ಸಚಿನ್ ಪೈಲಟ್ ದೆಹಲಿಗೆ ಬರುವ ಸಾಧ್ಯತೆ ; ಜಿತಿನ್ ಪ್ರಸಾದ ನಿರ್ಗಮನ ನಂತರ ಊಹಾಪೋಹಗಳ ಬಗ್ಗೆ ಕಾಂಗ್ರೆಸ್​ಗೆ ಹೊಸ ತಲೆನೋವು

Sachin Pilot: ತಮ್ಮ ನಾಯಕ ಎತ್ತಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ವಿಳಂಬ ಮಾಡಿರುವುದರ ಬಗ್ಗೆ ಸಚಿನ್ ಬೆಂಬಲದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಪೈಲಟ್‌ಗೆ ಹತ್ತಿರವಿರುವ ಸುಮಾರು ಅರ್ಧ ಡಜನ್ ಶಾಸಕರು ಜೈಪುರದ ಅವರ ಸಿವಿಲ್ ಲೈನ್ಸ್ ನಿವಾಸದಲ್ಲಿ ಗುರುವಾರ ಅವರನ್ನು ಭೇಟಿಯಾಗಿದ್ದಾರೆ.

ಸಚಿನ್ ಪೈಲಟ್ ದೆಹಲಿಗೆ ಬರುವ ಸಾಧ್ಯತೆ ; ಜಿತಿನ್ ಪ್ರಸಾದ ನಿರ್ಗಮನ ನಂತರ ಊಹಾಪೋಹಗಳ ಬಗ್ಗೆ ಕಾಂಗ್ರೆಸ್​ಗೆ ಹೊಸ ತಲೆನೋವು
ಸಚಿನ್ ಪೈಲಟ್
Follow us
| Edited By: Rashmi Kallakatta

Updated on:Jun 11, 2021 | 11:55 AM

ದೆಹಲಿ: ಜಿತಿನ್ ಪ್ರಸಾದ ನಿರ್ಗಮನದ ಬೆನ್ನಲ್ಲೇ ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಶುಕ್ರವಾರ ದೆಹಲಿಗೆ ಬರಲಿದ್ದಾರೆ ಎಂಬ ಸುದ್ದಿ ಮತ್ತಷ್ಟು ಊಹಾಪೋಹಗಳಿಗೆ ಎಡೆ ಮಾಡಿದೆ. ಕಾಂಗ್ರೆಸ್​ನಲ್ಲಿ ಭಿನ್ನಮತ ಹೊಗೆಯಾಡುತ್ತಿರುವ ಮಧ್ಯೆಯೇ ಸಚಿನ್ ದೆಹಲಿಗೆ ಬರಲಿದ್ದಾರೆ ಎಂಬುದು  ಕಾಂಗ್ರೆಸ್ ಪಕ್ಷಕ್ಕೆ ತಲೆನೋವಾಗಿದೆ.

ಸಚಿನ್ ಪೈಲಟ್ ತಮ್ಮ ಅಪ್ಪನ ಪುಣ್ಯತಿಥಿ ಪ್ರಯುಕ್ತ ದೌಸಾದಲ್ಲಿದ್ದು, ಅಲ್ಲಿ ಯಾರನ್ನೂ ಭೇಟಿ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇಂಧನ ಬೆಲೆ ಏರಿಕೆ ಬಗ್ಗೆ 11 ಗಂಟೆಗೆ ಜೈಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಚಿನ್ ಭಾಗಿಯಾಗಿದ್ದಾರೆ

ತಮ್ಮ ನಾಯಕ ಎತ್ತಿದ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾಂಗ್ರೆಸ್ ವಿಳಂಬ ಮಾಡಿರುವುದರ ಬಗ್ಗೆ ಸಚಿನ್ ಬೆಂಬಲದ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು. ಪೈಲಟ್‌ಗೆ ಹತ್ತಿರವಿರುವ ಸುಮಾರು ಅರ್ಧ ಡಜನ್ ಶಾಸಕರು ಜೈಪುರದ ಅವರ ಸಿವಿಲ್ ಲೈನ್ಸ್ ನಿವಾಸದಲ್ಲಿ ಗುರುವಾರ ಅವರನ್ನು ಭೇಟಿಯಾಗಿದ್ದಾರೆ. ಮಾಜಿ ಸಚಿವ ವಿಶ್ವೇಂದ್ರ ಸಿಂಗ್ ಅವರು ಈ ಹಿಂದೆ ಕೇಂದ್ರ ಮಾಜಿ ಸಚಿವರೊಂದಿಗೆ ಗುರುವಾರ ನಡೆದ ಸಭೆ ನಡೆಸಿದರು. ಆನಂತರ ವೇದ ಪ್ರಕಾಶ್ ಸೋಲಂಕಿ, ಮುಖೇಶ್ ಭಾಕರ್ ಮತ್ತು ರಾಮ್ನಿವಾಸ್ ಗಾವ್ರಿಯಾ ಅವರು ಪೈಲಟ್ ಅವರನ್ನು ಭೇಟಿಯಾದರು. ರಾಕೇಶ್ ಪರೀಕ್ ಕೂಡ ಪೈಲಟ್ ಅವರನ್ನು ಭೇಟಿಯಾಗಿದ್ದರು.

ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಸಂಪುಟ ವಿಸ್ತರಣೆ ಮತ್ತು ರಾಜಕೀಯ ನೇಮಕಾತಿಗಳ ವಿಳಂಬದ ಬಗ್ಗೆ ಸೋಲಂಕಿ, ಭಾಕರ್ ಮತ್ತು ಗಾವ್ರಿಯಾ ಪ್ರಶ್ನೆಗಳನ್ನು ಎತ್ತಿದ್ದಾರೆ. ನಾವು ಕಾಂಗ್ರೆಸ್ ಪಕ್ಷದೊಳಗೆ ಹೋರಾಡುತ್ತೇವೆ ಮತ್ತು ಪೈಲಟ್ ಜೊತೆ ದೃಢವಾಗಿ ನಿಲ್ಲುತ್ತೇವೆ ಎಂದು ಅವರು ಹೇಳಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.

ಪಕ್ಷದ ಬಲಕ್ಕಾಗಿ ನಾವೆಲ್ಲರೂ ಧ್ವನಿ ಎತ್ತುತ್ತಿದ್ದೇವೆ. ಕಾಂಗ್ರೆಸ್‌ಗೆ ನಮ್ಮ ನಿಷ್ಠೆಯನ್ನು ಪ್ರಶ್ನಿಸುವವರು ಪಕ್ಷದ ಹಿತೈಷಿಗಳಲ್ಲ ಎಂದು ಪೈಲಟ್ ಅವರನ್ನು ಭೇಟಿಯಾದ ನಂತರ ಚಾಕ್ಸು (ಜೈಪುರ) ಶಾಸಕ ಸೋಲಂಕಿ ಸುದ್ದಿಗಾರರಿಗೆ ತಿಳಿಸಿದರು.

ಆಂತರಿಕ ಭಿನ್ನಾಭಿಪ್ರಾಯಗಳ ಬಗ್ಗೆ ವದಂತಿಗಳು ಹೊರಬರುವುದು ಇದೇ ಮೊದಲಲ್ಲ. ಗೆಹ್ಲೋಟ್ ಮುಖ್ಯಮಂತ್ರಿಯಾದಾಗಿನಿಂದಲೂ ಗೆಹ್ಲೋಟ್ ಮತ್ತು ಪೈಲಟ್ ಬೆಂಬಲಿಗರು ಆಗಾಗ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದುಂಟು.

ಕಾಂಗ್ರೆಸ್ ಹೈಕಮಾಂಡ್ ಪೈಲಟ್ ಅವರ ಮಾತನ್ನು ಆಲಿಸಬೇಕು ಮತ್ತು ಅವರು ಎತ್ತಿದ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ಹೇಳಿದರು.

ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಹೇಳಿದ್ದನ್ನು 10 ದಿನಗಳಲ್ಲಿ ಪಂಜಾಬ್‌ ಪರಿಹರಿಸಿತು. ಆದರೆ ರಾಜಸ್ಥಾನದಲ್ಲಿ 10 ತಿಂಗಳ ನಂತರವೂ ಪೈಲಟ್ ಎತ್ತಿದ ಸಮಸ್ಯೆಗಳನ್ನು ಬಗೆಹರಿಸಲಾಗಿಲ್ಲ. 10 ದಿನಗಳಲ್ಲಿ ಸಿಧು ಮಾತನ್ನು ಪಂಜಾಬ್‌ನಲ್ಲಿ ಕೇಳಿದರೆ, ಪೈಲಟ್ ಮಾತು ಯಾಕೆ ಕೇಳುತ್ತಿಲ್ಲ ಎಂದು ಶ್ರೀ ಸೋಲಂಕಿ ಪ್ರಶ್ನಿಸಿದ್ದಾರೆ.

“ನಮ್ಮಿಂದ ಎದ್ದಿರುವ ಬೇಡಿಕೆಗಳ ಬಗ್ಗೆ ಯಾವುದೇ ಚರ್ಚೆ ಅಥವಾ ವಿಚಾರಣೆಗಳು ನಡೆದಿಲ್ಲ” ಎಂದು ಅವರು ಹೇಳಿದರು. ಆಡಳಿತವನ್ನು ವಿಕೇಂದ್ರೀಕರಿಸಬೇಕು ಮತ್ತು ರಾಜಕೀಯ ನೇಮಕಾತಿಗಳನ್ನು ಆದಷ್ಟು ಬೇಗ ಮಾಡಬೇಕು ಎಂದು ನಾನು ಪದೇ ಪದೇ ಹೇಳುತ್ತಿದ್ದೇನೆ ”ಎಂದು ಸೋಲಂಕಿ ಹೇಳಿದರು.

ಇದನ್ನೂ ಓದಿ:  ನನ್ನ ಹೆಣದ ಮೇಲೆ ಅದು ನಡೆದೀತು: ಜಿತಿನ್ ಪ್ರಸಾದ ಶೈಲಿಯಲ್ಲಿ ಕಾಂಗ್ರೆಸ್ ಬಿಡುವ ಕುರಿತ ಪ್ರಶ್ನೆಗೆ ಕಪಿಲ್ ಸಿಬಲ್ ಉತ್ತರ 

ಇದನ್ನೂ ಓದಿ:  Jitin Prasada ಕಾಂಗ್ರೆಸ್ ನಾಯಕ, ಅನುಭವಿ ರಾಜಕಾರಣಿ ಜಿತಿನ್ ಪ್ರಸಾದ ಬಿಜೆಪಿಗೆ ಸೇರ್ಪಡೆ

(Sachin Pilot May Reach Delhi on Friday amid rumours of discontentment Congress Faces Worry )

Published On - 11:52 am, Fri, 11 June 21

ತಾಜಾ ಸುದ್ದಿ
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ಜೆಸಿಬಿಯಲ್ಲಿ ಕಲ್ಯಾಣ ಮಂಟಪಕ್ಕೆ ಬಂದು, ಅಂಕದ ಕೋಳಿ ಪೈಟ್ ಆಡಿದ ನವಜೋಡಿಗಳು
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ನೀಡದಿದ್ದಕ್ಕೆ KNC ಬಳಿ ವಿದ್ಯಾರ್ಥಿಗಳ ಗಲಾಟೆ
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ವಂಟಮೂರಿ ಘಟನೆ ಅವಮಾನದಿಂದ ತಲೆ ತಗ್ಗಿಸುವಂತೆ ಮಾಡಿದೆ:ಲಕ್ಷ್ಮಿ ಹೆಬ್ಬಾಳ್ಕರ್
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರದ ಬಗ್ಗೆ ಚರ್ಚಿಸದೆ ಪ್ರತಿಭಟಿಸುವ ಶಾಸಕರಿಗೆ ನಾಚಿಕೆಯಾಗಬೇಕು: ಸಿಎಂ
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಬರ ಮತ್ತು ಉತ್ತರ ಕರ್ನಾಟಕ ಚರ್ಚೆಗೆ ಅಧಿವೇಶನ ವಾರ ವಿಸ್ತರಿಸಲಿ: ಯತ್ನಾಳ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಗೆ ಎಲ್ಲ ನಮಸ್ಕಾರ್ ಸಾರ್ ಅನ್ನಬೇಕು ಅಂದರೆ ತಪ್ಪೇನು?ಜಮೀರ್ ಅಹ್ಮದ್
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಸ್ಪೀಕರ್ ಖಾದರ್ ಹೇಳುವ ಮಾತು ಸದನದಲ್ಲಿರುವವರೆಲ್ಲರ ಮನಸ್ಸಿಗೆ ನಾಟುತ್ತದೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಹುಟ್ಟೂರು ಹರದನಹಳ್ಳಿಯಲ್ಲಿ ಮನೆ ದೇವರಿಗೆ ಹೆಚ್​ಡಿಡಿ ದಂಪತಿ ಪೂಜೆ
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬಿಗ್ ಬಾಸ್​ನಲ್ಲಿ ಆಪ್ತರನ್ನೇ ನಾಮಿನೇಟ್ ಮಾಡಿದ ಕಂಟೆಸ್ಟಂಟ್​ಗಳು
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ
ಬೆಂಗಳೂರಿನ ಜಯನಗರದಲ್ಲಿ ಹಾಡಹಗಲೇ ಸ್ಕೂಟರ್‌ ಕಳ್ಳತನ