ನಾವೇಕೆ ದೊಡ್ಡ ರಫ್ತು ಮಾಡುವ ರಾಷ್ಟ್ರವಾಗಬಾರದು? ಮೋದಿ ಸವಾಲಿನ ಪ್ರಶ್ನೆ
ನವದೆಹಲಿ:ಕಲ್ಲಿದ್ದಲು ವಾಣಿಜ್ಯ ಗಣಿಗಾರಿಕೆ ಹರಾಜು ಪ್ರಕ್ರಿಯೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲೂ ಹರಾಜು ಪ್ರಕ್ರಿಯೆ ಆರಂಭಿಸಿದ್ದೀರಿ. ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಮೋದಿ ಮೆಚ್ಚುಗೆ ಸೂಚಿಸಿದರು. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಹರಾಜು ಪ್ರಕ್ರಿಯೆ ಆರಂಭಿಸಿದ್ದೀರಿ. ಇದರಿಂದ ಅತಿ ದೊಡ್ಡ ಸಂದೇಶ ರವಾನೆಯಾಗುತ್ತದೆ. ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ಆತ್ಮ ನಿರ್ಭರ ಭಾರತದಿಂದ ಆಮದು ನಿಲ್ಲಿಸಬೇಕು […]
ನವದೆಹಲಿ:ಕಲ್ಲಿದ್ದಲು ವಾಣಿಜ್ಯ ಗಣಿಗಾರಿಕೆ ಹರಾಜು ಪ್ರಕ್ರಿಯೆಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ನ್ಯಾಷನಲ್ ಮೀಡಿಯಾ ಸೆಂಟರ್‌ನಲ್ಲಿ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲೂ ಹರಾಜು ಪ್ರಕ್ರಿಯೆ ಆರಂಭಿಸಿದ್ದೀರಿ. ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು ಎಂದು ಮೋದಿ ಮೆಚ್ಚುಗೆ ಸೂಚಿಸಿದರು.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲೂ ಹರಾಜು ಪ್ರಕ್ರಿಯೆ ಆರಂಭಿಸಿದ್ದೀರಿ. ಇದರಿಂದ ಅತಿ ದೊಡ್ಡ ಸಂದೇಶ ರವಾನೆಯಾಗುತ್ತದೆ. ಸಂಕಷ್ಟವನ್ನು ಅವಕಾಶವಾಗಿ ಬಳಸಿಕೊಳ್ಳಬೇಕು. ಆತ್ಮ ನಿರ್ಭರ ಭಾರತದಿಂದ ಆಮದು ನಿಲ್ಲಿಸಬೇಕು ಆಮದಿಗಿಂತ ಹೆಚ್ಚು ಪ್ರಮಾಣದಲ್ಲಿ ರಫ್ತು ಮಾಡಬೇಕು. ಸಮಗ್ರ ದೃಷ್ಟಿಯಿಂದ ಕೆಲಸ ಮಾಡಬೇಕು. ಈ ದಿಕ್ಕಿನಲ್ಲಿ ಇಂದಿನ ಕಾರ್ಯಕ್ರಮ ದೊಡ್ಡ ಹೆಜ್ಜೆಯಾಗಿದೆ. ಭಾರತವನ್ನು ಸ್ವಾವಲಂಬಿ ಮಾಡುವಲ್ಲಿ ಇದು ದೊಡ್ಡ ಹೆಜ್ಜೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮ ಕಲ್ಲಿದ್ದಲು ಸಂಬಂಧಪಟ್ಟಂತೆ ಮಾತ್ರವಲ್ಲ. 130 ಕೋಟಿ ಜನರ ಆಕಾಂಕ್ಷೆಗಳನ್ನು ಈಡೇರಿಸುವ ಬದ್ಧತೆ ಎದ್ದು ಕಾಣುತ್ತಿದೆ. ಲಕ್ಷಗಟ್ಟಲೇ ಉದ್ಯೋಗ ಸೃಷ್ಟಿಸುವ ಪ್ರಯತ್ನವಾಗಬೇಕು. ಆತ್ಮ ನಿರ್ಭರ ಭಾರತ ಸಾಮಾನ್ಯ ಸರ್ಕಾರಿ ಪ್ರಕ್ರಿಯೆ ಎಂದು ಅನಿಸಿದೆ. ಪ್ರತಿ ಕ್ಷೇತ್ರದಲ್ಲೂ ಅನೇಕ ನಿರ್ಣಯ ಕೈಗೊಳ್ಳಲಾಗುತ್ತಿದೆ. ಭಾರತ ಈ ಬಿಕ್ಕಟ್ಟನ್ನು ಅವಕಾಶವಾಗಿ ಬದಲಿಸಲು ಬದ್ಧತೆಯಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯುತ್ತಿದೆ ಎಂದು ಮೋದಿ ಹೇಳಿದರು.
ಕಲ್ಲಿದ್ದಲು ವಲಯವನ್ನು ಲಾಕ್‌ಡೌನ್‌ನಿಂದ ಹೊರತರುತ್ತಿದ್ದೇವೆ. ಇದನ್ನು ನನಗಿಂತ ನಿಮಗೆ ಚೆನ್ನಾಗಿ ಗೊತ್ತಿದೆ. ಆರ್ಥಿಕತೆಯಲ್ಲಿ ವಿಶ್ವದಲ್ಲಿ ಭಾರತ 5ನೇ ಸ್ಥಾನದಲ್ಲಿದೆ. ಭಾರತ ಕಲ್ಲಿದ್ದಲು ಉತ್ಪಾದನೆಯಲ್ಲಿ 2ನೇ ಸ್ಥಾನದಲ್ಲಿದ್ದೇವೆ. ವಿಪರ್ಯಾಸವೆಂದರೆ ಕಲ್ಲಿದ್ದಲು ಆಮದಿನಲ್ಲೂ 2ನೇ ಸ್ಥಾನವಿದೆ. ಆರ್ಥಿಕತೆಯಲ್ಲೂ ಭಾರತ ದೊಡ್ಡ ರಾಷ್ಟ್ರವಾಗಿದೆ-ಮೋದಿ. ನಾವೇಕೆ ದೊಡ್ಡ ರಫ್ತು ಮಾಡುವ ರಾಷ್ಟ್ರವಾಗಬಾರದು? ಎಂದು ಸವಾಲಿನ ಪ್ರಶ್ನೆ ಎಸೆದರು.
Published On - 11:22 am, Thu, 18 June 20