AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಂಟೆಕೋರ ಚೀನಾಕ್ಕೆ ಪ್ರಧಾನಿ ಖಡಕ್‌ ವಾರ್ನಿಂಗ್‌- ದೇಶದ ಭದ್ರತೆಯೊಂದಿಗೆ ಯಾವುದೇ ರಾಜೀ ಇಲ್ಲ

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ ಮತ್ತು ಚೀನಾ ಗಡಿಯ ಪ್ರಕ್ಷಬ್ದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ನೆರೆಯ ಚೀನಾಕ್ಕೆ ನೇರ ಎಚ್ಚರಿಕೆ ಕೊಟ್ಟಿರುವ ಪ್ರಧಾನಿ ಮೋದಿ, ನಮ್ಮನ್ನು ಪ್ರಚೋದಿಸಿದವರಿಗೆ ತಕ್ಕ ಉತ್ತರ ಕೊಡಲು ಬರುತ್ತದೆ ಎಂದು ಎಚ್ಚರಿಸಿದ್ದಾರೆ. ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ: ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ಮೋದಿ, ಲಡಾಖ್​​ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ಪ್ರಕರಣ ಕುರಿತು ಸಿಎಂಗಳಿಗೆ ವಿವರಿಸಿದ್ರು. ನಮ್ಮ ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ನಮ್ಮ ಯೋಧರು […]

ತಂಟೆಕೋರ ಚೀನಾಕ್ಕೆ ಪ್ರಧಾನಿ ಖಡಕ್‌ ವಾರ್ನಿಂಗ್‌- ದೇಶದ ಭದ್ರತೆಯೊಂದಿಗೆ ಯಾವುದೇ ರಾಜೀ ಇಲ್ಲ
ಪ್ರಧಾನಿ ನರೇಂದ್ರ ಮೋದಿ
Guru
| Updated By: ಆಯೇಷಾ ಬಾನು|

Updated on:Jun 18, 2020 | 2:49 PM

Share

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ ಮತ್ತು ಚೀನಾ ಗಡಿಯ ಪ್ರಕ್ಷಬ್ದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ. ನೆರೆಯ ಚೀನಾಕ್ಕೆ ನೇರ ಎಚ್ಚರಿಕೆ ಕೊಟ್ಟಿರುವ ಪ್ರಧಾನಿ ಮೋದಿ, ನಮ್ಮನ್ನು ಪ್ರಚೋದಿಸಿದವರಿಗೆ ತಕ್ಕ ಉತ್ತರ ಕೊಡಲು ಬರುತ್ತದೆ ಎಂದು ಎಚ್ಚರಿಸಿದ್ದಾರೆ.

ಯೋಧರ ಬಲಿದಾನ ವ್ಯರ್ಥವಾಗುವುದಿಲ್ಲ: ಮೋದಿ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗಿನ ವಿಡಿಯೋ ಕಾನ್ಪರೆನ್ಸ್‌ನಲ್ಲಿ ಮಾತನಾಡಿದ ಮೋದಿ, ಲಡಾಖ್​​ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ಪ್ರಕರಣ ಕುರಿತು ಸಿಎಂಗಳಿಗೆ ವಿವರಿಸಿದ್ರು. ನಮ್ಮ ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗುವುದಿಲ್ಲ. ನಮ್ಮ ಯೋಧರು ಹೊಡೆದಾಡುತ್ತಲೇ ಹುತಾತ್ಮರಾಗಿದ್ದಾರೆ ಎಂದು ದೇಶದ ಗಡಿ ಕಾಯುತ್ತಲೇ ಪ್ರಾಣ ತೆತ್ತ ಸೈನಿಕರ ತ್ಯಾಗವನ್ನ ಸ್ಮರಿಸಿದರು.

ಭಾರತದ ತಾಳ್ಮೆಯ ಪರೀಕ್ಷೆ ಬೇಡ ಎಂದ ಮೋದಿ ನಾವು ಯಾರನ್ನೂ ಪ್ರಚೋದಿಸುವುದಿಲ್ಲ, ಭಾರತ ಶಾಂತಿ ಬಯಸುತ್ತದೆ. ಆದ್ರೆ ನಮ್ಮನ್ನು ಪ್ರಚೋದಿಸಿದರೆ ತಕ್ಕ ಉತ್ತರ ನೀಡಲು ನಮಗೆ ಬರುತ್ತದೆ. ನಮ್ಮ ಶಕ್ತಿಯ ಬಗ್ಗೆ ಯಾರಿಗೂ ಭ್ರಮೆ ಮತ್ತು ಅನುಮಾನಗಳು ಬೇಡ ಎಂದು ಚೀನಾಕ್ಕೆ ಸಂದೇಶ ರವಾನಿಸಿದರು.

ದೇಶದ ಅಖಂಡತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ಯಾವುದೇ ಸಮಯದಲ್ಲೂ ಪ್ರತ್ಯುತ್ತರ ನೀಡಲು ಭಾರತ ಸಿದ್ಧವಿದೆ ಎಂದು ದೇಶವಾಸಿಗಳಿಗೆ ಮೋದಿ ಭರವಸೆ ನೀಡಿದರು.

ಸಭೆಯಲ್ಲಿ ಹುತಾತ್ಮರಿಗೆ ಶ್ರದ್ಧಾಂಜಲಿ ಇದೇ ಸಂಬರ್ಭದಲ್ಲಿ ಪ್ರಧಾನಿ ಮೋದಿ, ಉಪಸ್ಥಿತರಿದ್ದ ಅವರ ಸಂಪುಟದ ಕೆಲ ಸಚಿವರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಚೀನಾ ಜೊತೆಗಿನ ಸಂಘರ್ಷದಲ್ಲಿ ಹುತಾತ್ಮರಾದ ಸೈನಿಕರಿಗೆ ಎರಡು ನಿಮಷ ಮೌನಾಚರಣೆ ಆಚರಿಸುವ ಮೂಲಕ ಶ್ರದ್ದಾಂಜಲಿ ಅರ್ಪಿಸಿದರಲ್ಲದೇ ಹುತಾತ್ಮ ಯೋಧರ ಆತ್ಮಕ್ಕೆ ಶಾಂತಿ ಕೋರಿದರು.

Published On - 7:41 pm, Wed, 17 June 20