ಬೆಂಗಳೂರು, (ಫೆಬ್ರವರಿ 15): ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯು (Department of Agriculture and Farmers Welfare) ರಾಷ್ಟ್ರೀಯ ಕೃಷಿ ವಿಕಾಸದ ಅಡಿಯಲ್ಲಿ 2023-24ರ ಸಾಲಿನ 3ನೇ ಕಂತಿನಲ್ಲಿ ಕರ್ನಾಟಕ ಸರ್ಕಾರಕ್ಕೆ 235.14 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಈ ಬಗ್ಗೆ ಇಂದು (ಫೆಬ್ರವರಿ 15) ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಇಂದು(ಫೆಬ್ರವರಿ 15) ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ , ರೈತರ ಕಲ್ಯಾಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸದ ಅಡಿಯಲ್ಲಿ 3ನೇ ಕಂತಿನಲ್ಲಿ ಕರ್ನಾಟಕ್ಕೆ 235.14 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ. ಅಲ್ಲದೇ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯಿಂದ ಇತ್ತೀಚೆಗೆ ಅಂದರೆ 2024ರ ಜನವರಿ 2 ರಂದು ಕರ್ನಾಟಕಕ್ಕೆ 178.65 ಕೋಟಿ ರೂ. ಹೆಚ್ಚುವರಿ ಹಣ ಹಂಚಿಕೆಯಾಗಿದೆ ಎಂದು ತಿಳಿಸಿದರು.
ಈ ಮೊದಲು 583.24 ಕೋಟಿ ರೂ. ಇರುವುದನ್ನು 2023-24ನೇ ಸಾಲಿಗೆ 761.89 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇಲ್ಲಿಯವರೆಗ, ಕೇಂದ್ರ ಸರ್ಕಾರವು ಒಟ್ಟು 761.89 ಕೋಟಿ ರೂ.ಗಳಲ್ಲಿ ಈವರೆಗೆ ಒಟ್ಟು 526.75 ಕೋಟಿ ರೂ. ಬಿಡುಗಡೆ ಮಾಡಿದೆ. ಇನ್ನುಳಿದಂತೆ ಬಾಕಿ ಹಣವನ್ನು ಈಗಾಗಲೇ ರಾಜ್ಯಕ್ಕೆ ನೀಡಲಾಗಿರುವ ಹಣವನ್ನು ಬಳಸಿದ ಬಳಿಕ ಬಿಡುಗಡೆ ಮಾಡಲಿದೆ ಎಂದರು
ಇನ್ನು ಕಡಲೆಯನ್ನು ಬೆಂಬಲ ಬೆಲೆಯಡಿಯಲ್ಲಿ ಖರೀದಿಗೆ ಅನುಮೋದನೆ ನೀಡಲಾಗಿದ್ದು, ಪ್ರತಿ ಕ್ವಿಂಟಾಲ್‌ಗೆ 5440 ರೂ. ಬೆಂಬಲ ಬೆಲೆಯೊಂದಿಗೆ ರಾಜ್ಯ ಸರ್ಕಾರ ಕಡಲೆ ಖರೀದಿಸಬಹುದುಎಂದು ಹೇಳಿದರು.
ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ – RKVY (DPR), ಮಣ್ಣಿನ ಆರೋಗ್ಯ ಮತ್ತು ಫಲವತ್ತತೆ (SH&F), ಮಳೆಯಾಧಾರಿತ ಪ್ರದೇಶ ಅಭಿವೃದ್ಧಿ (RAD), ಪರಂಪರಾಗತ್ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರೀಕರಣದ ಉಪ ಮಿಷನ್ ( SMAM) (6) ಪ್ರತಿ ಡ್ರಾಪ್ ಮೋರ್ ಕ್ರಾಪ್ (PDMC) (7) ಕೃಷಿ ಅರಣ್ಯ & (8) ಬೆಳೆ ವೈವಿಧ್ಯೀಕರಣ ಕಾರ್ಯಕ್ರಮ (CDP). ಮಂಜೂರಾದ ಮೊತ್ತವನ್ನು ಗೋದಾಮು ನಿರ್ಮಾಣ, ನೀರು ಕೊಯ್ಲು ರಚನೆಗಳು, ಪ್ರಾಥಮಿಕ ಪ್ರಾತ್ಯಕ್ಷಿಕೆ ಘಟಕಗಳ ಸ್ಥಾಪನೆ, ಟ್ರಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು ಮತ್ತು ಡ್ರೋನ್‌ಗಳ ಖರೀದಿ, ಸಮಗ್ರ ಕೃಷಿಯ ಉತ್ತೇಜನ, ಮಣ್ಣಿನ ಆರೋಗ್ಯ ಫಲವತ್ತತೆ ಮತ್ತು ಸೆಟ್ಟಿಂಗ್‌ಗಳಿಗೆ ಮೇಲಿನ ಘಟಕಗಳ ಅಡಿಯಲ್ಲಿ ಕೃಷಿ ವಲಯದ ಮೂಲಸೌಕರ್ಯ ಸುಧಾರಣೆಗೆ ಈ ಹಣವನ್ನು ಬಳಸಲಾಗುತ್ತದೆ ಎಂದು ವಿವರಿಸಿದರು.
ರಾಜಕೀಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 pm, Thu, 15 February 24