾಂಗ್ರೆಸ್ನಿಂದ ದೇಶವ್ಯಾಪಿ ಪ್ರತಿಭಟನೆ
Congress Protest: ಆಡಳಿತವು ಸೂಚಿಸಿದ ಎಲ್ಲಾ ಕೊವಿಡ್ ಸುರಕ್ಷತಾ ಪ್ರೊಟಿಕಾಲ್ಗಳಿಗೆ ಅನುಸಾರವಾಗಿ ಪಕ್ಷದ ಸ್ಥಳಿಯ ಘಟನಕಗಳು ಪ್ರತಿಭಟನೆ ಆಯೋಜಿಸಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕಡ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ದೆಹಲಿ: ಮುಂಬೈ ಸೇರಿದಂತೆ ಹಲವಾರು ನಗರಗಳಲ್ಲಿ ಲೀಟರ್ ಪೆಟ್ರೋಲ್ ದರ 100ರ ಗಡಿ ದಾಟಿ ಮುನ್ನುಗ್ಗಿದೆ. ಇಂಧನ ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಇಂದು(ಶುಕ್ರವಾರ) ದೇಶಾದ್ಯಂತ ಪೆಟ್ರೋಲ್ ಪಂಪ್ಗಳಲ್ಲಿ ಸಾಂಕೇತಿಕ ಪ್ರತಿಭಟನೆ ಕೈಗೊಂಡಿದೆ. ಆಡಳಿತವು ಸೂಚಿಸಿದ ಎಲ್ಲಾ ಕೊವಿಡ್ ಸುರಕ್ಷತಾ ಪ್ರೊಟಿಕಾಲ್ಗಳಿಗೆ ಅನುಸಾರವಾಗಿ ಪಕ್ಷದ ಸ್ಥಳೀಯ ಘಟನಕಗಳು ಪ್ರತಿಭಟನೆ ಹಮ್ಮಿಕೊಳ್ಳಲಿದೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಡುಗೆ ಅನಿಲ ಬೆಲೆಗಳು ಹೆಚ್ಚಾಗಿರುವುದರಿಂದ ಜನಸಾಮಾನ್ಯರಿಗೆ ಎದುರಾದ ಸಮಸ್ಯೆಗಳನ್ನು ಎತ್ತಿತೋರಿಸಲು ಮತ್ತು ಸಾರ್ವಜನಿಕ ಹಿತಾಸಕ್ತಿ ಬಯಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.
ಇದರ ಜತೆಗೆ ಆರ್ಥಿಕ ಕುಸಿತ, ಹೆಚ್ಚುತ್ತಿರುವ ನಿರುದ್ಯೋಗ ಮತ್ತು ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದೆ. ಕೇಂದ್ರದಲ್ಲಿ ಜಿಜೆಪಿ ನೇತೃತ್ವ ಸರ್ಕಾರದ ನೀತಿಗಳಿಂದಾಗಿ ದೇಶದ ಜನರು ಕಳೆದ 15 ತಿಂಗಳುಗಳಿಂದ ಕೊವಿಡ್19 ವಿರುದ್ಧ ಹೋರಾಡುತ್ತಿದ್ದಾರೆ. ಜನಸಾಮಾನ್ಯರು ಸರಿಯಾದ ಸಮಯದಲ್ಲಿ ಔಷಧಗಳನ್ನು ಮತ್ತು ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಮತ್ತೊಂದರೆಡೆ ಆರ್ಥಿಕ ವಿಫಲತೆ ಮತ್ತು ವ್ಯಾಪಕವಾಗಿ ನಿರುದ್ಯೋಗದಿಂದ ಬಳಲುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ಸಾಮಾನ್ಯ ಜನರ ಸಮಸ್ಯೆಯ ಬಗ್ಗೆ ಸಹಾನುಭೂತಿ ತೋರಿಸುವ ಬದಲಾಗಿ ಜನರ ಸಂಕಷ್ಟಗಳನ್ನು ಕಡೆಗಣಿಸಲು ಮತ್ತು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಮೂಲಕ ನೋವುಂಟು ಮಾಡಲು ಬಿಜೆಪಿ ಸರ್ಕಾರ ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ವಿಧಿಸುತ್ತಿರುವ ಭಾರೀ ಪ್ರಮಾಣದ ತೆರಿಗೆಗಳಿಂದ ದೇಶದ ಅನೇಕ ಕಡೆಗಳಲ್ಲಿ ಲೀಟರ್ ಪೆಟ್ರೋಲ್ ದರ 100ರ ಗಡಿ ದಾಟಿದೆ. ಇನ್ನೇನು ಡೀಸೆಲ್ ದರವೂ ಕೂಡಾ 100ಕ್ಕೆ ತಲುಪುವ ಹಾದಿಯಲ್ಲಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪೆಟ್ರೋಲ್, ಡೀಸೆಲ್ ಬೆಲೆ ಇಂದು ಶುಕ್ರವಾರ ದರ ಹೆಚ್ಚಳದ ಬಳಿಕ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 95.85 ರೂಪಾಯಿಗೆ ಏರಿಕೆ ಆಗಿದೆ. ಲೀಟರ್ ಡೀಸೆಲ್ ದರ 86.75 ರೂಪಾಯಿ ಆಗಿದೆ. ವಾಣಿಜ್ಯ ನಗರಿ ಮುಂಬೈನಲ್ಲಿ ಲೀಟರ್ ಪೆಟ್ರೋಲ್ ದರ 102.04 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 94.15 ರೂಪಾಯಿಗೆ ಏರಿಕೆಯಾಗಿದೆ.
ಇನ್ನು, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಅಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ಇನ್ನು ಕೆಲವೆಡೆ ಲೀಟರ್ ಪೆಟ್ರೋಲ್ ದರ ಶತಕ ಬಾರಿಸಿ ಮುನ್ನುಗ್ಗುತ್ತಿದೆ. ರಾಜಸ್ಥಾನದ ಗಂಗಾನಗರ್ನಲ್ಲಿ ಲೀಟರ್ ಪೆಟ್ರೋಲ್ ದರ 106.94 ರೂಪಾಯಿ ಇದ್ದು, ಅತೀ ಗರಿಷ್ಠ ಮಟ್ಟದಲ್ಲಿದೆ. ಹಾಗೆಯೇ ಲೀಟರ್ ಡೀಸೆಲ್ ದರ 99.80 ರೂಪಾಯಿಗೆ ಏರಿಕೆ ಆಗಿದ್ದು, ಇನ್ನೇನೂ ಡೀಸೆಲ್ ದರವೂ ಕೂಡಾ ಶತಕ ಬಾರಿಸಲು ಗಡಿ ಅಂಚಿನಲ್ಲಿದೆ.
ಇದನ್ನೂ ಓದಿ: