Petrol Price Today: ಮತ್ತೆ ಏರಿಕೆಯತ್ತ ಪೆಟ್ರೋಲ್, ಡೀಸೆಲ್ ದರ; ಕೊರೊನಾ ಸಂಕಷ್ಟದ ನಡುವೆಯೂ ಜನರಿಗೆ ಗಾಯದ ಮೇಲೆ ಬರೆ
Petrol Diesel Rate Today: ಪ್ರಮುಖ ಮೆಟ್ರೋ ಸಿಟಿಗಳಲ್ಲಿ ವಾಣಿಜ್ಯ ನಗರಿ ಮುಂಬೈ ಮೇಲುಗೈ ಸಾಧಿಸಿದೆ. ಅತಿ ಗರಿಷ್ಟ ಮಟ್ಟದಲ್ಲಿ ಲೀಟರ್ ಪೆಟ್ರೋಲ್ ದರವಿದ್ದು 102.04 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಲೀಟರ್ ಡೀಸೆಲ್ ದರ 94.15 ರೂಪಾಯಿ ಆಗಿದೆ.
ದೆಹಲಿ: ಒಂದು ದಿನದ ವಿರಾಮದ ಬಳಿಕ ಇಂದು ( ಶುಕ್ರವಾರ, ಜೂನ್ 11) ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಆಗಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 29 ಪೈಸೆ ಹೆಚ್ಚಳದ ಬಳಿಕ 95.85 ರೂಪಾಯಿಗೆ ಏರಿಕೆಯಾಗಿದೆ. ಹಾಗೆಯೇ ಲೀಟರ್ ಡೀಸೆಲ್ ದರ 28 ಪೈಸೆ ಹೆಚ್ಚಳದ ಬಳಿಕ 86.75 ರೂಪಾಯಿಗೆ ಏರಿದೆ. ಕಳೆದ ತಿಂಗಳು ಮೇ 4ರಿಂದ ಏರಿಕೆ ಕಾಣಲು ಪ್ರಾರಂಭಿಸಿದ ಇಂಧನ ದರ ಇಲ್ಲಿಯವರೆಗೂ ಏರುತ್ತಲೇ ಇದೆ. ಕಳೆದ ತಿಂಗಳಿನಿಂದ ಈವರೆಗೆ ತೈಲ ದರ ಒಟ್ಟು 23 ಬಾರಿ ಏರಿಕೆ ಕಂಡಿದ್ದರಿಂದ ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ದರ 5.30 ರೂಪಾಯಿ ಹೆಚ್ಚಳವಾಗಿದೆ. ಹಾಗೂ ಲೀಟರ್ ಡೀಸೆಲ್ ದರ 5.84 ರೂಪಾಯಿ ಏರಿಕೆ ಆಗಿದೆ.
ಕೊರೊನಾ ಸಂಕಷ್ಟದಿಂದ ಜನರು ಚೇತರಿಸುಕೊಳ್ಳುವಷ್ಟರಲ್ಲಿ ಸದ್ದಿಲ್ಲದೇ ಪೆಟ್ರೋಲ್, ಡೀಸೆಲ್ ದರ ಗರಿಷ್ಟ ಮಟ್ಟ ತಲುಪಿಬಿಟ್ಟಿದೆ. ದೈನದಿಂನ ಚಟುವಟಿಕೆಯಲ್ಲಿ ಅತ್ಯವಶ್ಯಕವಾದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಂಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ತಿಂಗಳಿನಿಂದ ಪೆಟ್ರೋಲ್ ಬೆಲೆ ನಿರಂತರ ಏರುತ್ತಲೇ ಇದೆ, ಇಳಿಕೆ ಕಾಣುವುದು ಯಾವಾಗ ಎಂಬುದೇ ಗ್ರಾಹಕರ ಪ್ರಶ್ನೆ.
ಪ್ರಮುಖ ಮೆಟ್ರೋ ಸಿಟಿಗಳಲ್ಲಿ ವಾಣಿಜ್ಯ ನಗರಿ ಮುಂಬೈ ಮೇಲುಗೈ ಸಾಧಿಸಿದೆ. ಅತಿ ಗರಿಷ್ಟ ಮಟ್ಟದಲ್ಲಿ ಲೀಟರ್ ಪೆಟ್ರೋಲ್ ದರವಿದ್ದು 102.04 ರೂಪಾಯಿಗೆ ಏರಿಕೆ ಆಗಿದೆ. ಹಾಗೆಯೇ ಲೀಟರ್ ಡೀಸೆಲ್ ದರ 94.15 ರೂಪಾಯಿಗೆ ಏರಿದೆ. ರಾಜಸ್ಥಾನದ ಶ್ರೀಗಂಗನಗರ್ನಲ್ಲಿ ಅತಿ ಹೆಚ್ಚು ಲೀಟರ್ ಪೆಟ್ರೋಲ್ ಬೆಲೆ ಇದ್ದು, 106.94 ರೂಪಾಯಿಗೆ ಏರಿಕೆ ಆಗಿದೆ. ಅದೇ ರೀತಿ ಲೀಟರ್ ಡೀಸೆಲ್ ದರ 99.80 ರೂಪಾಯಿಗೆ ಏರಿಕೆ ಆಗಿದ್ದು, ಇನ್ನೇನು ಕೆಲ ಪೈಸೆಗಳಷ್ಟು ಹೆಚ್ಚಳವಾದರೆ ಡೀಸೆಲ್ ದರವೂ ಕೂಡಾ ಶತಕ ಬಾರಿಸುವ ಗಡಿಯಲ್ಲಿದೆ.
ಪೆಟ್ರೋಲ್ ದರ(ಲೀ) ಡೀಸೆಲ್ ದರ(ಲೀ) ದೆಹಲಿ 95.85 86.75 ಕೋಲ್ಕತ್ತಾ 95.80 89.60 ಮುಂಬೈ 102.04 94.15 ಚೆನ್ನೈ 97.19 91.42 ಬೆಂಗಳೂರು 99.05 91.97 ಪುಣೆ 101.64 92.32 ಚಂಡೀಗಢ 92.19 86.40
ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪರಿಷ್ಕರಣೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ಅಬಕಾರಿ ಸುಂಕಗಳನ್ನು ಸೇರಿಸಿದ ನಂತರ, ಅದರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುವ ಕೆಲಸವನ್ನು ಮಾಡುತ್ತವೆ. ಪ್ರತಿನಿತ್ಯ ಹೊಸ ದರಗಳು ಬೆಳಿಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ.
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಬಿಪಿಸಿಎಲ್), ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (ಐಒಸಿಎಲ್) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (ಎಚ್‌ಪಿಸಿಎಲ್) ಇಂಧನ ಬೆಲೆಗಳನ್ನು ಪ್ರತಿದಿನ ಅಂತರರಾಷ್ಟ್ರೀಯ ಮಾನದಂಡಗಳು ಮತ್ತು ವಿದೇಶಿ ವಿನಿಮಯ ದರಗಳೊಂದಿಗೆ ಪರಿಷ್ಕರಿಸುತ್ತವೆ. ಆ ಮೂಲಕ ವಿದೇಶಿ ವಿನಿಮಯ ದರಗಳ ಜತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ಬೆಲೆಗಳು ಏನೆಂಬುದನ್ನು ಅವಲಂಬಿಸಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಬದಲಾಗುತ್ತವೆ
ಇದನ್ನೂ ಓದಿ: ವಿವಿಧ ನಗರದಲ್ಲಿ ಪೆಟ್ರೋಲ್ ದರ ಎಷ್ಟಿದೆ ಎಂಬುದನ್ನು ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/petrol-price-today.html
ವಿವಿಧ ನಗರದ ಡೀಸೆಲ್ ದರ ತಿಳಿಯಲು ಈ ಕೆಳಗಿನ ಲಿಂಕ್ಅನ್ನು ಕ್ಲಿಕ್ ಮಾಡಿ: https://tv9kannada.com/business/diesel-price-today.html