Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಒಂದು ವಾರ ಗುಡುಗು ಸಿಡಿಲು ಸಹಿತ ಮಳೆ

Karnataka Weather: ಕರ್ನಾಟಕ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಒಂದು ವಾರ ಗುಡುಗು ಸಿಡಿಲು ಸಹಿತ ಮಳೆ
ಹವಾಮಾನ ವರದಿ (ಸಾಂಕೇತಿಕ ಚಿತ್ರ)

Monsoon 2021: ಇದು ಶುಕ್ರವಾರದಿಂದ ಒಂದು ವಾರ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ.

TV9kannada Web Team

| Edited By: sadhu srinath

Jun 11, 2021 | 9:04 AM

ಮಂಗಳೂರು: ರಾಜ್ಯದಲ್ಲಿ ಈ ಸಾಲಿನ ಮುಂಗಾರು ಮಳೆ ಇಂದಿನಿಂದ ರಾಜ್ಯಾದ್ಯಂತ ತೀವ್ರವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಂದಿನಿಂದ ಒಂದು ವಾರ ಕಾಲ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಭಾಗಗಳಲ್ಲಿ ಮುಂಗಾರು ಮಳೆ ಹೆಚ್ಚಾಗಲಿದೆ. ದಕ್ಷಿಣ ಒಳನಾಡಿನಲ್ಲಿಯೂ ಇಂದು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ಜೂನ್ 13 ರವರೆಗೆ ಮಳೆಯಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ. ಆ ನಂತರವೂ ಮಳೆ ಮುಂದುವರಿಯುವ ಅಂದಾಜಿದೆ. ಹಾಗಾಗಿ ಅಲ್ಲೆಲ್ಲ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಈ ಮಧ್ಯೆ, ಕರಾವಳಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಗುಡುಗು, ಸಿಡಿಲು ಸಹಿತ ಮಳೆಯಾಗಲಿದೆ.

ಕರಾವಳಿ ಹಾಗೂ ದಕ್ಷಿಣ ಒಳನಾಡಿನಲ್ಲಿ 3 ದಿನ ಗುಡುಗು ಸಿಡಿಲು ಸಹಿತ ಮಳೆ ಬೀಳಲಿದೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆಯಿಂದ ಭೂಕುಸಿತವಾಗುವ ಸಾಧ್ಯತೆಯಿದೆ ಎಂದೂ ಮುನ್ನೆಚ್ಚರಿಕೆ ನೀಡಲಾಗಿದೆ. ಹೀಗಾಗಿ, ದಕ್ಷಿಣ ಕನ್ನಡ, ಉಡುಪಿ, ರಾಯಚೂರು, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಎಸ್​ಡಿಆರ್​ಎಫ್​ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.

ಕರಾವಳಿ ಮಾತ್ರವಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ, ಬೀದರ್, ಗದಗ, ಬೆಂಗಳೂರು ನಗರ, ಕಲಬುರ್ಗಿ, ಬೆಂಗಳೂರು ಗ್ರಾಮಾಂತರ, ಚಿತ್ರದುರ್ಗ, ಕೋಲಾರ, ತುಮಕೂರು, ಕೊಪ್ಪಳ, ದಾವಣಗೆರೆ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆಯಿದೆ.

ಭಾರತೀಯ ಹವಾಮಾನ ಇಲಾಖೆ ಬಿಡುಗಡೆಗೊಳಿಸಿದ ವರದಿಯನುಸಾರ ಎರಡನೆಯ ದೀರ್ಘಾವಧಿ ಅಂದಾಜಿನಲ್ಲಿ ಈ ಬಾರಿ ಮುಂಗಾರು ಪ್ರಮಾಣ ಶೇ. 101ರಷ್ಟಿರಲಿದೆ. ಇದು ಎರಡು ವರ್ಷಗಳ ದೀರ್ಘಾವಧಿ ಸರಾಸರಿ (LPA) ಮಳೆ ಪ್ರಮಾಣದ ಆಧಾರದಲ್ಲಿದೆ. LPA ಅಂದ್ರೆ ದೀರ್ಘಾವಧಿ ಮಳೆ ಸರಾಸರಿ 88 ಸೆಂಟಿ ಮೀಟರ್ ಪ್ರಮಾಣದಲ್ಲಿರುತ್ತದೆ. ಇದನ್ನು 1961ರ ಮತ್ತು 2010ರ ನಡುವೆ ಜೂನ್​ ಮತ್ತು ಸೆಪ್ಟೆಂಬರ್ ತಿಂಗಳಲ್ಲಾದ ​ಮಳೆಯನ್ನಾಧರಿಸಿ ಲೆಕ್ಕ ಹಾಕಲಾಗಿದೆ.

2020 ಮತ್ತು 2019 ಮುಂಗಾರು ಸಾಲಿನಲ್ಲಿ LPA ಮಳೆ ಸರಾಸರಿ ಅನುಕ್ರಮವಾಗಿ 110 % ಮತ್ತು 109 % ಪ್ರಮಾಣದಲ್ಲಿತ್ತು. 1996, 1997 ಮತ್ತು 1998 ಮುಂಗಾರು ಸಾಲಿನಲ್ಲಿ 103.4 %, 102.2 % ಮತ್ತು 104 % ಪ್ರಮಾಣದ ಮಳೆಯಾಗಿತ್ತು.

ಜೂನ್​ ನಿಂದ ಸೆಪ್ಟೆಂಬರ್​ ವರೆಗಿನ ನಾಲ್ಕು ತಿಂಗಳ ಮುಂಗಾರು ಸಾಲಿನಲ್ಲಿ ಭಾರತದಲ್ಲಿ ಶೇ. 70ರಷ್ಟು ಮಳೆಯಾಗುತ್ತದೆ. ಇದು ಅಕ್ಕಿ, ಸೋಯಾಬೀನ್, ಹತ್ತಿ ಬೆಳೆಗೆ ನಿರ್ಣಾಯಕವಾಗಿರುತ್ತದೆ. ಕಳೆದ ಎರಡು ವರ್ಷಗಳಿಂದ ಇದು ಉತ್ತಮವಾಗಿದೆ. ಕೊವಿಡ್​ ಸೋಂಕು ಕಾಲದಲ್ಲೂ ಕಳೆದ ವರ್ಷ ಉತ್ತಮ ಮಳೆಯಾಗಿ ರೈತಾಪಿ ರ್ಗಕ್ಕೆ ಆಶಾದಾಯಕವಾಗಿತ್ತು. ಈ ವರ್ಷವೂ ಇದೇ ನಿರೀಕ್ಷೆಯಲ್ಲಿದೆ ರೈತಾಪಿ ವರ್ಗ.

(Karnataka Weather Monsoon 2021 intensify in coastal areas from june 11)

ಮುಂಗಾರಿನ ಆಗಮನದಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಇತ್ತ ಜಲಾಶಯಗಳಿಗೂ ಹೊಸ ನೀರು ಹರಿದು ಬರಲಾರಂಭಿಸಿದೆ. ಪ್ರಸ್ತುತ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಎಂಬ ವಿವರ ಇಲ್ಲಿದೆ. ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಇಂತಿದೆ

Follow us on

Related Stories

Most Read Stories

Click on your DTH Provider to Add TV9 Kannada