ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ತಡೆ

ದೆಹಲಿ: ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಇದೇ ಜೂನ್​ 23ರಂದು ಒಡಿಶಾದಲ್ಲಿ ನಡೆಯಬೇಕಿದ್ದ ವಾರ್ಷಿಕ ರಥಯಾತ್ರೆಗೆ ಸುಪ್ರೀಮ ಕೋರ್ಟ್​ ಬ್ರೇಕ್​ ಹಾಕಿದೆ. ಕೊರೊನಾ ಮಹಾಮಾರಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ. ‘ರಥಯಾತ್ರೆಗೆ ತಡೆ ನೀಡಿದರೆ ಆ ಜಗನ್ನಾಥನು ನಮ್ಮನ್ನು ಕ್ಷಮಿಸುತ್ತಾನೆ’ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಮಹಾಮಾರಿಯ ಸಮಯದಲ್ಲಿ ಧಾರ್ಮಿಕ ಸಭೆ-ಸಮ್ಮೇಳನಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ನಿರ್ಧಾರದಲ್ಲಿ ಉಲ್ಲೇಖಿಸಿದೆ. […]

ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ತಡೆ
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jun 18, 2020 | 2:29 PM

ದೆಹಲಿ: ಐತಿಹಾಸಿಕ ಪುರಿ ಜಗನ್ನಾಥ ರಥಯಾತ್ರೆಗೆ ಸುಪ್ರೀಂ ಕೋರ್ಟ್​ ತಡೆ ನೀಡಿದೆ. ಇದೇ ಜೂನ್​ 23ರಂದು ಒಡಿಶಾದಲ್ಲಿ ನಡೆಯಬೇಕಿದ್ದ ವಾರ್ಷಿಕ ರಥಯಾತ್ರೆಗೆ ಸುಪ್ರೀಮ ಕೋರ್ಟ್​ ಬ್ರೇಕ್​ ಹಾಕಿದೆ. ಕೊರೊನಾ ಮಹಾಮಾರಿ ಹರಡುವ ಭೀತಿಯ ಹಿನ್ನೆಲೆಯಲ್ಲಿ ಈ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ.

‘ರಥಯಾತ್ರೆಗೆ ತಡೆ ನೀಡಿದರೆ ಆ ಜಗನ್ನಾಥನು ನಮ್ಮನ್ನು ಕ್ಷಮಿಸುತ್ತಾನೆ’ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಂಡಿದ್ದೇವೆ. ಮಹಾಮಾರಿಯ ಸಮಯದಲ್ಲಿ ಧಾರ್ಮಿಕ ಸಭೆ-ಸಮ್ಮೇಳನಗಳನ್ನು ನಡೆಸುವುದು ಸೂಕ್ತವಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ನಿರ್ಧಾರದಲ್ಲಿ ಉಲ್ಲೇಖಿಸಿದೆ. ಜೊತೆಗೆ ಈ ಬಾರಿ ರಥಯಾತ್ರೆಗೆ ತಡೆ ನೀಡಿದರೆ ಆ ಜಗನ್ನಾಥ ನಮ್ಮನ್ನು ಖಂಡಿತ ಕ್ಷಮಿಸುತ್ತಾನೆ ಎಂದೂ ಸಹ ಹೇಳಿದೆ.

ಇದನ್ನೂ ಓದಿ:ಪುರಿ ಜಗನ್ನಾಥ ರಥಯಾತ್ರೆಗೂ ಕೊರೊನಾ ಕಂಟಕ? ಪರಂಪರೆಗೆ ಅಪಚಾರವಾಗುತ್ತದಾ?

ಪುರಿ ಜಗನ್ನಾಥ ರಥಯಾತ್ರ ಇಡೀ ವಿಶ್ವದಲ್ಲಿ ಖ್ಯಾತಿ ಪಡೆದಿರುವ ವಾರ್ಷಿಕ ಆಚರಣೆ. ಸಂಭ್ರಮ ಸಡಗರದ ಮಹೋತ್ಸವದಲ್ಲಿ ಜಗತ್ತಿನ ಮೂಲೆಮೂಲೆಗಳಿಂದ ಭಕ್ತರು ಹಾಗೂ ಪ್ರವಾಸಿಗರು ಒಡಿಶಾದ ಪುರಿಗೆ ಬರುತ್ತಾರೆ. ಹಾಗಾಗಿ ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರ್ವೋಚ್ಛ ನ್ಯಾಯಾಲಯವು ಈ ನಿರ್ಧಾರ ಹೊರಡಿಸಿದೆ.