ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ನಾನಾ ಸಮಸ್ಯೆಗಳು ಹುಟ್ಟಿಕೊಂಡಿವೆ. ಈ ಸಾಲಿಗೆ ರೆಮ್ಡಿಸಿವಿರ್ ಇಂಜೆಕ್ಷನ್ ಅಕ್ರಮ ಮಾರಾಟವೂ ಸೇರಿದೆ. ಹೆಚ್ಚು ಹಣಕ್ಕೆ ಬೇಡಿಕೆಯಿಟ್ಟು ರೆಮ್ಡಿಸಿವಿರ್ ಇಂಜೆಕ್ಷನ್ನ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಈ ಕೃತ್ಯದಲ್ಲಿ ಕೆಲ ಕಡೆ ಆಸ್ಪತ್ರೆ ಸಿಬ್ಬಂದಿಯೂ ಕೈ ಜೋಡಿಸಿತ್ತು. ಅಕ್ರಮ ಮಾರಾಟದ ಬಗ್ಗೆ ಮಾಹಿತಿ ಬೆಳಕಿಗೆ ಬಂದಂತೆ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಆದರೆ ರೆಮ್ಡಿಸಿವಿರ್ ಇಂಜೆಕ್ಷನ್ಗೆ ಇದ್ದಕ್ಕಿದ್ದಂತೆ ಬೇಡಿಕೆ ಕುಸಿದಿದೆ.
ಕೇವಲ 15 ದಿನಗಳಲ್ಲೇ ರೆಮ್ಡಿಸಿವಿರ್ ಇಂಜಕ್ಷನ್ಗೆ ಬೇಡಿಕೆ ಕುಸಿತವಾಗಿದೆ. ಆರೋಗ್ಯ ಇಲಾಖೆ ರೆಮ್ಡಿಸಿವಿರ್ಗೆ ಹೆಲ್ಪ್ಲೈನ್ ಮಾಡಿತ್ತು. ಒಂದೇ ಒಂದು ವಯಲ್ ಕೂಡ ಮಿಸ್ ಆಗದಂತೆ ಬಿಗಿ ಕ್ರಮ ಕೈಗೊಳ್ಳಲಾಗಿತ್ತು. ರೆಮ್ಡಿಸಿವಿರ್ ಕೊರೊನಾಗೆ ಸೂಕ್ತ ಮದ್ದಲ್ಲ ಎಂದು ಸರ್ಕಾರ, ಐಸಿಎಂಆರ್ ಹೇಳಿದೆ. ಹೀಗಾಗಿ ರೆಮ್ಡಿಸಿವಿರ್ ಇಂಜೆಕ್ಷನ್ಗೆ ಬೇಡಿಕೆ ಕಡಿಮೆಯಾಗಿದೆ.
ಸದ್ಯ ರಾಜ್ಯದಲ್ಲಿ 77,059 ರೆಮ್ಡಿಸಿವಿರ್ ವಯಲ್ಸ್ ಇವೆ. ಇಂಜೆಕ್ಷನ್ ಸರಬರಾಜು ಮಾಡಲು ಕಂಪನಿಗಳು ಸಿದ್ಧವಾಗಿವೆ. ಉತ್ಪಾದನೆ ಹೆಚ್ಚಿಸಿ ಸರಬರಾಜಿಗೆ ಸರ್ಕಾರ ಸೂಚನೆ ನೀಡಿತ್ತು. ಆದರೆ ಈಗ ಏಕಾಏಕಿ ರೆಮ್ಡಿಸಿವಿರ್ಗೆ ಬೇಡಿಕೆ ಕುಸಿತವಾಗಿದೆ. ರೆಮ್ಡಿಸಿವಿರ್ ಬಳಕೆ ಅವಧಿ 6 ತಿಂಗಳಿಗೆ ಮುಗಿಯಲಿದೆ. ಹೀಗಾಗಿ ಸ್ಟಾಕ್ ಇದ್ದರೂ ಡಿಮ್ಯಾಂಡ್ ಇಲ್ಲ ಅಂತ ಆರೋಗ್ಯಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ
ಕೊರೊನಾ ವಾರಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಏಳು ತಿಂಗಳ ಗರ್ಭಿಣಿ; ಪಿಎಸ್ಐ ಕರ್ತವ್ಯ ನಿಷ್ಠೆಗೆ ಜನರ ಮೆಚ್ಚುಗೆ
ಕೊರೊನಾ ಓಡಿಸಲು ನೂರಾರು ಕೆಜಿ ಅನ್ನ ಚೆಲ್ಲಿ ಮೌಢ್ಯಾಚರಣೆ, ಯುವಕರ ದೂರಿನ ಪ್ರತಿ ವೈರಲ್!
(demand for Remdesivir injection has fallen)