AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫೀಸ್ ವಸೂಲಿಗಾಗಿ ಅಡ್ಡದಾರಿ ಹಿಡಿದ ಖಾಸಗಿ ಶಿಕ್ಷಣ ಸಂಸ್ಥೆಗಳು

ಶಿಕ್ಷಣ ಇಲಾಖೆ ಈ ಸಾಲಿನ ಇನ್ನು ಶಾಲಾ ಸುಲ್ಕ ನಿಗದಿ ಮಾಡಿಲ್ಲ. ತರಗತಿ ಪಠ್ಯ ಹಾಗೂ ಬೋಧನಾ ಕ್ರಮ ತಿಳಿಸಿಲ್ಲ. ಕೊವಿಡ್ ಸಂಕಷ್ಟದಲ್ಲಿ ನಮಗೆ ಕೆಲಸ ಇಲ್ಲ. ಇತಂಹ ಸಂಕಷ್ಟದಲ್ಲಿ ಖಾಸಗಿ ಶಾಲೆಗಳು ಸುಲಿಗೆಗೆ ಮುಂದಾಗಿವೆ. ಆನ್​ಲೈನ್​ ಕ್ಲಾಸ್ ಶುರು ಮಾಡಿ ಫೀಸ್​ಗೆ ಡಿಮ್ಯಾಂಡ್ ಮಾಡುತ್ತಿವೆ.

ಫೀಸ್ ವಸೂಲಿಗಾಗಿ ಅಡ್ಡದಾರಿ ಹಿಡಿದ ಖಾಸಗಿ ಶಿಕ್ಷಣ ಸಂಸ್ಥೆಗಳು
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Jun 12, 2021 | 10:40 AM

Share

ಬೆಂಗಳೂರು: ಇಡೀ ರಾಜ್ಯವೇ ಕೊರೊನಾ ಸೋಂಕಿನಿಂದ ಬಳಲುತ್ತಿದೆ. ಉದ್ಯೋಗವಿಲ್ಲದೆ ಒಂದು ಹೊತ್ತಿನ ಊಟಕ್ಕೂ ಜನ ಪರದಾಡುತ್ತಿದ್ದಾರೆ. ಈ ಸಂದಿಗ್ಧ ಕಾಲದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಮಾನವೀಯವಾಗಿ ವರ್ತಿಸುತ್ತಿವೆ. ಮಕ್ಕಳ ಫೀಸ್ ವಸೂಲಿಗಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳು ಅಡ್ಡದಾರಿ ಹಿಡಿದಿವೆ. ಖಾಸಗಿ ಶಾಲೆಗಳ ಸುಲಿಗೆಗೆ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಶಾಲೆಗಳ ಮುಂದೆ ಪ್ರತಿಭಟನೆಗೆ ಮುಂದಾಗಿದ್ದಾರೆ.

ಶಿಕ್ಷಣ ಇಲಾಖೆ ಈ ಸಾಲಿನ ಇನ್ನು ಶಾಲಾ ಸುಲ್ಕ ನಿಗದಿ ಮಾಡಿಲ್ಲ. ತರಗತಿ ಪಠ್ಯ ಹಾಗೂ ಬೋಧನಾ ಕ್ರಮ ತಿಳಿಸಿಲ್ಲ. ಕೊವಿಡ್ ಸಂಕಷ್ಟದಲ್ಲಿ ನಮಗೆ ಕೆಲಸ ಇಲ್ಲ. ಇತಂಹ ಸಂಕಷ್ಟದಲ್ಲಿ ಖಾಸಗಿ ಶಾಲೆಗಳು ಸುಲಿಗೆಗೆ ಮುಂದಾಗಿವೆ. ಆನ್​ಲೈನ್​ ಕ್ಲಾಸ್ ಶುರು ಮಾಡಿ ಫೀಸ್​ಗೆ ಡಿಮ್ಯಾಂಡ್ ಮಾಡುತ್ತಿವೆ. ಪೂರ್ಣ ಪ್ರಮಾಣದ ಫೀಸ್ ಕಟ್ಟುವಂತೆ ಒತ್ತಡ ಹಾಕಿವೆ. ಕಂತುಗಳಲ್ಲಿ ಫೀಸ್ ಕಟ್ಟಬೇಕು ಅಂದರೆ 5 ಸಾವಿರದ ವರೆಗೂ ಬಡ್ಡಿ ಕಟ್ಟುವಂತೆ ಹಿಂಸೆ ಮಾಡುತ್ತಿವೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ರಾಜಾಜಿನಗರದ ಶ್ರೀ ವಾಣಿ ಸ್ಕೂಲ್, ಮಂಗೊಲಿಯಾ ಪಬ್ಲಿಕ್ ಸ್ಕೂಲ್, ರಾಜಾಜಿನಗರ ಹಾಗೂ ಮಹಾಲಕ್ಷ್ಮಿ ಲೇಔಟ್ ಚೈತನ್ಯ ಟೆಕ್ನೋ ಶಾಲೆ, ಮಾರತಹಳ್ಳಿ ವಿಬಿಜಿಯೋರ್ ಶಾಲೆ, ನಂದಿನಿ ಲೇಔಟ್ ಪ್ರೆಸಿಡೆನ್ಸಿ ಸ್ಕೂಲ್, ಶಿವಾನಂದ ಸರ್ಕಲ್ ಹಾಗೂ ಹೆಬ್ಬಳಾದಲ್ಲಿರೊ ಸಿಂಧಿ ಶಾಲೆ, ಕಲ್ಕೆರೆಯ ಎನ್​ಪಿಎಸ್​ ಪಬ್ಲಿಕ್ ಶಾಲೆ ಸೇರಿದಂತೆ ಅನೇಕ ಶಾಲೆಗಳಿಂದ ಹಗಲು ದರೋಡೆ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಕಲ್ಕೆರೆಯ ಎನ್​ಪಿಎಸ್​ ಪಬ್ಲಿಕ್ ಶಾಲೆ ಕೊವಿಡ್ ಸಂಕಷ್ಟದಲ್ಲೂ ಶೇ.20 ರಷ್ಟು ಫೀಸ್ ಹೆಚ್ಚಳ ಮಾಡಿದೆ. ಶಾಲೆ ಕಳೆದ ವರ್ಷವೂ ಫೀಸ್ ಕಡಿತ ಮಾಡಿರಲಿಲ್ಲ. ಕಳೆದ ವರ್ಷ ಒಂದು ಲಕ್ಷ 35 ಸಾವಿರ ಫೀಸ್ ಇತ್ತು. ಈ ವರ್ಷ ಒಂದು ಲಕ್ಷ 45 ಸಾವಿರಕ್ಕೆ ಏರಿಕೆ ಮಾಡಿದೆ. ಶಾಲೆಯ ನಡೆಗೆ 300 ಕ್ಕೂ ಹೆಚ್ಚು ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಖಾಸಗಿ ಫೈನಾನ್ಸ್​ಗಳ ಜೊತೆ ಖಾಸಗಿ ಶಾಲೆಗಳ ಒಪ್ಪಂದ ಪೋಷಕರಿಗೆ ಸಾಲ ಕೊಡಿಸಿ ಶುಲ್ಕ ಕಟ್ಟಿಸಿಕೊಳ್ಳುತ್ತಿದ್ದಾರೆ ಎಂದು ಟಿವಿ9ಗೆ ಪ್ರತಿಕ್ರಿಯೆ ನೀಡಿದ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್, ಖಾಸಗಿ ಶಾಲೆಗಲೂ ತಾವೇ ಸಾಲ ಕೊಡಿಸಿ ಮಕ್ಕಳ ಫೀಸ್ ವಸೂಲಿ ಮಾಡುತ್ತಿವೆ. ಯೋಗಾನಂದ ಎಂಬುವವರು ಈ ಬಗ್ಗೆ ಆರೋಪಿಸಿದ್ದಾರೆ. ಬಡ್ಡಿಗೆ ಹಣ ಪಡೆದು ಶುಲ್ಕ ಕಟ್ಟಲು ಒತ್ತಡ ಹಾಕಿದ ಆರೋಪದ ಬಗ್ಗೆ ಯಾವುದೇ ಶಾಲೆಯ ವಿರುದ್ಧ ನನಗೆ ದೂರು ಬಂದಿಲ್ಲ. ಪೋಷಕರು ನನಗೆ ದೂರು ನೀಡಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ಶುಲ್ಕ ಕಟ್ಟಿಲ್ಲವೆಂದು ಆನ್​ಲೈನ್​ ಕ್ಲಾಸ್ ಬಂದ್ ಮಾಡುವಂತಿಲ್ಲ. ಸುಪ್ರೀಂ ಕೋರ್ಟ್, ಹೈಕೋರ್ಟ್ ಕೂಡ ಸ್ಪಷ್ಟವಾಗಿ ಹೇಳಿದೆ. ಶುಲ್ಕಕ್ಕೆ ಒತ್ತಡ ಹಾಕುತ್ತಿರುವ ಬಗ್ಗೆ ದೂರು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ನನಗೆ ದೂರು ನೀಡಬೇಕೆಂದು ಇಲ್ಲ. ಬಿಇಒಗೆ ನೀಡಬಹುದು. ದೂರು ನೀಡಿದರೆ ಅಂತಹ ಶಾಲೆ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಶಿಕ್ಷಣ ಸಚಿವ ಹೇಳಿದರು.

ಇದನ್ನೂ ಓದಿ

Pvt Schools Fees Torcher : ‘ಸಚಿವರು ಖಾಸಗಿ ಶಾಲೆಗಳ ಜತೆ ಶಾಮೀಲಾದಂತೆ ಕಾಣ್ತಿದೆ’

ಮತ್ತೆ ಶುರುವಾಯ್ತು ಖಾಸಗಿ ಶಾಲೆಗಳ ಫೀಸ್ ಟಾರ್ಚರ್; ಪೋಷಕರಿಂದ ಪ್ರತಿಭಟನೆ

(Private educational institutions are wayward for fees)

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್