Puri Rath Yatra 2021: ಕೊರೊನಾದ್ದೇ ಪ್ರತಾಪ… ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!

coronavirus pandemic: ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೆದ ಬಾರಿ ಸೀಮಿತವಾಗಿ ರಥ ಯಾತ್ರೆ ನಡೆಸಿತ್ತು. ಈ ಬಾರಿಯೂ ಅದೇ ಜವಾಬ್ದಾರಿ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಸರ್ಕಾರದ ಮೇಲಿದೆ. ಹಾಗಾಗಿ ಈ ಬಾರಿಯೂ ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಮೊಟಕುಗೊಳ್ಳಲಿದೆ.

Puri Rath Yatra 2021: ಕೊರೊನಾದ್ದೇ ಪ್ರತಾಪ... ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!
Puri Rath Yatra 2021: ಕೊರೊನಾದ್ದೇ ಪ್ರತಾಪ... ಪುರಿ ಜಗನ್ನಾಥ ರಥ ಯಾತ್ರೆ ಈ ಬಾರಿಯೂ ಭಕ್ತರಿಲ್ಲದೆ ಭಣಗುಡಲಿದೆ!
Follow us
|

Updated on: Jun 11, 2021 | 11:15 AM

ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಈ ಬಾರಿಯೂ ನಡೆಯಲಿದೆ. ಆದರೆ ಕೊರೊನಾ ಆತಂಕದ ನಡುವೆ, ಭಕ್ತಗಣ ಇಲ್ಲದೆಯೇ ಜಗತ್ನಿಯಾಮಕ ದೇವರ ರಥ ಯಾತ್ರೆ ಸರಳವಾಗಿ ನಡೆಯಲಿದೆ. ಆಯ್ದ ಕೆಲವೇ ಕೆಲವು ಭಕ್ತರಿಗೆ, ದೇಗುಲದ ಆಡಳಿತ ವರ್ಗಕ್ಕೆ ಈ ಬಾರಿಯ ಜಗನ್ನಾಥ ರಥ ಯಾತ್ರೆ ಸೀಮಿತವಾಗಲಿದೆ. ರಥ ಎಳೆಯಲು ಎಲ್ಲರೂ ವ್ಯಾಕ್ಸಿನೇಶನ್​ ಹಾಕಿಸಿಕೊಂಡಿರಬೇಕು. ಮತ್ತು ಕೊರೊನಾ ನೆಗೆಟೀವ್​ ವರದಿ ಹೊಂದಿರುವುದು ಕಡ್ಡಾಯವಾಗಿದೆ. ಕೊರೊನಾ ಕಾಟದಿಂದಾಗಿ ರಥ ಯಾತ್ರೆ ಸಾರ್ವತ್ರಿಕವಾಗಿ ನಡೆಯದಿರುವುದು ಇದು ಎರಡನೆಯ ವರ್ಷ.

ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ವಿಶೇಷ ಪರಿಹಾರ ಆಯುಕ್ತ ಪ್ರದೀಪ್​ ಕೆ ಜೇನಾ ಅವರು ಪುರಿ ಜಗನ್ನಾಥ ರಥ ಯಾತ್ರೆ (Puri Jagannath Rath Yatra 2021 ) ನಡೆಸುವ ಬಗ್ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್​ ಮಾರ್ಗಸೂಚಿಯನ್ನು ನೀಡಿತ್ತು. ಈ ಬಾರಿಯೂ ಕೊರೊನಾ ಎರಡನೆಯ ಅಲೆಯಿಂದಾಗಿ ಅದೇ ಮಾರ್ಗಸೂಚಿಗಳನ್ನು ಪಾಲಿಸುವುದಾಗಿ ಹೇಳಿದರು.

ರಾಜ್ಯದ ಇತರೆ ಭಾಗಗಳಲ್ಲಿಯೂ ರಥ ಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ. ಇತರೆ ದೇವಾಲಯಗಳಲ್ಲಿ ರಥ ಯಾತ್ರೆ ಜರುಗುತ್ತದಾದರೂ ಅದು ಸಾರ್ವಜನಿಕವಾಗಿ ಇರುವುದಿಲ್ಲ. ದೇವಸ್ಥಾನಕ್ಕೆ ಸೀಮಿತವಾಗಿ ನಡೆಯಲಿದೆ ಅಷ್ಟೇ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Puri Rath Yatra 2021 will be held without devotees for second year in a row due to coronavirus pandemic 1

ರಾಜ್ಯದ ಇತರೆ ಭಾಗಗಳಲ್ಲಿಯೂ ರಥ ಯಾತ್ರೆಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಿದೆ

ಇನ್ನು ಭದ್ರತೆಗಾಗಿ ನಿಯೋಜಿತರಾದ ಪೊಲೀಸ್​ ಸಿಬ್ಬಂದಿಗೂ ಇದೇ ನಿಯಮಗಳು ಅನ್ಚಯವಾಗಲಿದ್ದು, ಎಲ್ಲರೂ ಲಸಿಕೆ ಹಾಕಿಸಿಕೊಳ್ಳುವುದು ಕಡ್ಡಾಯ ಮತ್ತು ಕೊರೊನಾ ನೆಗೆಟೀವ್ ವರದಿ ಕಡ್ಡಾಯವಾಗಿ ಹೊಂದಿರಬೇಕು.

ಕಳೆದ ವರ್ಷ ಪುರಿಯಲ್ಲಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ನಡೆಸುವ ಬಗ್ಗೆ ಜುಲೈ 22ರಂದು ಸುಪ್ರೀಂ ಕೋರ್ಟ್ ತನ್ನ ಹಿಂದಿನ​ ಆದೇಶವೊಂದನ್ನು ಮಾರ್ಪಾಡು ಮಾಡಿ, ರಥ ಯಾತ್ರೆ ಏರ್ಪಾಡುಗಳಿಗೆ ಅವಕಾಶ ನೀಡಿತ್ತು. ಆದರೆ ಆರೋಗ್ಯದ ದೃಷ್ಟಿಯಿಂದ ಕೊರೊನಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿತ್ತು.

ಅದರಂತೆ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಳೆದ ಬಾರಿ ಸೀಮಿತವಾಗಿ ರಥ ಯಾತ್ರೆ ನಡೆಸಿತ್ತು. ಈ ಬಾರಿಯೂ ಅದೇ ಜವಾಬ್ದಾರಿ ದೇವಸ್ಥಾನದ ಆಡಳಿತ ಸಮಿತಿ, ರಾಜ್ಯ ಸರ್ಕಾರದ ಮೇಲಿದೆ. ಹಾಗಾಗಿ ಈ ಬಾರಿಯೂ ಪುರಿ ಶ್ರೀ ಜಗನ್ನಾಥ ವಾರ್ಷಿಕ ರಥ ಯಾತ್ರೆ ಮೊಟಕುಗೊಳ್ಳಲಿದೆ.

(Puri Jagannath Rath Yatra 2021 will be held without devotees for second year in a row due to coronavirus pandemic as per supreme court guidelines)

ಇದನ್ನೂಓದಿ:

ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ತಡೆ ಇದನ್ನೂಓದಿ: ಪುರಿ ಜಗನ್ನಾಥ ರಥಯಾತ್ರೆಗೂ ಕೊರೊನಾ ಕಂಟಕ? ಪರಂಪರೆಗೆ ಅಪಚಾರವಾಗುತ್ತದಾ?