ಬೆಂಗಳೂರು: ಠೇವಣಿದಾರರ ಕೋಟ್ಯಂತರ ರೂಪಾಯಿ ದುರ್ಬಳಕೆ ಮಾಡಿದ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಠೇವಣಿದಾರರ ಸಂಘ ಮತ್ತು ವೆಲ್ಫೇರ್ ಫೋರಮ್ , ಬಸವನಗುಡಿಯ ನೆಟ್ಕಲ್ಲಪ್ಪ ಮೈದಾನದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಈ ವೇಳೆ ಮಾತನಾಡಿದ ಕೆಲವು ಠೇವಣಿದಾರರು, ಜನವರಿಗೆ ಒಂದು ವರ್ಷ ಆಗುತ್ತೆ. ನಮ್ಮ ಹಣ ಕೈಸೇರುವ ಬಗ್ಗೆ ಭರವಸೆ ಇಲ್ಲ, ಯಾವುದೇ ಪ್ರೊಗ್ರೆಸ್ ಕಾಣುತ್ತಿಲ್ಲ. ಹೀಗಾಗಿ ಶಾಂತಿಯುತ ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ತಮ್ಮ ಖಾತೆಯಲ್ಲಿರುವ ಹಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ ಠೇವಣಿದಾರರು, ಅದರ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ನೀಡಿ ಎಂದು ಆಗ್ರಹಿಸಿದ್ದಾರೆ. ಈ ಹಿಂದೆ ಕೂಡ ಹಲವು ಬಾರಿ ಗುರುರಾಘವೇಂದ್ರ ಸಹಕಾರಿ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಗುರುರಾಘವೇಂದ್ರ ಬ್ಯಾಂಕ್ ಬಹುಕೋಟಿ ಅವ್ಯವಹಾರ ಪ್ರಕರಣ: CID ಕೈಗೆ ಸಿಕ್ಕಿಬಿದ್ದ ಖತರ್ನಾಕ್ಗಳು
ಗುರುರಾಘವೇಂದ್ರ ಬ್ಯಾಂಕ್ ವಂಚನೆ ಕೇಸ್: ಪ್ರಮುಖ ಆರೋಪಿಗಳಿಗೆ ನೆರವಾದವರು ಅರೆಸ್ಟ್
Published On - 12:20 pm, Mon, 21 December 20